ಬಳ್ಳಾರಿ: ಮಹಿಳೆಯರ ಬಗ್ಗೆ ಮಾತನಾಡುವಾಗ ಸಣ್ಣ ಖರ್ಗೆಯವರಿಗೆ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದರು. ನಗರದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಹರ್ ಘರ್ ತ್ರಿವರ್ಣಾ ನಿಮಿತ್ತ 150 ಅಡಿ ಎತ್ತರದ ಧ್ವಜಸ್ತಂಭಕ್ಕೆ ಧ್ವಜಾರೋಹ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಂದೆ ಮಲ್ಲಿಕಾರ್ಜುನ ಖರ್ಗೆಯವರಂತೆ ಸಣ್ಣ ಖರ್ಗೆ ಪ್ರಿಯಾಂಕ್ ಖರ್ಗೆಯವರು ಸಹ ಸಂಸ್ಕಾರವಂತರು ಅಂದುಕೊಂಡು ಸದನದಲ್ಲಿ ಮಾತನಾಡುವಾಗ ಸಣ್ಣ ಖರ್ಗೆ ಎಂದು ಉಲ್ಲೇಖ ಮಾಡುತ್ತಿದ್ದೆ. …
Read More »ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ 75ನೆಯ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ
ಗೋಕಾಕ: ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ತಮ್ಮ ಸುಪುತ್ರ ರಾದ ಚಿ, ಸೂರ್ಯ ಶ್ರೇಷ್ಠ ಅವರ ಜನನ ದ ನಂತರ ಪ್ರತಿ ಶನಿವಾರ ಗೋಕಾಕ, ಅರಭಾವಿ, ಯರಗಟ್ಟಿ, ಸವದತ್ತಿ ಸೇರಿದಂತೆ ವಿವಿಧ ಹಳ್ಳಿ ಗಳಲ್ಲಿ ಪ್ರತಿ ಶನಿವಾರ ಅನ್ನ ಸಂತರ್ಪಣೆ ಮಾಡುವ ಒಂದು ಕಾರ್ಯ ಕ್ರಮವನ್ನು ಮಾಡಿ ಕೊಂಡು ಬಂದಿದ್ದಾರೆ. ಇಂದು ಆ ಒಂದು ಅನ್ನ ಸಂತರ್ಪಣೆ 75ನೆಯ ವಾರಕ್ಕೆ ತಲುಪಿದೆ, ಇನ್ನೊಂದು ವಿಶೇಷ ಎಂದರೆ ಸ್ವತಂತ್ರ ನಮ್ಮ …
Read More »ಮನೆ ಮನೆ ಗಳಿಗೆ ಧ್ವಜ ವಿತರಿಸಿ ಜನರ ಪ್ರೀತಿಯ ಪಾತ್ರಕ್ಕೆ ಮೇರೆ ಆಗಿದ್ದಾರೆ ಬಸವರಾಜ ಸಾಯನ್ನವರ
ಗೋಕಾಕ: ನಾಡಿನಾದ್ಯಂತ ಹರ ಘರ ತಿರಂಗಾ ಅಭಿಯಾನ ಶುರುವಾಗಿದೆ ಗೋಕಾಕ ನಗರದಲ್ಲಿ ಕೂಡ ಮಹಾ ಲಿಂಗೇಶ್ವರ ನಗರದಲ್ಲಿ ವಾರ್ಡ್ ನಂಬರ್ 19ಹಾಗೂ 20ನೆಯ ವಾರ್ಡಿನಲ್ಲಿ ಧ್ವಜ ವಿತರಣೆ ಕಾರ್ಯಕ್ರಮ ಮಾಡಲಾಯಿತು. ಏ ಪೀ ಎಂ ಸಿ ನಿರ್ದೇಶಕರಾದ ಬಸವರಾಜ್ ಸಾಯಿನ್ನವರ ಮನೆ ಮನೆ ಗಳಿಗೆ ಧ್ವಜ ವಿತರಣೆ ಮಾಡಿದರು ಮನೆ ಮನೆ ಗಳಿಗೆ. ಅಗಸ್ಟ್ ಹದಿಮೂರು ರಿಂದ ಹದಿನೈದು ದಿನಾಂಕದ ವರೆಗೆ ಧ್ವಜ ಹಾರಿಸುವ ಕಾರ್ಯಕ್ರಮ ಮಾಡಲಾಗಿದೆ A …
Read More »ನಾಗರಹಾವಿನಿಂದ ಮಗನನ್ನು ರಕ್ಷಿಸಿದ ತಾಯಿ: ವಿಡಿಯೋ ವೈರಲ್
