Breaking News

ವೇಷದೊಳಗೊಬ್ಬ ಆಪದ್ಬಾಂಧವ; ನೊಂದ ಮಕ್ಕಳ ಆಶಾಕಿರಣ ಈ ರವಿ..

ವರ್ಷಕ್ಕೆ ಎರಡೇ ದಿನ ವೇಷ.. ಹೀಗೆ 8 ವರ್ಷಗಳಿಂದ ವೇಷ ಹಾಕಿ ತಿರುಗಿ ಹಣ ಸಂಗ್ರಹಿಸಿ ಅನಾರೋಗ್ಯದಲ್ಲಿದ್ದ ಮಕ್ಕಳ ಚಿಕಿತ್ಸೆಗೆ ಪೂರ್ತಿಯಾಗಿ ಕೊಟ್ಟಿರುವ ಇವರು ಆ ಮಕ್ಕಳ ಪಾಲಿಗೆ ಆಪದ್ಬಾಂಧವ. ಇನ್ನೂ ಇರುವ ಅಂಥ ಇತರ ಮಕ್ಕಳ ಪಾಲಿಗೆ ಆಶಾಕಿರಣ.   ರವಿಕಾಂತ ಕುಂದಾಪುರ ‘ಉದರನಿಮಿತ್ತಂ ಬಹುಕೃತ ವೇಷಂ..’ ಹೌದು.. ಹೊಟ್ಟೆಪಾಡಿಗಾಗಿ ಹಲವರು ನಾನಾ ವೇಷ ಹಾಕುತ್ತಾರೆ. ಆದರೆ ಇಲ್ಲೊಬ್ಬರು ನಾನಾ ವೇಷ ಹಾಕುತ್ತಾರಾದರೂ ಅದು ಹೊಟ್ಟೆಪಾಡಿಗಲ್ಲ. ಅವರ ವೇಷ …

Read More »

ರಾಜ್ಯದಲ್ಲಿ ತಾಪಮಾನ ಭಾರಿ ಕುಸಿತ : ಮೈನಡುಗುವ ಚಳಿಗೆ ಹೊರಬಾರದ ಜನ!

ಬೆಂಗಳೂರು : ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಾಮಾನ ಭಾರೀ ಕುಸಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿ ಹೆಚ್ಚಳವಾಗಿದೆ.   ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ರಾಜ್ಯದ ಶೇ. 73 ರಷ್ಟು ಭೂ ಭಾಗದಲ್ಲಿ 12 ರಿಂ ದ16 ಡಿಗ್ರಿ ಸೆಲ್ಸಿಯಸ್ …

Read More »

ದೀಪಾವಳಿ ವಿಶೇಷ; ಬಲಿಪಾಡ್ಯದ ಮಹತ್ವ

ಐದು ದಿನಗಳ ಕಾಲ ಶ್ರದ್ಧಾಭಕ್ತಿ-ಸಡಗರದಿಂದ ಆಚರಿಸುವ ಹಬ್ಬ ದೀಪಾವಳಿ. ಇದರಲ್ಲಿ ಬಲಿಪಾಡ್ಯವನ್ನು ಈ ಬಾರಿ ಅ. 26ರಂದು ಆಚರಿಸಲಾಗುತ್ತದೆ. ವಾಮನನು ತ್ರಿವಿಕ್ರಮರೂಪಿಯಾಗಿ ಬಲಿಚಕ್ರವರ್ತಿಯನ್ನು ಸುತಲಲೋಕಕ್ಕೆ ಕಳುಹಿಸಿದ ದಿನವೇ ಬಲಿಪ್ರತಿಪತ್. ಮಹಾಧಾರ್ವಿುಕನಾದ ಬಲಿಮಹಾರಾಜನಿಗೂ ತಾನು ಎಲ್ಲವನ್ನು ಗೆದ್ದ ಮಹಾಚಕ್ರವರ್ತಿ ಎಂಬ ಅಹಂಕಾರ ಬಂದಿತು. ಆ ಅಹಂಕಾರವನ್ನು ನಾಶಗೊಳಿಸಬೇಕೆಂದೇ ನಾರಾಯಣನು ವಾಮನರೂಪಿಯಾಗಿ ಬಂದು ಮೂರು ಪಾದ ಭೂಮಿಯನ್ನು ದಾನವಾಗಿ ಕೇಳಿದನು. ಸರ್ವಸ್ವವೂ ನನ್ನಾಧೀನದಲ್ಲಿರುವಾಗ ಬೇಕಾದ್ದನ್ನು ಕೊಡುವೆ ಎಂಬ ಅಹಂಕಾರದಿಂದ ಬಲಿಯು ಹೇಳುತ್ತಾನೆ. ಅದಕ್ಕೆ …

