Breaking News

ಪ್ರಶ್ನೆಪತ್ರಿಕೆ ಸೋರಿಕೆ ಮಾಡದೇ ಒಎಂಆರ್ ಶೀಟ್ ತಿದ್ದಲು ಸಂಚು!; ಪಿಎಸ್​​ಐ ನೇಮಕಾತಿ ಅಕ್ರಮ ಪ್ರಕರಣ

ಬೆಂಗಳೂರು :ಪೊಲೀಸ್ ಸಬ್​ಇನ್​ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ವೇಳೆ ಕೇಂದ್ರ ಸ್ಥಾನದಿಂದಲೇ ಪ್ರಶ್ನೆಪತ್ರಿಕೆ ಲೀಕ್ ಮಾಡಲು ಪ್ಲಾಯನ್ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಭಯದಿಂದ ಪ್ಲಾಯನ್-ಬಿ ಒಎಂಆರ್ ಶೀಟ್ ತಿದ್ದುವುದನ್ನು ಫೈನಲ್ ಮಾಡಲಾಗಿತ್ತು.   ಪೊಲೀಸ್ ನೇಮಕಾತಿ ವಿಭಾಗದ ಹಿಂದಿನ ಎಡಿಜಿಪಿ ಅಮೃತ್ ಪೌಲ್ ಮತ್ತು ಡಿವೈಎಸ್​ಪಿ ಶಾಂತಕುಮಾರ್ ನಡುವೆಯೇ ಪ್ಲ್ಯಾನ್​-ಎ ಮತ್ತು ಬಿ ಬಗ್ಗೆ ರಹಸ್ಯ ಚರ್ಚೆ ನಡೆದಿತ್ತು. ಆನಂತರ ಉಳಿದವರನ್ನು ಅವರ ಕೆಲಸಕ್ಕೆ ತಕ್ಕಂತೆ ಕಮಿಷನ್ …

Read More »

2024ರ ಲೋಕಸಭಾ ಚುನಾವಣೆ: ನರೇಂದ್ರ ಮೋದಿ Vs ಯಾರು?

2024ರ ಲೋಕಸಭಾ ಚುನಾವಣೆಗೆ 2 ವರ್ಷಗಳಷ್ಟೇ ಬಾಕಿ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಕಡಿದುಕೊಂಡ ಬಳಿಕ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಹೆಸರೇ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಇದನ್ನು ಆರ್‌ಜೆಡಿಯ ತೇಜಸ್ವಿ ಯಾದವ್‌ ಈಚೆಗೆ ಅನುಮೋದಿಸಿದ್ದರು. ಇನ್ನು, ದೆಹಲಿ ಸಿಎಂ ಕೇಜ್ರಿವಾಲ್‌ ಮುಂದಿನ ಪಿಎಂಬ ಅಭ್ಯರ್ಥಿ ಎಂದು ಅಲ್ಲಿನ ಉಪಮುಖ್ಯಮಂತ್ರಿ ಸಿಸೊಡಿಯಾ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. …

Read More »

ಬಿಪಿಎಲ್ ಕುಟುಂಬಗಳಿಗೆ ಬಿಗ್ ಶಾಕ್: ‘ಅನ್ನಭಾಗ್ಯ’ದ 5 ಕೆಜಿ ಅಕ್ಕಿ ಕಡಿತ ಸಾಧ್ಯತೆ

ಬೆಂಗಳೂರು: ಬಿಪಿಎಲ್ ಕುಟುಂಬಗಳ ಅನ್ನಭಾಗ್ಯ ಯೋಜನೆ ಅಕ್ಕಿ ಪ್ರಮಾಣ ಕಡಿತವಾಗುವ ಸಾಧ್ಯತೆ ಇದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಆಹಾರಧಾನ್ಯವನ್ನು ಸೆಪ್ಟಂಬರ್ ವರೆಗೆ ವಿತರಿಸಲಾಗುವುದು. ಸೆಪ್ಟೆಂಬರ್ ಗೆ ಅವಧಿ ಮುಗಿಯುವ ಕಾರಣ ಬಿಪಿಎಲ್ ಕುಟುಂಬದ ತಲಾ ಸದಸ್ಯರಿಗೆ 5 ಕೆಜಿ ಅಕ್ಕಿ ಕಡಿತವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಬಡವರಿಗೆ ಆಹಾರ ಭದ್ರತೆ …

Read More »

