Breaking News

ರಾಮದುರ್ಗ: ಇಂದಿನಿಂದ ವೆಂಕಟೇಶ್ವರ ಜಾತ್ರೆ ವೈಭವ

ರಾಮದುರ್ಗ: ಪುಣೆಯ ಪೇಶ್ವೆಗಳ (ಮರಾಠಿಗರ) ಆಡಳಿತದಲ್ಲಿ ಪಟ್ಟಣದಲ್ಲಿ ನಿರ್ಮಿಸಿದ, ವೆಂಕಟೇಶ್ವರ ದೇವಸ್ಥಾನದ ಜಾತ್ರೆ ಮಾರ್ಚ್‌ 22ರಿಂದ ಏಪ್ರಿಲ್‌ 31ರವರೆಗೆ ನಡೆಯಲಿದೆ. ಗಡಿ ಭಾಗದಲ್ಲಿ ಕನ್ನಡ- ಮರಾಠಿ ಸಂಸ್ಕೃತಿಗಳ ಸಂಗಮವಾಗಿ ಈ ಉತ್ಸವ ಬೆಳೆದುಬಂದಿದೆ.   ರಾಮದುರ್ಗ ಸಂಸ್ಥಾನವು ಪುಣೆಯ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟಿತ್ತು. ನರಗುಂದ ಮತ್ತು ರಾಮದುರ್ಗದ ಸಂಸ್ಥಾನಗಳ ಉಭಯ ಸಹೋದರರ ಆಡಳಿತ ವಿಭಜನೆಯಾದ ನಂತರ ರಾಮದುರ್ಗದ ಕೊನೆಯ ಅರಸು ರಾಮ್‌ರಾವ್‌ ಭಾವೆ ಇಲ್ಲಿನ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಿ ಜಾತ್ರೆ ನಡೆಸಿಕೊಂಡು …

Read More »

ರಾಮದುರ್ಗ: ವೈಭವದ ಬಸವಣ್ಣ ಪಲ್ಲಕ್ಕಿ ಉತ್ಸವ

ರಾಮದುರ್ಗ: ಹಲಗತ್ತಿ ಗ್ರಾಮದಲ್ಲಿ ಯುಗಾದಿ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಗ್ರಾಮದ ಬಸವಣ್ಣ ದೇವರ ಪಲ್ಲಕ್ಕಿ ಉತ್ಸವ ಮಾರ್ಚ್‌ 27ರಂದು ಅದ್ಧೂರಿಯಾಗಿ ಜರುಗಲಿದೆ. ಮಾರ್ಚ್‌ 22ರಂದು ಓಕುಳಿ ಹೊಂಡ ಪೂಜೆ ನೆರವೇರುವುದು. ನಂತರ ಮೂರು ದಿನ ಬಣ್ಣದ ಓಕುಳಿ ವೈಭವದಿಂದ ನೆರವೇರಲಿದೆ.   ಮಲಪ್ರಭೆ ನದಿ ದಡದಲ್ಲಿರುವ ಹಲಗತ್ತಿ ಸುಂದರ ತಾಣ. ಬಸವಣ್ಣನ ಹರಕೆ ತೀರಿಸಲು ಸುತ್ತಲಿನ ಜನ ಭಕ್ತಿ ಭಾವದಿಂದ ಆಗಮಿಸುತ್ತಾರೆ. ಹೆಣ್ಣುಮಕ್ಕಳು ಗಂಡನ ಮನೆಯಿಂದ ಯುಗಾದಿ ಹಬ್ಬಕ್ಕೆಂದು ತವರಿಗೆ …

Read More »

ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿರುವದು ನಮ್ಮೆಲ್ಲರ ಪುಣ್ಯವಾಗಿದೆ. ಆದರೆ ಕೆಲವೇ ಕೆಲವು ಜನರು ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ ಎಂದು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ವಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಕಳೆದ ಭಾನುವಾರದಂದು ಸಿದ್ಧೇಶ್ವರ ಸ್ವಾಮಿಜಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ …

Read More »

24ರ ಸಾರಿಗೆ ಮುಷ್ಕರ ಕೈಬಿಡಲ್ಲ: ಆರ್. ಚಂದ್ರಶೇಖರ್

ಬೆಂಗಳೂರು: ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಡುವಂತೆ ಅಧಿಕಾರಿಗಳು ನಡೆಸಿದ ಸಂಧಾನ ಸಭೆಯು ವಿಫಲವಾಗಿದ್ದು, ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಬಳಿ ಚಾಲಕರು ಹಾಗೂ ನಿರ್ವಾಹಕರು ಉಪವಾಸ ಸತ್ಯಾಗ್ರಹ ಆರಂಭಿಸಿದರು.   ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ, ಕರೆ ನೀಡಲಾಗಿರುವ ಮುಷ್ಕರದ ಪೂರ್ವಭಾವಿ ಹೋರಾಟಕ್ಕೆ ಮಂಗಳವಾರ ರಾತ್ರಿಯೇ ಚಾಲನೆ ದೊರೆಯಿತು. ಸರ್ಕಾರವು ಶೇ 15ರಷ್ಟು ವೇತನ ಹೆಚ್ಚಳಕ್ಕೆ …

