Breaking News

ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ದೇವರ ಹಿಪ್ಪರಗಿಯ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಗ್ರಾಮದ ಅಭಿವೃದ್ಧಿ ವಿಚಾರವಾಗಿ ಸಿಟ್ಟಾಗಿದ್ದ ಕೆಲ ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಶಾಸಕರನ್ನು ಊರಲ್ಲಿ ಸಿಸಿ ರಸ್ತೆಗಳಾಗಿಲ್ಲ, ಚರಂಡಿ ವ್ಯವಸ್ಥೆ ಸರಿ ಇಲ್ಲ, ಅಭಿವೃದ್ಧಿಗೆ ಬಂದಿದ್ದ ಹಣ ಏನ್ ಮಾಡಿದ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು     ಆ ಸಂದರ್ಭ ಶಾಸಕರ ಬೆಂಬಲಿಗರ ಜತೆ ಕೆಲ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ.ಗ್ರಾಮದಲ್ಲಿ ಅಭಿವೃದ್ಧಿ …

Read More »

ಅಧಿಕಾರ ಕೊಟ್ಟರೆ ಗೋವು ತಿನ್ನುವವರು ಜಾಸ್ತಿಯಾಗುತ್ತಾರೆ: ಪ್ರತಾಪ ಸಿಂಹ

ಮೈಸೂರು: ಹಾಲು ಕೊಡುವ ಹಸುವನ್ನು ಕಡಿಯುವವರ ಪರ ಇರುವುದು ಸಿದ್ದರಾಮಯ್ಯ. ಅವರಿಗೆ ಅಧಿಕಾರ ಕೊಟ್ಟರೆ ಗೋವು ತಿನ್ನುವವರು ಜಾಸ್ತಿಯಾಗುತ್ತಾರೆ. ಸಿದ್ದರಾಮಯ್ಯ ಅವರು ಗೋ ಹತ್ಯೆ ಮಾಡುವವರ ಪರ ಇದ್ದಾರೆ ಎಂಬುದು ಎಲ್ಲರಿಗೆ ಗೊತ್ತಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗಿದೆ. ಕಾಂಗ್ರೆಸ್, ಜೆಡಿಎಸ್ ನಿಂದ ನಾವು ಪಾಠ ಕಲಿಯಬೇಕಾಗಿಲ್ಲ. ನಂದಿನಿ ಹಾಲಿಗೆ ಪ್ರೋತ್ಸಾಹ ಧನ ಕೊಟ್ಟವರು ಯಡಿಯೂರಪ್ಪ. …

Read More »

ತೇರದಾಳದಲ್ಲಿ ಉಮಾಶ್ರೀ ಅವರಿಗೆ ನೀಡಲು ನೇಕಾರ ಮುಖಂಡರ ಒತ್ತಾಯ

ಮಹಾಲಿಂಗಪುರ : ಈಗಾಗಲೇ ಚುನಾವಣ ದಿನಾಂಕ ಘೋಷಣೆಯಾಗಿದ್ದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯು ಜೋರಾಗಿ ನೆಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ವತಿಯಿಂದ ಅನೇಕರು ಅರ್ಜಿ ಸಲಿಸಿದ್ದು, ಮಾಜಿ ಸಚಿವೆ ಉಮಾಶ್ರೀ ಮತ್ತೊಂದು ಬಾರಿ ತೇರದಾಳದಿಂದ ಸ್ಪರ್ಧಿಸಬೇಕು. ಅವರಿಗೆ ಟಿಕೆಟ್ ನೀಡಬೇಕೆಂದು ತೇರದಾಳ ಮತಕ್ಷೇತ್ರದ ನೇಕಾರ ಸಮಾಜದ ಮುಖಂಡರು ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಎಐಸಿಸಿ ಮತ್ತು ಕೆಪಿಸಿಸಿ ಮುಖಂಡರುಗಳಿಗೆ ಒತ್ತಾಯಿಸಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ …

Read More »

ಕಣಬರ್ಗಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬೆದರಿಕೆ

ಕನಿಷ್ಠ ನಾಗರಿಕ ಸೌಲಭ್ಯಗಳನ್ನು ಒದಗಿಸದಿರುವುದನ್ನು ವಿರೋಧಿಸಿ ಕಣಬರ್ಗಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ. ಬೆಳಗಾವಿಯ ಕಣಬರ್ಗಿಯಲ್ಲಿರುವ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ನೈರ್ಮಲ್ಯ, ಬೀದಿದೀಪ, ಸಮರ್ಪಕ ನೀರು ಪೂರೈಕೆ ಹಾಗೂ ಉತ್ತಮ ರಸ್ತೆಗಾಗಿ ಕಳೆದ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಮಹಾನಗರಸಭೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೊನೆಯ ಅಸ್ತ್ರವಾಗಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕರಿಸುವ …

Read More »

ಅಕ್ರಮವಾಗಿ ಗಾಂಜಾ ಮಾರಾಟರೂ.35,500/- ಮೌಲ್ಯದ 474 ಗ್ರಾಂ ಗಾಂಜಾ ವಶ.