ಮಂಡ್ಯ: ಕ್ಷಣಾರ್ಧದಲ್ಲಿ ನಾಗರಹಾವಿನಿಂದ ಮಗನನ್ನು ತಾಯಿಯೊಬ್ಬಳು ಕಾಪಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತಾಯಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದ್ದೂರಿನ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಸದ್ಯ ಇವರು ಪಟ್ಟಣದ ಕೆಮ್ಮಣ್ಣನಾಲೆ ಸರ್ಕಲ್ ಸಮೀಪ ವಾಸವಾಗಿದ್ದಾರೆ. ವೈದ್ಯರಾಗಿ ಕೆಲಸ ಮಾಡುತ್ತಿರುವ ವಿಷ್ಣುಪ್ರಸಾದ್ ಪುತ್ರ ನಾಗರ ಹಾವಿನ ಕಡಿತದಿಂದ ಬಚಾವಾದ ಬಾಲಕನಾಗಿದ್ದಾನೆ. ಮನೆಯಿಂದ ಹೊರ ಹೋಗಲು ತಾಯಿ ಜೊತೆ ಹೊರ ಬಂದ ಬಾಲಕ ಮನೆಯ ಬಾಗಿಲ ಬಳಿ …
Read More »ಬೆಳಗಾವಿ: ದಕ್ಷಿಣ ಭಾರತದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಹಾರಿದ ತ್ರಿವರ್ಣಧ್ವಜ
ಬೆಳಗಾವಿ: ಇಲ್ಲಿನ ಕೋಟೆ ಕೆರೆಯ ಮೈದಾನದಲ್ಲಿರುವ ದಕ್ಷಿಣ ಭಾರತದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಶನಿವಾರ ಬೆಳಿಗ್ಗೆ ತ್ರಿವರ್ಣಧ್ವಜ ಹಾರಾಡಿತು. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಆಯೋಜಿಸಿದ ಮನೆಮನೆಗೂ ತ್ರಿವರ್ಣಧ್ವಜ ಅಭಿಯಾನದ ಭಾಗವಾಗಿ ಈ ಧ್ವಜಾರೋಹಣ ನೆರವೇರಿತು. ಬಾನಿನತ್ತ ಏರಿದ ಧ್ವಜವು ಗಾಳಿಯಲ್ಲಿ ಪದರುಬಿಚ್ಚಿ ಹಾರುತ್ತಿದ್ದಂತೆಯೇ ಕೆಳಗೆ ನಿಂತವರಲ್ಲಿ ರೋಮಾಂಚನ ಉಂಟಾಯಿತು. ಭಾರತ ಮಾತಾ ಕಿ ಜೈ, ವಂದೇ ಮಾತರಂ, ಮಾತಾಮಾತಾ ಭಾರತ ಮಾತಾ, ಜೈ ಜವಾನ್ …
Read More »ಬೆಂಗಳೂರಿನ ಉದ್ಯಮಿಗೆ ಹನಿಟ್ರ್ಯಾಪ್: ಸ್ಯಾಂಡಲ್ವುಡ್ನ ಯುವ ನಟ ಬಂಧನ
ಬೆಂಗಳೂರು: ಹನಿಟ್ರ್ಯಾಪ್ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟರೊಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟ ಯುವರಾಜ್ ಬಂಧಿತ. ‘ಮಿಸ್ಟರ್ ಭೀಮರಾವ್’ ಸಿನಿಮಾ ನಾಯಕ ಯುವರಾಜ್, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಬ್ಬರಿಗೆ ಇಬ್ಬರು ಯುವತಿಯರ ಹೆಸರಲ್ಲಿ ಚಾಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಸಿದ್ದ ಆರೋಪ ಕೇಳಿಬಂದಿದೆ. ಉದ್ಯಮಿ ಕೊಟ್ಟ ದೂರಿನ ಮೇರೆಗೆ ನಟನನ್ನು ಬಂಧಿಸಲಾಗಿದೆ. ಉದ್ಯಮಿಯೊಬ್ಬರಿಗೆ ಇತ್ತೀಚೆಗೆ ಇಬ್ಬರು ಯುವತಿಯರು ಪರಿಚಯ ಆಗಿದ್ದರು. ಅವರ ಹೆಸರನ್ನು ಬಳಸಿಕೊಂಡು ಉದ್ಯಮಿಗೆ ಯುವರಾಜ್ …
Read More »ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ್-ಬಿರಂಗಿ ಬಗ್ಗೆ ದಂತಕತೆಗಳು ಮಾತ್ರವಲ್ಲ, ಗುಪ್ತ ಸಿಡಿಗಳೂ ಇವೆ!
ಬೆಂಗಳೂರು: ‘ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉದ್ಯೋಗ ಪಡೆಯಬೇಕು ಎಂದರೆ ಯುವತಿಯರು ಮಂಚ ಹತ್ತಬೇಕಾಗಿದೆ’ ಎಂದಿದ್ದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಕಾಂಗ್ರೆಸ್ ಮಹಿಳಾ ವಿರೋಧಿ ಎಂದೂ ದೂರಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ್-ಬಿರಂಗಿ ಬಗ್ಗೆ ಸಾಕಷ್ಟು ದಂತಕತೆಗಳು ಮಾತ್ರವಲ್ಲ, ಗುಪ್ತಸಿಡಿಗಳೂ ಇವೆ. ಜೂನಿಯರ್ ಖರ್ಗೆ ಅವರೇ, ಸಭ್ಯಸ್ಥರ ಮುಖವಾಡ ಹಾಕಿ ಸಮಾಜದ ಕಣ್ಣಿಗೆ ಗಣ್ಯರೆಂದು ಬಿಂಬಿಸಿಕೊಂಡ …
Read More »ರಾಜ್ಯದ 6 ಪೊಲೀಸರಿಗೆ ಕೇಂದ್ರ ಗೃಹ ಸಚಿವರ ಪದಕ
ನವದೆಹಲಿ; ಅತ್ಯುತ್ತಮ ತನಿಖೆ ನಡೆಸಿದ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಸೇರಿದಂತೆ ದೇಶದ 151 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪ್ರಶಸ್ತಿ ಲಭ್ಯವಾಗಿದೆ. ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ರಾಜ್ಯದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಲಕ್ಷ್ಮಿ ಗಣೇಶ್ ಕೆ, ಡಿವೈಎಸ್ ಪಿಗಳಾದ ವೆಂಕಟಪ್ಪ ನಾಯಕ, ಮೈಸೂರು ರಾಜೇಂದ್ರ ಗೌತಮ್, ಶಂಕರ್ ಕಾಳಪ್ಪ ಮಾರಿಹಾಳ್, ಶಂಕರಗೌಡ ವೀರಣ್ಣಗೌಡ ಪಾಟೀಲ್, ಸರ್ಕಲ್ ಇನ್ಸ್ ಪೆಕ್ಟರ್ ಗುರುಬಸವರಾಜ್, ಹೆಚ್. ಹಿರೇಗೌಡರ್ ಅವರುಗಳಿಗೆ ಕೇಂದ್ರ ಗೃಹ …
Read More »₹20ಗಾಗಿ ಕೋರ್ಟ್ ಮೆಟ್ಟಿಲೇರಿದ್ದ ವಕೀಲ: 22 ವರ್ಷಗಳ ಹೋರಾಟದ ಬಳಿಕ ದೊರೆತ ಜಯ
ನವದೆಹಲಿ: ಭಾರತೀಯ ರೈಲ್ವೆಯು ₹20 ಹೆಚ್ಚುವರಿ ಶುಲ್ಕ ವಿಧಿಸಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ವಕೀಲರೊಬ್ಬರು 22 ವರ್ಷಗಳ ಕಾನೂನು ಹೋರಾಟದ ಬಳಿಕ ಪ್ರಕರಣದಲ್ಲಿ ಜಯ ಸಾಧಿಸಿದ್ದಾರೆ. 1999ರಲ್ಲಿ ತಾರಾನಾಥ ಚತುರ್ವೇದಿ ಅವರು ಮಥುರಾದಿಂದ ಮೊರಾದಾಬಾದ್‌ಗೆ ಎರಡು ಟಿಕೆಟ್ ಪಡೆದಿದ್ದರು. ₹70 ಬದಲಾಗಿ ₹90 ಶುಲ್ಕ ಪಡೆಯಲಾಗಿತ್ತು. ರಸೀದಿ ನೀಡಿದರೂ ಅಧಿಕಾರಿಗಳು ಹೆಚ್ಚುವರಿ ಶುಲ್ಕ ವಾಪಸ್ ನೀಡಿರಲಿಲ್ಲ. ಹೀಗಾಗಿ ತಾರಾನಾಥ್ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ಮಥುರಾ ಗ್ರಾಹಕ ನ್ಯಾಯಾಲಯವು ಎರಡು …
Read More »ಬಳ್ಳಾರಿಯಲ್ಲಿ ವ್ಯಕ್ತಿ ಮೇಲೆ ಹಲ್ಲೆ, ಪಿಎಸ್ ಐ ಅಮಾನತು, ಇಲಾಖಾ ತನಿಖೆಗೆ ಆದೇಶ
ಹುಬ್ಬಳ್ಳಿ: ವ್ಯಕ್ತಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆ ಕುರುಗೋಡು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಪೊಲೀಸ್ ಅಧಿಕಾರಿ ಮಣಿಕಂಠ ವ್ಯಕ್ತಿಯೊಬ್ಬರನ್ನು ಥಳಿಸುವ ವಿಡಿಯೋ ವೈರಲ್ ಆಗಿತ್ತು. ಇದರಿಂದಾಗಿ ಹಿರಿಯ ಅಧಿಕಾರಿಗಳು ಆತನನ್ನು ಅಮಾನತು ಮಾಡಿದ್ದಾರೆ.ಯಾವುದೇ ಕಾರಣವಿಲ್ಲದೆ ಗಂಗಾಧರ ಎಂಬ ವ್ಯಕ್ತಿಯ ಮೇಲೆ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ ನಂತರ ಅಲ್ಲಿನ ನಿವಾಸಿಗಳು ಅಧಿಕಾರಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪಿಎಸ್ …
Read More »