Read More »

ಮತ್ತೆ ನಾನೇ ಸಿಎಂ: ಬೊಮ್ಮಾಯಿ

ಬಾಗಲಕೋಟೆ: ‘ಬೀಳಗಿ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಮತ್ತೆ ಮುಖ್ಯಮಂತ್ರಿಯಾಗಿ ಬಂದು ನಾನೇ ಉದ್ಘಾಟನೆ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮುಧೋಳದಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುಧೋಳ, ತೇರದಾಳ, ಬಾಗಲಕೋಟೆ, ಬೀಳಗಿ ಕ್ಷೇತ್ರದಲ್ಲಿ ಸಾಕಷ್ಟು ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ’ ಎಂದರು. ‘ಅಭಿವೃದ್ಧಿ ಕಾರ್ಯ ನನಗೆ ಗೊತ್ತಾಗುತ್ತದೆ ಎಂದು ಸಚಿವ ಮುರುಗೇಶ ನಿರಾಣಿ ನನ್ನನ್ನು ಅವರ ಕ್ಷೇತ್ರಕ್ಕೆ ಕರೆದಿಲ್ಲ. ಆದರೆ, ಮುಖ್ಯಮಂತ್ರಿಯಾಗಿ ಅವುಗಳ ಉದ್ಘಾಟನೆಯನ್ನು ನಾನೇ …

Read More »

₹40 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಎಸ್‌ಐ, ಕಾನ್‌ಸ್ಟೆಬಲ್‌ ಬಂಧನ

ರಾಣೆಬೆನ್ನೂರು: ವ್ಯಕ್ತಿಯೊಬ್ಬರಿಂದ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ₹ 40 ಸಾವಿರ ಲಂಚ ಪಡೆಯುತ್ತಿದ್ದಾಗ ಇಲ್ಲಿನ ಅಶೋಕನಗರ ಠಾಣೆ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್‌ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಸುನೀಲ ತೇಲಿ, ವಾಹನ ಚಾಲಕ ಹಾಗೂ ಕಾನ್‌ಸ್ಟೆಬಲ್‌ ಸಚಿನ್‌ ಓಲೇಕಾರ ಸಿಕ್ಕಿಬಿದ್ದವರು. ಇವರ ಜೊತೆಗೆ ಉಡುಪಿ ಟಿಸ್ಟಾಲ್‌ ಮಾಲೀಕ ಸಂತೋಷ್‌ ಶೆಟ್ಟಿ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ದೂರುದಾರ ಸಿದ್ಧೇಶ್ವರ ನಗರದ ಅಫ್ರೋಜ್‌ ಅಹ್ಮದ್‌ ನೂರ ಅಹ್ಮದ್‌ಸಾಬ್‌ ಊದಗಟ್ಟಿ ಅವರಿಗೆ …

Read More »

ಗಡ್ಕರಿ ಕಚೇರಿಗೆ ಬೆಳಗಾವಿಯಿಂದ ಮತ್ತೆ ಕೊಲೆ ಬೆದರಿಕೆ ಕರೆ

ಬೆಳಗಾವಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆಳಗಾವಿಯಿಂದಲೇ ಮಂಗಳವಾರ ಮತ್ತೆ ಬೆದರಿಕೆ ಕರೆ ಮಾಡಲಾಗಿದೆ. ಆದರೆ, ಈ ಕರೆಯನ್ನು ಸದ್ಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಜಯೇಶ್‌ ಪೂಜಾರಿ ಮಾಡಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.   ‘ನನಗೆ ₹10 ಕೋಟಿ ಹಣ ನೀಡಬೇಕು. ಇಲ್ಲದಿದ್ದರೆ ನಿತಿನ್‌ ಗಡ್ಕರಿ ಅವರನ್ನು ಕೊಲೆ ಮಾಡುತ್ತೇನೆ’ ಎಂದು ಹೇಳಿಕೊಂಡು ಬೆಳಗಾವಿಯಿಂದ ಜಯೇಶ್‌ ಪೂಜಾರಿ ಎಂಬ ವ್ಯಕ್ತಿ ಕರೆ ಮಾಡಿದ್ದಾಗಿ ನಾಗ್ಪುರ ಪೊಲೀಸರು …

