ನವದೆಹಲಿ: ಮಹದಾಯಿ ಯೋಜನೆಯ ಭಾಗವಾದ ಕಳಸಾ ನಾಲಾ ತಿರುವು ಯೋಜನೆಗೆ 33.05 ಹೆಕ್ಟೇರ್ ಮೀಸಲು ಅರಣ್ಯ ಬಳಕೆಗೆ ಪರಿಸರ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಸಹಾಯಕ ಮಹಾನಿರ್ದೇಶಕರು (ಎಐಜಿ) ಯೋಜನಾ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ಈ ಯೋಜನೆಗೆ ಬೆಳಗಾವಿ ಜಿಲ್ಲೆಯಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಸಲು (ಜಾಕ್‌ವೆಲ್ ನಿರ್ಮಾಣ, ಪಂಪ್ ಹೌಸ್, ಎಲೆಕ್ಟ್ರಿಕಲ್ ಸಬ್ ಸ್ಟೇಷನ್, …
Read More »ಧ್ವನಿ ಎತ್ತಿದರೆ ಕಠಿಣ ಕ್ರಮ: ಅಕ್ಕಲಕೋಟೆ ಕನ್ನಡಿಗರಿಗೆ ಮಹಾರಾಷ್ಟ್ರ ಬೆದರಿಕೆ
ಕನ್ನಡಪರ ಘೋಷಣೆ ಕೂಗಿದ ಮಹಾರಾಷ್ಟ್ರದ ಅಕ್ಕಲಕೋಟೆ ತಾಲ್ಲೂಕಿನ 17 ಕನ್ನಡಿಗರಿಗೆ ನೋಟಿಸ್ ನೀಡಿರುವ ಸ್ಥಳೀಯ ಪೊಲೀಸರು, ಈ ನಡವಳಿಕೆ ಮುಂದುವರಿಸಿದರೆ ‘ರಾಜ್ಯ ದ್ರೋಹ’ ಆರೋಪ ಹೊರಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ತಾಲ್ಲೂಕಿನ ಉಡಗಿ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಖಾಸಗಿ ಕನ್ನಡ ಶಾಲೆಯ ಸಿಬ್ಬಂದಿಯನ್ನು ಶಾಲಾಡಳಿತ ಅಮಾನತು ಮಾಡಿದೆ. ಜತ್ತ ತಾಲ್ಲೂಕಿನಲ್ಲಿ ಕನ್ನಡ ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರಿಗೆ ನೋಟಿಸ್ ನೀಡಲಾಗಿದೆ. ಡಿಸೆಂಬರ್‌ನಲ್ಲಿ ಗಡಿ …
Read More »ನೀರಿನ ಸಂಪಿಗೆ ಬಿದ್ದು ನರ್ಸರಿ ಓದುವ ಮಕ್ಕಳಿಬ್ಬರು ಸಾವು
ಬೆಳಗಾವಿ: ನಿರ್ಮಾಣದ ಹಂತದಲ್ಲಿದ್ದ ಕಟ್ಟಡದ ನೀರಿನ ಸಂಗ್ರಹದ ಸಂಪ್ ದಲ್ಲಿ ಬಾಲಕರಿಬ್ಬರು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಸವದತ್ತಿಯಲ್ಲಿ ಮಂಗಳವಾರ ನಡೆದಿದೆ. ಮಂಗಳವಾರದಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೌದತ್ತಿ ನಗರ ಗುರ್ಲ್ ಹೊಸೂರು ವಾರ್ಡಿನಲ್ಲಿರುವ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದಲ್ಲಿ ಈ ದುರ್ಘಟನೆ ನಡೆದಿದೆ. ಕಟ್ಟಡದ ನೀರು ಸಂಗ್ರಹ ಮಾಡುವ ಸಂಪಿನಲ್ಲಿ ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಖಾಸಗಿ ಶಾಲೆಯ ನರ್ಸರಿ ಓದುತ್ತಿರುವ ಶ್ಲೋಕ ಶಂಭುಲಿಂಗಪ್ಪ …
Read More »ಸ್ಯಾಂಟ್ರೊ ರವಿ ಬಂಧನಕ್ಕೆ ತಂಡ ರಚನೆ, ಲುಕ್ ಔಟ್ ನೋಟಿಸ್ ಜಾರಿ:ಅಲೋಕ್ ಕುಮಾರ್