Read More »

ಮನೆ ಕಳ್ಳತನ: ಆರೋಪಿಗಳ ಬಂಧನ;15.64 ಲಕ್ಷ ರೂ. ಮೌಲ್ಯದ ಆಭರಣ ವಶ

ಚಿಕ್ಕೋಡಿ: ಹಗಲು ವೇಳೆಯಲ್ಲಿ ಮನೆ ಕೀಲಿ ಮುರಿದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಸುಮಾರು 15.64 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ದಿ.12 10 2022 ರಂದು ಚಿಕ್ಕೋಡಿ ನಗರದ ವಿಷ್ಣು ಪ್ರಕಾಶ ನೇತಲಕರ ಅವರ ಮನೆ ಕೀಲಿ ಮುರಿದು 370 ಗ್ರಾಂ ಬಂಗಾರ ಆಭರಣ. 1.50 ಲಕ್ಣ ರೂ. ನಗದು ಹಣ ಹೀಗೆ 12.61 ಲಕ್ಷ ರೂ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರು …

Read More »

ದೀಪಗಳ ಬೆಳಕಿನಲ್ಲಿ ತೇಲಾಡಿದ.ಕಿತ್ತೂರು ಸಾಮ್ರಾಜ್ಯ

ಸರಿಯಾಗಿ 198 ವರ್ಷಗಳ ಹಿಂದಿನ ನೆನಪು. ಸಂಜೆ ಸೂರ್ಯಾಸ್ತದ ಸಮಯ. ದಿನವಿಡೀ ಬೆಳಕು ನೀಡಿದ್ದ ಸೂರ್ಯದೇವ ವಿಶ್ರಾಂತಿಗೆ ಜಾರುತ್ತಿದ್ದ. ಆದರೆ ಕಿತ್ತೂರು ಸಂಸ್ಥಾನದ ರಾಜಧಾನಿ ಕಿತ್ತೂರಿನಲ್ಲಿ ವಾತಾವರಣ ಉಳಿದೆಲ್ಲ ದಿನಕ್ಕಿಂತ ಭಿನ್ನವಾಗಿತ್ತು. ಸೂರ್ಯ ಇಳೆಗೆ ಜಾರುತ್ತಿದ್ದಂತೆ. ಕೋಟೆಯ ತುಂಬೆಲ್ಲ ದೀಪಗಳು ಬೆಳಗಿದವು. ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಇಡೀ ಕಿತ್ತೂರು ದೀಪಾವಳಿ ಬೆಳಕಿನಲ್ಲಿ ಮುಳುಗಿತ್ತು. ಇದಕ್ಕೆ ಕಾರಣವಾಗಿದ್ದು ವೀರರಾಣಿ ಕಿತ್ತೂರ ಚನ್ನಮ್ಮನ ಸೈನ್ಯ ಕಂಪನಿ(ಬ್ರಿಟಿಷ್‌)ಸರಕಾರ ವಿರುದ್ಧ ವಿರೋಚಿತ ಜಯ ಸಾಧಿಸಿದ್ದು. …

Read More »