Read More »

ಪೊಲೀಸರ ಮೇಲೇ ಹಲ್ಲೆಗೆ ಮುಂದಾದ ದರೋಡೆಕೋರರು

ಬೀದರ್: ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ದರೋಡೆಕೋರರು ಹಲ್ಲೆ ಮಾಡಲು ಮುಂದಾಗಿದ್ದು, ಬಳಿಕ ಸರ್ಕಲ್ ಪೊಲೀಸ್ ಇನ್​ಸ್ಪೆಕ್ಟರ್​ ಗುಂಡು ಹಾರಿಸಬೇಕಾದ ಪ್ರಸಂಗ ಎದುರಾಗಿತ್ತು. ಬೀದರ್​ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.   ಇಲ್ಲಿನ ಮೈಕೂರ್​ನ ರಿಂಗ್​ರೋಡ್​ನಲ್ಲಿ ಈ ಘಟನೆ ನಡೆದಿದೆ. ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮರನ್ನು ತಮಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದ ಸಂದರ್ಭದಲ್ಲಿ ಈ ಹಲ್ಲೆಯತ್ನ ನಡೆದಿದೆ.   ಇಬ್ಬರು ದರೋಡೆಕೋರರು …

Read More »

ಯುಗಾದಿ.. ಅರ್ಥ ಆಚರಣೆ ವಿಶ್ಲೇಷಣೆ

ಭಾರತೀಯ ಸಂಸ್ಕೃತಿಯೇ ಹಾಗೆ! ಜೀವನವನ್ನು, ಮನುಷ್ಯನನ್ನು, ಜೀವನಕ್ರಮವನ್ನು, ಜೀವನಕ್ಕೆ ಆಶ್ರಯ, ಪುಷ್ಟಿ, ತುಷ್ಟಿಗಳನ್ನು ನೀಡುವ ಭೂಮಿ, ನೀರು, ಆಕಾಶ, ಗಾಳಿಗಳನ್ನು, ಇದಕ್ಕೆ ಆಧಾರವಾಗಿ ನಿಲ್ಲುವ ದೇಶ, ಮಾತಾಪಿತೃಗಳು, ಗುರುಹಿರಿಯರು, ರಾಜ, ಪಶುಪಕ್ಷಿಗಳನ್ನು ದೈವೀಕರಿಸಿ ಉದಾತ್ತೀಕರಿಸಿ ಇವುಗಳೆಡೆಗೆ ಉತ್ಸಾಹ, ಹುಮ್ಮಸ್ಸುಗಳು ಪ್ರತಿನಿತ್ಯವೂ ಧುಮ್ಮಿಕ್ಕುವಂತೆ ಇದು ಮಾಡುವುದರ ಪರಿಯನ್ನು ನೋಡಿಯೇ ತಿಳಿಯಬೇಕು. ವೇದಗಳಲ್ಲಿ ಬರುವ ಈ ಜೀವನೋತ್ಸಾಹ ಮತ್ತೆಲ್ಲಿ ಕಾಣಲಾದೀತು! ಪಶ್ಯೇಮ ಶರದಃ ಶತಂ| ಜೀವೇಮ ಶರದಃ ಶತಂ | ಶೃಣುಯಾಮ ಶರದಃ …

Read More »

ಬಿಜೆಪಿ ಉತ್ಸಾಹಕ್ಕೆ ಆಕಾಂಕ್ಷಿಗಳು ಅಡ್ಡಗಾಲು: ರಥಯಾತ್ರೆಗಳಿಗೆ ತಟ್ಟಿದ ಪೈಪೋಟಿಯ ಬಿಸಿ

ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ನಾಯಕರ ನಿರಂತರ ಭೇಟಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯಿಂದ ಆಡಳಿತ ಬಿಜೆಪಿಯಲ್ಲಿ ಹೆಚ್ಚಿರುವ ಉತ್ಸಾಹಕ್ಕೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಅಡ್ಡಗಾಲಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿ, ಎರಡನೇ ಪಟ್ಟಿಗೆ ಬಿಡುಗಡೆಗೆ ತಯಾರಿ ನಡೆಸಿದೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿ ಮೊದಲ ಪಟ್ಟಿ ತ್ವರಿತವಾಗಿ ಘೋಷಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಸನ್ನದ್ಧವಾಗಿದೆ. ಆದರೆ ಬಿಜೆಪಿ ಪಾಳೆಯದಲ್ಲಿ ಮೇಲ್ನೋಟಕ್ಕೆ ಯಾವುದೇ …

Read More »