ಹೆಚ್ಚು ಸಾಲ’ದಲ್ಲಿ ಅದಾನಿ ಸಮೂಹ: ಕ್ರೆಡಿಟ್‌ಸೈಟ್ಸ್‌ ಎಚ್ಚರಿಕೆ

ನವದೆಹಲಿ: ದೇಶದ ಅತ್ಯಂತ ಶ್ರೀಮಂತ, ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಸಮೂಹವು ‘ಹೆಚ್ಚು ಸಾಲದಲ್ಲಿದೆ’ ಎಂದು ಫಿಚ್ ಸಮೂಹದ ಅಂಗಸಂಸ್ಥೆ ಕ್ರೆಡಿಟ್‌ಸೈಟ್ಸ್‌ ವರದಿ ಹೇಳಿದೆ. ಸಮೂಹವು ಹಾಲಿ ಹಾಗೂ ಹೊಸ ವಹಿವಾಟುಗಳಿಗೆ ಹೂಡಿಕೆ ಮಾಡಲು ಸಾಲವನ್ನು ಮುಖ್ಯವಾಗಿ ಬಳಸುತ್ತಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.   ‘ಹೆಚ್ಚು ಮಹತ್ವಾಕಾಂಕ್ಷೆಯ, ಸಾಲದ ಹಣದಲ್ಲಿ ನಡೆಯುವ ಬೆಳವಣಿಗೆ ಯೋಜನೆಗಳು ಕಾಲಕ್ರಮೇಣ ಭಾರಿ ಸಾಲದ ಸುಳಿಗೆ ಸಿಲುಕಬಹುದು. ಅತ್ಯಂತ ನಕಾರಾತ್ಮಕ ಸಂದರ್ಭದಲ್ಲಿ ಮಾತ್ರ …

Read More »

ರಾಜ್ಯದ ವಿವಿಧೆಡೆ ಎರಡು ದಿನ ಮಳೆ

ಬೆಂಗಳೂರು: ಕರಾವಳಿಯ ಬಹುತೇಕ ಕಡೆ ಬುಧವಾರ ಹಾಗೂ ಗುರುವಾರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹಲವು ಕಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗ ಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆ ಎರಡು ದಿನಗಳು ಭಾರಿ ಮಳೆಯಾ ಗಲಿದೆ. ಕರಾವಳಿ ತೀರದಲ್ಲಿ ಬಿರು ಗಾಳಿಯ …

Read More »

10 ರೂಪಾಯಿ ನಾಣ್ಯ ಚಾಲ್ತಿಯಲ್ಲಿದೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ:   ಹತ್ತು ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಭಾರತೀಯ ರಿಜರ್ವ್ ಬ್ಯಾಂಕು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಸಾರ್ವಜನಿಕರು‌ ಹಾಗೂ ವ್ಯಾಪಾರಸ್ಥರು ಮುಕ್ತವಾಗಿ ಇವುಗಳನ್ನು ಚಲಾವಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕೆಲವೆಡೆ ಹತ್ತು ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಕೆಲವು ವರ್ತಕರು-ವ್ಯಾಪಾರಸ್ಥರು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳಿವೆ. ಆದರೆ ಈ ನಾಣ್ಯಗಳು ಚಲಾವಣೆಯಲ್ಲಿರುತ್ತವೆ ಎಂದು ನವೆಂಬರ್ 20, 2016 ರಂದು ಭಾರತೀಯ ರಿಜರ್ವ್ ಬ್ಯಾಂಕು ಸ್ಪಷ್ಟಪಡಿಸಿದ್ದು, ಈ ಕುರಿತು …

Read More »

ರಾತ್ರಿ ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದಅನಾಮದೇಯ ಪತ್ರ; FIR ದಾಖಲಿಸಿದ ಪೊಲೀಸರು

ಶಿವಮೊಗ್ಗ – ಈಚೆಗಷ್ಟೆ ಕೋಮುಗಲಭೆಯಿಂದ ತತ್ತರಿಸಿರುವ ಶಿವಮೊಗ್ಗ ನಗರ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದಿದೆ. ದೇವಸ್ಥಾನವೊಂದರ ಕಟ್ಟೆಯ ಮೇಲೆ ಸಿಕ್ಕಿರುವ ಅನಾಮದೇಯ ಪತ್ರವೊಂದು ಜನರನ್ನು ಮಲಗದಂತೆ ಮಾಡಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮುವರನ್ನು ಕೊಲೆಗೈಯಲು ಸಂಚು ರೂಪಿಸಲಾಗಿದೆ ಎನ್ನುವ ಆಘಾತಕಾರಿ ಅಂಶವನ್ನು ಹೊತ್ತ ಪತ್ರವೊದು ಪೊಲೀಸರ ಕೈ ಸೇರಿದ್ದು, ಎಫ್ಐಆರ್ ದಾಖಲಾಗಿದೆ.   ಗಾಂಧಿ ಬಜಾರದ ಗಂಗಾ ಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿ ಮಾಲೀಕರೊಬ್ಬರು  ಅಂಗಡಿ ಬಂದ್ ಮಾಡುವ ವೇಳೆ  …

Read More »

ಬೆಳಗಾವಿ: ಜಿಲ್ಲಾ ವಿಭಜನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಸರಿಸುಮಾರು 30 ವರ್ಷ.

ಬೆಳಗಾವಿ: ಜಿಲ್ಲಾ ವಿಭಜನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಸರಿಸುಮಾರು 30 ವರ್ಷ. ಇನ್ನೊಂದೆಡೆ ಈ ವಿಭಜನೆ ವಿರೋಧಿಸಿ ನಡೆದ ಪ್ರತಿಭಟನೆಗೆ ಆ.22ಕ್ಕೆ ಬರೋಬ್ಬರಿ 25 ವರ್ಷ. ಇದು ಗಡಿ ಜಿಲ್ಲೆ ಬೆಳಗಾವಿ ವಿಭಜನೆ ಹಾಗೂ ಅದಕ್ಕಾಗಿ ನಡೆದಿರುವ ಪರ ಮತ್ತು ವಿರೋಧದ ಹೋರಾಟಗಳ ಕಥೆ. ಎರಡೂವರೆ ದಶಕಗಳ ಈ ಅವಧಿಯಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಸರ್ಕಾರಗಳು ಬದಲಾಗಿವೆ. ಹೋರಾಟಗಾರರು ಬದಲಾಗಿದ್ದಾರೆ. ಇದಕ್ಕಾಗಿ ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ. ಹಲವಾರು ಸಚಿವರು ಮತ್ತು ಶಾಸಕರು ಬಂದು …

Read More »

24 ಗಂಟೆಯಲ್ಲಿಯೇ ಅನುಕಂಪ ಆಧಾರದ ನೌಕರಿ; ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ : ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ‌ಪ್ರಥಮ ದರ್ಜೆ ಸಹಾಯಕರೊಬ್ಬರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದರಿಂದ ಅವರ ಅವಲಂಬಿತ ಕಿರಿಯ ಸಹೋದರನಿಗೆ ಕೇವಲ 24 ಗಂಟೆಯಲ್ಲಿ ಅನುಕಂಪ ಆಧಾರಿತ ನೇರ ನೇಮಕಾತಿ ಆದೇಶ ನೀಡುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಳಕಳಿಯನ್ನು ಮೆರೆದಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಚಿನ್ ಮಹಾದೇವ ಬಾದುಲೆ ಅವರು ದಿನಾಂಕ ಆಗಸ್ಟ್ 22 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು. …

Read More »

ಚಿರತೆ ಸೆರೆಗೆ ಬೆಳಗಾವಿಯತ್ತ ಜೋಡಿ ಆನೆ

ಬೆಳಗಾವಿ: ನಗರದ ಗಾಲ್ಫ್‌ ಮೈದಾನದಲ್ಲಿ ಅವಿತುಕೊಂಡ ಚಿರತೆ ಸೆರೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್‌ ಶಿಬಿರದಿಂದ ಎರಡು ಆನೆಗಳನ್ನು ಕರೆಸಲಾಗುತ್ತಿದೆ. ಮಂಗಳವಾರ ಬೆಳಿಗ್ಗೆಯೇ ಎರಡು ಆನೆ ಹಾಗೂ ಎಂಟು ಪರಿಣತ ಸಿಬ್ಬಂದಿಯ ತಂಡ ಬೆಳಗಾವಿಯತ್ತ ಹೊರಟಿದೆ.   ಸಕ್ರೆಬೈಲ್‌ ಆನೆ ತರಬೇತಿ ಕ್ಯಾಂಪಿನಲ್ಲಿದ್ದ 20 ವರ್ಷ ವಯಸ್ಸಿನ ಅರ್ಜುನ ಹಾಗೂ 14 ವರ್ಷ ಪ್ರಾಯದ ಆಲೆ ಎಂಬ ಆನೆಗಳನ್ನು ಕರೆಸಲಾಗುತ್ತಿದೆ. ಈ ಎರಡೂ ಆನೆಗಳು ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿವೆ. …

Read More »