ಮೈಸೂರು: ತಲೆ ಮರೆಸಿಕೊಂಡಿರುವ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿ ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ವಿರುದ್ದ ಮೈಸೂರು ನಗರದ ವಿಜಯನಗರ ಠಾಣೆಯಲ್ಲಿ ಅತ್ಯಾಚಾರ ಮತ್ತು ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ …
Read More »ರಾಜ್ಯದಲ್ಲಿ ಆಲಿಬಾಬಾ, 40 ಕಳ್ಳರ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ಆಲಿಬಾಬಾ ಮತ್ತು 40 ಕಳ್ಳರ ಸರ್ಕಾರ ಅಧಿಕಾರದಲ್ಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಭ್ರಷ್ಟ ಮುಖ್ಯಮಂತ್ರಿಯಷ್ಟೇ ಅಲ್ಲ, ಅತ್ಯಂತ ದುರ್ಬಲ ಮುಖ್ಯಮಂತ್ರಿ. ಇವರಿಂದ ರಾಜ್ಯದ ಘನತೆಗೆ ಕಳಂಕ ಬಂದಿದೆ ಎಂದು ದೂರಿದರು. ಬಿಜೆಪಿ ಸರ್ಕಾರ ಅನೈತಿಕ ಮಾರ್ಗದ ಮೂಲಕ ರಚನೆಯಾದ ಸರ್ಕಾರ. 2018ರಲ್ಲಿ ಇವರಿಗೆ ಜನ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡಿರಲಿಲ್ಲ, 104 ಸ್ಥಾನಗಳಲ್ಲಿ …
Read More »ಅತಿಥಿಗೃಹ ಶುಲ್ಕ ಏರಿಕೆ; ಟಿಟಿಡಿ ವಿರುದ್ಧ ಆಕ್ಷೇಪ
ಹೈದರಾಬಾದ್: ತಿರುಪತಿ ತಿರುಮಲ ದೇಗುಲಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೇ, ದೇವಸ್ಥಾನ ಮಂಡಳಿ ದೇಗುಲದ ಅತಿಥಿಗೃಹ ಹಾಗೂ ಕಾಟೇಜ್‌ಗಳ ಶುಲ್ಕ ಏರಿಕೆ ಮಾಡಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗಿದೆ. 750ರೂ. ಶುಲ್ಕವಿದ್ದ ನಾರಾಯಣ ಗಿರಿಯಲ್ಲಿರುವ ಅತಿಥಿಗೃಹಗಳಿಗೆ ಇನ್ನು ಮುಂದೆ 1,700 ರೂ. ಪಾವತಿಸಬೇಕಿದ್ದು, ಕಾಟೇಜ್ ಶುಲ್ಕ 2 ಸಾವಿರ ರೂ.ಗಳಿಗೆ ಟಿಟಿಡಿ ಏರಿಕೆ ಮಾಡಿದೆ. ತಿರುಪತಿ ಅತಿ ಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಧಾರ್ಮಿಕ ಕ್ಷೇತ್ರವಾಗಿದ್ದು, ಶುಲ್ಕ ಹೆಚ್ಚಳ ಭಕ್ತರಿಗೆ …
Read More »ಸಮಗ್ರ ಲಿಂಗಾಯತ ಸಮಾಜ ಒಂದಾಗಲಿ: C.M. ಬೊಮ್ಮಾಯಿ
ಧಾರವಾಡ: ಸಮಗ್ರ ವೀರಶೈವ ಲಿಂಗಾಯತ ಸಮುದಾಯ ಒಳ ಪಂಗಡಗಳನ್ನು ಮರೆತು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದರು. ಶ್ರಿ ಲಿಂಗರಾಜ್ ವಿವಿದುದ್ದೇಶ ಸಂಸ್ಥೆ ವತಿಯಿಂದ ನಡೆದ ಶಿರಸಂಗಿ ಲಿಂಗರಾಜರ 162 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲಿಂಗರಾಜ್ ಸರದೇಸಾಯಿ ಅವರ ಆದರ್ಶಗಳು ಲಿಂಗಾಯತ ಸಮಗ್ರ ಸಮುದಾಯಕ್ಕೆ ಮಾದರಿಯಾಗಬೇಕಿದೆ. ಲಿಂಗಾಯತ ಸಮುದಾಯದ ಶ್ರೇಷ್ಠರನ್ನು ಒಂದು ಪಂಗಡ ಅಥವಾ ಒಳ ಪಂಗಡಕ್ಕೆ ಸೀಮಿತಗೊಳಿಸುವುದು …
