ಹಾವೇರಿ: ರಟ್ಟೀಹಳ್ಳಿಯಲ್ಲಿ ಆರ್ಎಸ್ಎಸ್ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿದೆ. ಇದು ಬಾರಿ ರಾಷ್ಟ್ರಭಕ್ತಿಯ ಬಗ್ಗೆ ಜಾಗೃತಿ ಮೂಡಿಸೋ ವ್ಯಕ್ತಿ ನಿರ್ಮಾಣದ ಶಿಬಿರ. ಅ.11 ರಾತ್ರಿ 5 ಜನ ಆರ್ಎಸ್ಎಸ್ ಕಾರ್ಯಕರ್ತರು ಪಥಸಂಚಲನದ ಮಾರ್ಗ ವೀಕ್ಷಣೆಗೆ ಹೋಗಿದ್ದರು. ಈ ವೇಳೆ ಅನ್ಯಕೋಮಿನ ಗೂಂಡಾಗಳು ಹಲ್ಲೆ ಮಾಡಿದ್ದರು. ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸ್ತೇನೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಸಹಿಸಲು ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಕಾರ್ಯಕರ್ತರ ಮೇಲೆ ವಿನಾಕಾರಣ …
Read More »ಶಾಲೆ ಬಳಿ ಗೂಡು ಕಟ್ಟಿದ್ದ ಹೆಜ್ಜೇನು; 50ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ದಾವಣಗೆರೆ: ಶಾಲೆಯೊಂದರ ಪ್ರವೇಶ ದ್ವಾರದಲ್ಲೇ ಹೆಜ್ಜೇನು ಗೂಡು ಕಟ್ಟಿದ್ದು, ಶಾಲೆಯ 50ಕ್ಕೂ ಹೆಚ್ಚು ಮಕ್ಕಳನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ದಾವಣಗೆರೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಹರಿಹರ ತಾಲೂಕು ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ ಪ್ರವೇಶ ದ್ವಾರದಲ್ಲಿ ಗುರುವಾರ ಸಂಜೆ ಹೆಜ್ಜೇನುಗಳು ಗೂಡು ಕಟ್ಟಿದ್ದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆತಂಕಕ್ಕೆ ಒಳಗಾದರು. ಈ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ದಾವಣಗೆರೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 50ಕ್ಕೂ …
Read More »ನಿವೃತ್ತ ಯೋಧರಿಗೆ ಕೃಷಿ ಕಾಯಕ: ಜವಾನ್ ಕಿಸಾನ್ ಯೋಜನೆ
ಬೆಂಗಳೂರುದೇಶದ ಗಡಿ ಭಾಗಗಳಲ್ಲಿ ಬಂದೂಕು ಹಿಡಿದು ಕಾವಲು ಕಾಯುವ ಸೈನಿಕರನ್ನು ಅವರ ಸೇವಾ ನಿವೃತ್ತಿ ನಂತರ ಕೃಷಿಯತ್ತ ಸೆಳೆಯಲು ಕೇಂದ್ರ ಸರ್ಕಾರ ‘ಜವಾನ್ ಕಿಸಾನ್’ ಯೋಜನೆ ಜಾರಿಗೆ ನಿರ್ಧರಿಸಿದೆ. ಈಗ ಕೃಷಿಯಿಂದ ವಿಮುಖವಾಗುವವರ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಹಳ್ಳಿಯ ರೈತರು ಪಟ್ಟಣ ಸೇರಿ ಬೇರೆ ಉದ್ಯೋಗ ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆ ಮಧ್ಯೆಯೇ ನಿವೃತ್ತ ಸೈನಿಕರನ್ನು ಕೃಷಿ ಉದ್ಯಮದಾರರನ್ನಾಗಿಸಲು ವಿನೂತನ ಪ್ರಯತ್ನಕ್ಕೆ ರಕ್ಷಣಾ ಇಲಾಖೆ ಮುಂದಾಗಿದೆ. …
Read More »ಶಿಕ್ಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ರಾಜ್ಯದ ಶಾಲೆಗಳಿಗೆ ಅ. 31 ರವರೆಗೂ ದಸರಾ ರಜೆ ವಿಸ್ತರಣೆ.?