ಬ್ರಿಟಿಷರ ಮಂಡಿಯೂರಿಸಿದ್ದ ರಾಣಿ ಕಿತ್ತೂರು ಚನ್ನಮ್ಮಾಜಿ

1585 ರಿಂದ 1824ರವರೆಗೆ 12 ರಾಜರ ಆಳ್ವಿಕೆಯನ್ನು ನಂತರ ಸಂಸ್ಥಾನದ ಸಂದಿಗ್ಧತೆಯಲ್ಲಿ ರಾಣಿ ಚನ್ನಮ್ಮಾಜಿಯ ಸೂಕ್ತ ನಾಯಕತ್ವ ಕಿತ್ತೂರು ಸಂಸ್ಥಾನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಸಿತು. ರಾಣಿ ಚನ್ನಮ್ಮಾ ಇವತ್ತಿನ ಬೆಳಗಾವಿ ಜಿಲ್ಲೆಯ ಕಾಕತಿಯ(ಸಾಂಗ್ಲಿ ಸಂಸ್ಥಾನ) ದೂಳಪ್ಪಗೌಢ ದೇಸಾಯಿಯ ಮಗಳಾಗಿ ಜನ್ಮ ತಾಳಿದಳು. ನಂತರ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿಯ ಕೈ ಹಿಡಿದು ಕಿತ್ತೂರಿನ ಸಂಸ್ಥಾನಕ್ಕೆ ರಾಜ ಕಳೆ ತಂದು ಕೊಟ್ಟಳು. 1816ರಲ್ಲಿ ದೊರೆ ಮಲ್ಲಸರ್ಜ ದೇಸಾಯಿ ನಿಧನದ ನಂತರ ಸಂಸ್ಥಾನದಲ್ಲಿ …

Read More »

ಅಸಾಮಾನ್ಯ ಮಕ್ಕಳಿಗೆ ಬೇಕು ವಿಶೇಷ ಕಾಳಜಿ-ಆರೈಕೆ

ಬೆಳಗಾವಿ: ಸಾಮಾನ್ಯ ಮಕ್ಕಳ ಬೆಳವಣಿಗೆಯಂತೆ ಆರೋಗ್ಯದ ಹಾಗೂ ಅಂಗವೈಕಲ್ಯದ ಸವಾಲು ಎದುರಿಸುತ್ತಿರುವ ಅಸಾಮಾನ್ಯ ಮಕ್ಕಳ ಬೆಳವಣಿಗೆ ಇರುವುದಿಲ್ಲ. ಅವರಿಗೆ ವಿಶೇಷ ಕಾಳಜಿ ಹಾಗೂ ಆರೈಕೆ ಮಾಡುವುದು ಬಹಳ ಮುಖ್ಯ. ಅವರಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಭೌತಿಕ ಚಿಕಿತ್ಸೆ ಅತ್ಯವಶ್ಯವಾಗಿ ಬೇಕು. ಇದರಲ್ಲಿ ತಾಯಂದಿರ ಕಾರ್ಯ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕಾಹೆರನ ಉಸ್ತವಾರಿ ಉಪಕುಲಪತಿ ಹಾಗೂ ಡಾ| ಎನ್‌ ಎಸ್‌ ಮಹಾಂತಶೆಟ್ಟಿ ಹೇಳಿದರು. ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ …

Read More »

ಸಾರ್ವಜನಿಕ ಶೌಚಾಲಯದಿಂದಲೇ ಆದಾಯ,ಈ ವಿಚಾರ ಮಂಡಿಸಿದಾಗ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ

ಚನ್ನಮ್ಮನ ಕಿತ್ತೂರು (ಸಂಗೊಳ್ಳಿ ರಾಯಣ್ಣ ವೇದಿಕೆ): ‘ನನ್ನ ಸ್ವಂತ ಜಮೀನಿನಲ್ಲಿ ಸಾರ್ವಜನಿಕರಿಗೆ ಶೌಚಾಲಯ ಕಟ್ಟಿಸಿದೆ. ಅದರಿಂದಲೇ ಬಯೊಗ್ಯಾಸ್ ತಯಾರಿಸಿದೆ. ವಿದ್ಯುತ್ ಉತ್ಪಾದಿಸಿದೆ. ಎರೆಹೊಳ ಗೊಬ್ಬರ ಮಾಡಿದೆ. ಸ್ವಾವಲಂಬನೆಗೆ ಇನ್ನೇನು ಬೇಕು..?   ‘ಕೃಷಿ ಪಂಡಿತ’ ಪ್ರಶಸ್ತಿ ಪುರಸ್ಕೃತ ಕುರುಗುಂದದ ದಯಾನಂದ ಅಪ್ಪಯ್ಯನವರಮಠ ಅವರು ಕಿತ್ತೂರು ಉತ್ಸವ ಅಂಗವಾಗಿ ಮಂಗಳವಾರ ಕೃಷಿ ವಿಚಾರ ಸಂಕಿರಣದಲ್ಲಿ ಈ ವಿಚಾರ ಮಂಡಿಸಿದಾಗ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಊರ ಮುಂದಿನ ಹೊಲ ನಮ್ಮ ಹಿಸ್ಸೆಗೆ …

Read More »

ಕಿತ್ತೂರು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮಂಗಳವಾರ ಇತಿಹಾಸಪ್ರಿಯರ ದಂಡೇ ಲಗ್ಗೆ ಇಟ್ಟಿತ್ತು

ಕಿತ್ತೂರು: ಇಲ್ಲಿನ ಕೋಟೆ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮಂಗಳವಾರ ಇತಿಹಾಸಪ್ರಿಯರ ದಂಡೇ ಲಗ್ಗೆ ಇಟ್ಟಿತ್ತು. ಕಿರಿಯರಿಂದ ಹಿರಿಯರವರೆಗೆ ಎಲ್ಲ ವಯೋಮಾನದವರೂ ಭೇಟಿ ನೀಡಿ, ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ಮಾಹಿತಿ ಸಂಗ್ರಹಿಸಿದರು.   ಇಲ್ಲಿರುವ ಕಿತ್ತೂರು ಅರಮನೆ ಬಾಗಿಲುಗಳು, ಕಿಟಕಿಗಳು, ಸೈನ್ಯ ಬಳಸಿದ ಖಡ್ಗ, ಗುರಾಣಿ, ಚಿಲಕತ್ತು (ಯುದ್ಧದ ಸಂದರ್ಭದಲ್ಲಿ ಧರಿಸುವ ಕಬ್ಬಿಣದ ಪೋಷಾಕು) ಮತ್ತಿತರ ಶಸ್ತ್ರಾಸ್ತ್ರಗಳು, ಸೈನಿಕರ ಉಡುಪುಗಳು, ಫಿರಂಗಿ ಗುಂಡುಗಳು, ವೀರಗಲ್ಲುಗಳು, ಮಹಾಸತಿ ಕಲ್ಲುಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸಿದರು. ಅರೂವರೆ ಅಡಿಯಷ್ಟು …

Read More »

ಮನೆಗೆ ನುಗ್ಗಿ ₹ 23.60 ಲಕ್ಷ ದರೋಡೆ

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬನ್ನೂರು ತಾಂಡಾದಲ್ಲಿ ಮಂಗಳವಾರ ನಸುಕಿನಲ್ಲಿ ಮನೆಗೆ ನುಗ್ಗಿದ ಎಂಟು ಮಂದಿಯ ಗುಂಪು, ಕುಟುಂಬದ ಮೇಲೆ ಹಲ್ಲೆ ಮಾಡಿ, ನಗ- ನಾಣ್ಯ ದರೋಡೆ ಮಾಡಿದೆ. ಬನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಶಂಕರ ರಜಪೂತ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಟ್ರಜರಿಯಲ್ಲಿದ್ದ ಚಿನ್ನಾಭರಣ, ಹಣ ಸೇರಿ ₹ 23.60 ಲಕ್ಷದ ವಸ್ತುಗಳನ್ನು ಕದ್ದಿದ್ದಾರೆ ಎಂದು ಮನೆಯವರು ದೂರು ನೀಡಿದ್ದಾರೆ. ಗ್ರಾಮದ ಹೊರವಲಯದ …

Read More »