Read More »ಸಿದ್ಧೇಶ್ವರ ಶ್ರೀ ಅಗಲಿಕೆ: ಸಿದ್ದೇಶ್ವರ ಜಾತ್ರೆ ಸರಳ
ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಶ್ರೀಸಿದ್ದೇಶ್ವರ ಸಂಸ್ಥೆಯಿಂದ ನಗರ ದೇವತೆ ಸಿದ್ದೇಶ್ವರನ ಪ್ರಸಕ್ತ ಸಾಲಿನ ಸಂಕ್ರಮಣದ ನಮ್ಮೂರ ಜಾತ್ರೆಯನ್ನು ಸರಳವಾಗಿ ಅಚರಿಸಲು ನಿರ್ಧರಿಸಿದೆ. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿ, ಜಾತ್ರೆ ಆಚರಿಸಲು ಯೋಜಿಸಿದೆ. ಮಂಗಳವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಚೇರ್ಮನ್ ಬಸಯ್ಯ ಹಿರೇಮಠ, ಸಿದ್ದೇಶ್ವರ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಸಿದ್ದೇಶ್ವರ ಜಾತ್ರಾ ಮಹೋತ್ಸದಲ್ಲಿ ಜಾನುವಾರು …
Read More »ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಲು ಪ್ರಜಾಧ್ವನಿ ಯಾತ್ರೆ: ಡಿಕೆ ಶಿವಕುಮಾರ್
ಬೆಂಗಳೂರು: ಹೊಸ ವರ್ಷ, ಹೊಸ ಪರ್ವ. ಬದಲಾವಣೆ ಹಾಗೂ ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಈ ಪವಿತ್ರವಾದ ಗಳಿಗೆಯಲ್ಲಿ ಜನರಿಗಾಗಿ ಪ್ರಜಾಧ್ವನಿ ಯಾತ್ರೆ ವಿಚಾರ ತಿಳಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜನರ ಭಾವನೆ ತಿಳಿಸಲು ಕಳೆದ ಎರಡು ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸತತವಾಗಿ ಪ್ರಯತ್ನಿಸಿದೆ. ಈ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ, …
Read More »ಸ್ಯಾಂಟ್ರೋ ರವಿ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಸ್ಯಾಂಟ್ರೋ ರವಿ ವಿಚಾರದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವನಿಗೆ 20 ವರ್ಷದ ಇತಿಹಾಸವಿದೆ. ಈ ಹಿಂದೆ ಆತನೊಂದಿಗೆ ಹಲವರು ಸಂಪರ್ಕದಲ್ಲಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ಆದರ್ಶ ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ವಿಚಾರದಲ್ಲಿ ಹೆಚ್ಚು ಮಹತ್ವ ಕೊಡುವುದು ಬೇಡ. ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎಂದರು. ಸ್ಯಾಂಟ್ರೋ ರವಿ …
Read More »