ಬೆಂಗಳೂರು : ನಾಡಹಬ್ಬ ದಸರಾ ಹಿನ್ನೆಲೆ ರಾಜ್ಯದ ಶಾಲೆಗಳಿಗೆ ಅ.16 ರವರೆಗೆ ದಸರಾ ರಜೆ ನೀಡಲಾಗಿದೆ.ಇದೀಗ ದಸರಾ ರಜೆಯನ್ನು ಅ. 31ರವರೆಗೆ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಭಾರೀ ಒತ್ತಡಗಳು ಬರುತ್ತಿದೆ . ಬೇಸಿಗೆ ರಜೆಯಲ್ಲಿ 15 ದಿನ ಹಾಗೂ ದಸರಾ ರಜೆಯಲ್ಲಿ 17 ದಿನ ಸೇರಿ ಒಟ್ಟು 37 ದ ದಿನಗಳ ರಜೆಯನ್ನು ಕಡಿತಗೊಳಿಸಲಾಗಿದ್ದು, ಈ ವಿಚಾರ ಪೋಷಕರು ಹಾಗೂ ಶಿಕ್ಷಕರಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಕೆಲ ಬಿಜೆಪಿ ಶಾಸಕರು …
Read More »ಅಂಚೆ ಇಲಾಖೆ: 399ರೂ.ಗೆ 10 ಲಕ್ಷ ರೂ. ಅಪಘಾತ ವಿಮೆ, ಖಾತೆ ತೆರೆಯಲು ಈ ಮಾಹಿತಿ ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 14: ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ. ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಹತ್ತಾರು ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ …
Read More »BIG BREAKING ವಿದ್ಯುತ್ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಕಡ್ಡಾಯ: ಮೊದಲೇ ಹಣ ಕಟ್ಟಿ ವಿದ್ಯುತ್ ಬಳಸಿ
ಬೆಂಗಳೂರು: ವಿದ್ಯುತ್ ಪ್ರಿಪೇಯ್ಡ್ ವ್ಯವಸ್ಥೆ ಶೀಘ್ರವೇ ಜಾರಿ ಆಗಲಿದೆ. ರಾಜ್ಯದಾದ್ಯಂತ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಸರ್ಕಾರ ಸಿದ್ಧತೆ ಕೈಗೊಂಡಿದೆ. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಉಳಿಸಿಕೊಳ್ಳಲು 2023ರ ಒಳಗೆ ಮೀಟರ್ ಬದಲಾವಣೆ ಮಾಡುವ ಹೊಸ ಯೋಜನೆ ಜಾರಿಗೊಳಿಸಲಾಗುವುದು. ವಿದ್ಯುತ್ ಗ್ರಾಹಕರು ಮೊದಲು ಹಣ ಕಟ್ಟಿ ನಂತರ ವಿದ್ಯುತ್ ಬಳಸುವ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆ ಸಿದ್ಧತೆ ನಡೆಸಿದೆ. ಪ್ರಸ್ತುತ ಗ್ರಾಹಕರು ಬಳಕೆ ಮಾಡುವ …
Read More »ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷ: ಬೊಮ್ಮಾಯಿ, ಬಿಎಸ್‌ವೈಗೆ ನಿಯೋಗದ ಮನವಿ
ಚಿತ್ರದುರ್ಗ: ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿವಮೂರ್ತಿ ಮುರುಘಾ ಶರಣರು ಬಂಧನದಲ್ಲಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನೂತನ ಪೀಠಾಧ್ಯಕ್ಷರ ನೇಮಕಕ್ಕೆ ಮುಂದಾಗಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ. ಮಾಜಿ ಸಚಿವ ಎಚ್.ಏಕಾಂತಯ್ಯ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಜನರ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿದೆ. ಶಾಸಕ …