ಗಣೇಶಪುರ ಜ್ಯೋತಿ ನಗರ ಹತ್ತಿರ  ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಂತೆ . ನಚಿಕೇತ ಎಸ್ ಜನಗೌಡ, ಪಿಐ ಕ್ಯಾಂಪ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ಆರೋಪಿತರಾದ 1) ನದೀಮ್ ಅಲ್ಲಾವುದ್ದಿನ್‌ ನದಾಫ್ (23) ಸಾ: ಜಯನಗರ ಮಚ್ಚೆ ಬೆಳಗಾವಿ, 2) ಮನೀಶ ಮಾರುತಿ ಹುಂದ್ರೆ (23) ಸಾ: ಕಶ್ವರ ನಗರ ಹಿಂಡಲಗಾ ಬೆಳಗಾವಿ. ಇವರನ್ನು ವಶಕ್ಕೆ ಪಡೆದು, ವಿಚಾರಣಿ ಕೈಕೊಂಡು, …

Read More »

ಮಗನಿಗಾಗಿ ಸಚಿವ ಸೋಮಣ್ಣ ಕಸರತ್ತು? ಕೇಳಿದ್ದೊಂದು ಸಿಕ್ಕಿದ್ದೊಂದು.

ಬೆಂಗಳೂರು: ಬಿಜೆಪಿ ಇನ್ನೂ ಮೊದಲನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ನಡುವೆ ಸಚಿವ ವಿ ಸೋಮಣ್ಣ ಹೈಕಮಾಂಡ್​ ಜತೆಗೆ ಚರ್ಚೆ ನಡೆಸಲು ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭ ಅವರು ಅರುಣ್​ ಸೋಮಣ್ಣ ಪರವಾಗಿ ಬ್ಯಾಟಿಂಗ್​ ಮಾಡಿದ್ದು ಅದಕ್ಕಾಗಿ ತಮ್ಮ ಟಿಕೆಟನ್ನೂ ಬಿಟ್ಟು ಕೊಡಲಿದ್ದಾರಾ ಎನ್ನುವ ಪ್ರಶ್ನೆಯೂ ಮೂಡಿದೆ.   ಇದೀಗ ದೆಹಲಿಯಿಂದ ಸಚಿವ ವಿ ಸೋಮಣ್ಣ ವಾಪಾಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಗೋವಿಂದರಾಜ ನಗರ, ಚಾಮರಾಜನಗರ ಟಿಕೆಟ್ ಕೇಳಿದ್ದು ಬಿಜೆಪಿ ಹೈಕಮಾಂಡ್​ …

Read More »

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾವಾಗ? ಮಾಹಿತಿ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ!

ಬೆಂಗಳೂರು: ಮೇ 11 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಯನ್ನು ಮಂಗಳವಾರ ಅಥವಾ ಬುಧವಾರ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ. ಪಟ್ಟಿ ಅಂತಿಮಗೊಳಿಸುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದಿದ್ದು ಬಹುಶಃ ಮೊದಲ ಪಟ್ಟಿಯನ್ನು ನಾಳೆ ಅಥವಾ ನಾಡಿದ್ದು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.   ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ‘ಇದನ್ನು ಇಂದು ಸಂಜೆ ಬಿಡುಗಡೆ ಮಾಡುವ …

Read More »

ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಕಮಲನಗರ ಗ್ರಾಮದ ಪಾಲ್ಗೊಫಾರ್ಮ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು 8 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅರುಣ ಮುರಗುಂಡಿ, ಪಿಐ ಬೆಳಗಾವಿ ಗ್ರಾಮೀಣ ರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರ ತಂಡ ಸಂಶಯುಕ್ತ ಆರೋಪಿತನಾದ ಪರಶುರಾಮ ಸಣ್ಣಭೀಮಪ್ಪಾ (28) ಇತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಬೈಕ್ ಗಳನ್ನು ಕಳ್ಳತನ ಮಾಡಿರುವ …

Read More »

ದೇವಸ್ಥಾನದ ಬಳಿ ಬೃಹತ್ ಮರ ಬಿದ್ದು 7 ಜನ ಸಾವು.!

ದೇವಸ್ಥಾನದ ಬಳಿ ಬೃಹತ್ ಮರ ಬಿದ್ದು 7 ಜನ ಸಾವನ್ನಪ್ಪಿದ ದುರ್ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರ್ ತಾಲೂಕಿನ ಪರಾಸ್ ಸಂಸ್ಥಾನದಲ್ಲಿ ನಡೆದಿದೆ.     ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಇದೇ ವೇಳೆ ಪಾರಸ್ ಗ್ರಾಮದ ಬಾಬೂಜಿ ಮಹಾರಾಜ ಸಂಸ್ಥಾನದಲ್ಲಿ ಸಂಜೆ ಆರತಿ ನಡೆಯುತ್ತಿದ್ದಾಗ ದೇವಸ್ಥಾನದ ಆವರಣದಲ್ಲಿರುವ ತಗಡಿನ ಶೆಡ್‌ನ ಕೆಳಗೆ ಆರತಿಗೆ ಹಲವರು ಸೇರಿದ್ದರು ಎಂದು ವರದಿಯಾಗಿದೆ. ದೇವಸ್ಥಾನದ ಬಳಿ ಇದ್ದ ದೊಡ್ಡ ಬೇವಿನ ಮರವೊಂದು …

Read More »

ಬೆಳಗಾವಿ ಉತ್ತರ ಮತಕ್ಷೇತ್ರದಿಂದ ರಾಜಕುಮಾರ ