ನವದೆಹಲಿ: ಒಂದಲ್ಲ ಎರಡಲ್ಲ ಬರೋಬ್ಬರಿ 5 ಕೋಟಿ ತಿರಂಗ ಸೆಲ್ಫಿ! ಇದು ಕೇಂದ್ರ ಸಂಸ್ಕೃತಿ ಸಚಿವಾಲಯವೇ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ, ಅದರ ಜತೆಗೆ ಸೆಲ್ಫಿ ತೆಗೆದುಕೊಂಡು ಹರ್‌ಘರ್ ತಿರಂಗ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಮನವಿ ಮಾಡಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಸೋಮವಾರ ಸಂಜೆ 4ಗಂಟೆ ವೇಳೆಗೆ 5 ಕೋಟಿಗೂ ಹೆಚ್ಚು ತಿರಂಗ ಸೆಲ್ಫಿಗಳನ್ನು ಜನರು ಅಪ್‌ಲೋಡ್ ಮಾಡಿದ್ದಾರೆ. …
Read More »ಚಿವರು ಎಚ್ಚರಿಕೆಯಿಂದ ಮಾತಾಡಲಿ: ಸಿ.ಟಿ.ರವಿ
ಸರಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುವ ಜವಾಬ್ದಾರಿ ಹಿರಿಯ ಸಚಿವರ ಮೇಲಿದೆ. ನಮ್ಮ ಬದ್ಧತೆ ರಾಜ್ಯದ ಜನತೆಗೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಚಿವರು ಎಚ್ಚರಿಕೆಯಿಂದ ಮಾತನಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಟಿ. ಸೋಮಶೇಖರ್ ಸಹಿತ ಯಾವುದೇ ಸಚಿವರು ಬಾಲಿಶವಾಗಿ ಮಾತನಾಡಿ ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತೆ ಮಾಡಬಾರದು. ಟಿಪ್ಪು ಬ್ಯಾನರ್ ಹರಿದವರನ್ನು ಮತ್ತು ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ತೆಗೆಸಿ ಅವಮಾನಿಸಿದವರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇಂಥ …
Read More »ಅಪ್ಪನ ಸಮಾಧಿ ಮುಂದೆ ರಾಷ್ಟ್ರಗೀತೆ ನುಡಿಸಿ ಸ್ವಾತಂತ್ರ್ಯ ದಿನ ಆಚರಿಸಿದ ಸೈನಿಕನ ಪುತ್ರಿ
ಚಾಮರಾಜನಗರ: ಯಳಂದೂರು ತಾಲೂಕಿನ ಮಲಾರಪಾಳ್ಯದಲ್ಲಿ ನಿವೃತ್ತ ಸೈನಿಕ ನವೀನ್ ಅವರ ಸ್ಮಾರಕದ ಮುಂದೆ 9 ವರ್ಷದ ಪುತ್ರಿ ಹನಿ ಎಂಬಾಕೆ ಕೊಳಲಿನ ಮೂಲಕ ರಾಷ್ಟ್ರಗೀತೆ ನುಡಿಸಿ ಸ್ವಾತಂತ್ರ್ಯ ದಿನಾಚರಿಸಿದ್ದಾಳೆ. ಮಗಳ ಜೊತೆ ತಾಯಿ ಭವ್ಯಾ ಇದ್ದರು. ನವೀನ್ ಅವರು ಅಪಘಾತದಲ್ಲಿ ಅಸುನೀಗಿದ್ದರು. ಪ್ರತೀ ವರ್ಷ ಸ್ವಾತಂತ್ರ್ಯ ದಿನದಂದು ಈ ಕುಟುಂಬ ವಿಶೇಷ ನಮನ ಸಲ್ಲಿಸುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಗೌಡಹಳ್ಳಿ ಗ್ರಾ.ಪಂ ಸಿಬ್ಬಂದಿ, ಯುವಕರು ಭಾಗಿಯಾಗಿದ್ದರು.
Read More »ಶಾಸಕ ಅಭಯ ಪಾಟೀಲ್ ವಿರುದ್ಧ ಪರೋಕ್ಷ ಕಿಡಿ ಕಾರಿದ :ಕಾರಜೋಳ
ಚಿರತೆ ಪತ್ತೆಗೆ ಮುಧೋಳ ನಾಯಿ ತರೋಣ: ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ನಗರದಲ್ಲಿ ಪ್ರತ್ಯೇಕ್ಷವಾಗಿರುವ ಚಿರತೆ ಸೆರೆ ಹಿಡಿಯಲು 8 ಕಡೆಗಳಲ್ಲಿ ಬೋನ್ ಇಟ್ಟು ಕಾಯುತ್ತಿದ್ದಾರೆ. 50 ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ತಜ್ಞರನ್ನು ಸಹ ನೇಮಕ ಮಾಡಿದೆ. ಇಷ್ಟಕ್ಕೂ ಸೆರೆ ಸಿಗದಿದ್ದರೇ ಮುಧೋಳ ನಾಯಿಯನ್ನು ತಂದು ಚಿರತೆ ಸೆರೆ ಹಿಡಿಯಲಾಗುವುದು ಎಂದರು. ಶಾಸಕ ಅಭಯ ಪಾಟೀಲ್ ವಿರುದ್ಧ ಪರೋಕ್ಷ ಕಿಡಿ ಜಿಲ್ಲಾ ಉಸ್ತುವಾರಿ …
Read More »ವಿಟಿಯು “ಜ್ಞಾನ ಸಂಗಮ”ದಲ್ಲಿ ಗಮನ ಸೆಳೆದ 100 ಮೀಟರ್ ತಿರಂಗಾ ರ್ಯಾಲಿ
ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ “ಜ್ಞಾನ ಸಂಗಮ”ದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 76ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ವಿ ತಾ ವಿ ಯ ಕುಲಪತಿಗಳಾದ ಪ್ರೋ. ಕರಿಸಿದ್ದಪ್ಪ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಲ್ ದೀಪಕ ಕುಮಾರ ಗುರುಂಗ ಆಗಮಿಸಿದ್ದರು. ಧ್ವಜಾರೋಹಣ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಕರ್ನಲ್ ದೀಪಕ ಗುರುಂಗ, ಕನ್ನಡ ನಾಡನ್ನು ಆಳಿದ ರಾಜಮನೆತನಗಳ ಕೊಡುಗೆಗಳನ್ನು, ಸಂಗೀತ, …
Read More »ಕಣ್ಮನ ಸೆಳೆದ ವಿದ್ಯಾರ್ಥಿಗಳು ಸೃಷ್ಟಿಸಿದ ನಕ್ಷೆ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸೊರಬ ಸಮೀಪದ ಜಡೆ ಗ್ರಾಮ ಪಂಚಾಯಿತಿಯಿಂದ ಆಯೋಜಿಸಲಾಗಿದ್ದ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆ ಸೇರಿ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಏಕಕಾಲಕ್ಕೆ ರಾಷ್ಟ್ರಗೀತೆ ಹಾಡುವ ಮೂಲಕ ಭಾರತ ಮಾತೆಗೆ ವಿಶೇಷ ಗೌರವ ಸಲ್ಲಿಸಿದರು. ಭಾರತದ ನಕ್ಷೆ ಹೋಲುವಂತೆ 1,200 ವಿದ್ಯಾರ್ಥಿಗಳನ್ನು ನಿಲ್ಲಿಸಲಾಗಿದ್ದು, ಕೇಸರಿ, ಬಿಳಿ ಹಾಗೂ ಹಸಿರು ಟೋಪಿ ಧರಿಸಿ ರಾಷ್ಟ್ರಗೀತೆ ಹಾಡಿರುವುದನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ …
Read More ». ಸುವರ್ಣಸೌಧ ಕೇವಲ ಜಿಲ್ಲಾಮಟ್ಟದ ಕಚೇರಿಗೆ ಸೀಮಿತ, ಪತ್ರಕರ್ತರಿಗೂ ನಿಷೇಧ: ಅವಕಾಶ ನೀಡದ ಜಿಲ್ಲಾಡಳಿತದ ನಡೆಗೆ ವಿರೋಧ ವ್ಯಕ್ತ
ಬೆಳಗಾವಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಬೆಳಗಾವಿ ಜಿಲ್ಲಾಡಳಿತ ಸುವರ್ಣಸೌಧಕ್ಕೆ ಕೆಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ದೀಪಾಲಂಕಾರ ಮಾಡಿದ್ದು, ಸುವರ್ಣಸೌಧ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಳಗಾವಿ ತಾಲೂಕಿನ ಹಲಗಾ – ಬಸ್ತವಾಡ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ವಿಧಾನಸೌಧ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಸುವರ್ಣಸೌಧವನ್ನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ ಆಂತರಿಕ ಭದ್ರತೆ ನೆಪವೊಡ್ಡಿ …
Read More »ವಿಜಯಪುರ: ಶಿವಲಿಂಗದಲ್ಲಿ ಅರಳಿದ ರಾಷ್ಟ್ರಧ್ವಜ
ವಿಜಯಪುರ: ದೇವಸ್ಥಾನದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ವಿಜಯಪುರದಲ್ಲಿ ಶಿವಲಿಂಗದಲ್ಲೂ ರಾಷ್ಟ್ರಾಭಿಮಾನ ಮೆರೆಯಲಾಗಿದೆ. ವಿಜಯಪುರದ ಜಾಡರ ಗಲ್ಲಿಯಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಲಿಂಗಕ್ಕೆ ರಾಷ್ಟ್ರಧ್ವಜದ ಅಲಂಕಾರ ಮಾಡಿ ಸಂಭ್ರಮಿಸಲಾಯಿತು. ಮಲ್ಲಿಕಾರ್ಜುನ ದೇವಸ್ಥಾನದ ಪೂಜಾರಿ ಈರಯ್ಯ ಸ್ವಾಮಿ ಹಾಗೂ ಸ್ಥಳೀಯರಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
Read More »ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿ.ಕೆ.ಶಿ.
ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಿದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ಪಾದಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಿರುವ ಸ್ವಾತಂತ್ರ್ಯ ನಡಿಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ನಡೆಯಲಿದೆ. ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್,ಡಿ,ಕೆ.ಸುರೇಶ್,ಜಮೀರ್ ಅಹ್ಮದ್, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಚೆನ್ನರಾಜ ಹಟ್ಟಿಹೊಳಿ ಸೇರಿದಂತೆ …
Read More »ರಾಷ್ಟ್ರದ ಉನ್ನತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅನನ್ಯ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
*ಬೆಂಗಳೂರು* : ರಾಷ್ಟ್ರದ ಉನ್ನತಿ ಮತ್ತು ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅನನ್ಯವಾಗಿದ್ದು, ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಇಡೀ ಪ್ರಪಂಚವೇ ನಮ್ಮತ್ತ ತಿರುಗಿ ನೋಡುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಇಲ್ಲಿಯ ಕೆಎಂಎಫ್ ಕೇಂದ್ರ ಕಛೇರಿಯಲ್ಲಿ ಜರುಗಿದ 76ನೇ ಸ್ವಾತಂತ್ರ್ಯ ವರ್ಷದ ಆಜಾದಿ ಕಾ ಅಮೃತ್ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿಗಳ …
Read More »