Read More »18ಕ್ಕೂ ಹೆಚ್ಚು ಶಾಸಕರು, ಸಚಿವರು, ಶ್ರೀಮಂತರು, ಪ್ರಭಾವಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ
ಭುವನೇಶ್ವರ: ಒಡಿಶಾದ ಬಡತನದ ಕೇಂದ್ರ ಎಂದು ಬಿಂಬಿಸಲ್ಪಟ್ಟಿರುವ ಕಾಳಹಂಡಿ ಜಿಲ್ಲೆಯ 26 ವರ್ಷದ ಮಹಿಳೆ ಅರ್ಚನಾ ನಾಗ್ ಇವತ್ತು ಕೋಟ್ಯಧಿಪತಿ! ಶ್ರೀಮಂತರು, ಪ್ರಭಾವಿಗಳ ಖಾಸಗಿ ಕ್ಷಣಗಳ ಚಿತ್ರಗಳನ್ನಿಟ್ಟುಕೊಂಡು, ಅವರನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಆಕೆ ಕಳೆದ ವಾರವೇ ಬಂಧನಕ್ಕೊಳಗಾಗಿದ್ದಾಳೆ. ಈಗ ಆಕೆಯ ವಿರುದ್ಧ ವಸೂಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ವಿಶೇಷ ಗೊತ್ತಾ? ಒಡಿಶಾ ಚಿತ್ರನಿರ್ದೇಶಕರೊಬ್ಬರು ಆಕೆಯ ಬಗ್ಗೆ ಸಿನಿಮಾ ಮಾಡಲು ಸಿದ್ಧವಾಗಿದ್ದಾರೆ. ಒಂದು ಕಾಲದಲ್ಲಿ ಬಡವಳಾಗಿದ್ದ ಅರ್ಚನಾ …
Read More »ಬೆಳಗಾವಿಯಲ್ಲಿ ವಿವೇಕಾನಂದರ ಆಗಮನಕ್ಕೆ 130 ವಸಂತಗಳ ಸಂಭ್ರಮ
ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು 1892ರ ಅಕ್ಟೋಬರ್ 16ರಿಂದ 27ರವರೆಗೆ ಬೆಳಗಾವಿಯಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ಅಕ್ಟೋಬರ್ 16ರ ಭಾನುವಾರ ಸ್ವಾಮೀಜಿ ವಾಸಿಸುತ್ತಿದ್ದ ರಿಸಾಲ್ದಾರ್ ಗಲ್ಲಿಯಲ್ಲಿರುವ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರಾಮಕೃಷ್ಣ ಮಿಷನ್ ಮನವಿ ಮಾಡಿದೆ. ಈ ಕುರಿತಂತೆ ಬೆಳಗಾವಿಯಲ್ಲಿ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ರಾಮಕೃಷ್ಣ ಮಿಶನ್ ಕಾರ್ಯದರ್ಶಿಗಳಾದ ಸ್ವಾಮಿ ಆತ್ಮ ಪ್ರಾಣಾನಂದ ಮಹಾಸ್ವಾಮಿಜಿರವರು, ವಿವೇಕಾನಂದ ಸ್ಮಾರಕದಲ್ಲಿ ಸ್ವಾಮೀಜಿಯವರು ಬೆಳಗಾವಿಯಲ್ಲಿ …
Read More »ಕಬ್ಬಿನ ಬೆಲೆಯನ್ನು ಕನಿಷ್ಠ 4500ರೂ ನಿಗದಿ ಮಾಡಿ- ರೈತ ಮುಖಂಡ ರವಿ ಪೂಜಾರಿ ಆಗ್ರಹ..!!
ಸರಕಾರ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಸಲು ಆಯೋಜಿಸಿರುವ ಸಭೆಯನ್ನು ಬೆಳಗಾವಿಯ ಸುವರ್ಣಸೌಧದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ನೇಗಿಲಯೋಗಿ ರೈತ ಸೇವಾ ಸಂಘದಿAದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಲಿಸಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕಬ್ಬಿನ ಕಾರ್ಖಾನೆಗಳಿವೆ. ಇಲ್ಲಿ ಕಬ್ಬು ಬೆಳೆಗಾರ ರೈತರ ಸಂಖ್ಯೆಯೂ ಹೆಚ್ಚಾಗಿದೆ. ಈ ಕುರಿತು ಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಕುರಿತಂತೆ ಚರ್ಚೆಯನ್ನು ನಡೆಸಲು ಸಕ್ಕರೆ ಸಚಿವರು, ಆಯುಕ್ತರು, ಹಾಗೂ ಎಲ್ಲಾ ಕಾರ್ಖಾನೆಗಳ ಎಂಡಿಗಳು, ಹಾಗೂ ಎಲ್ಲಾ …
Read More »
Laxmi News 24×7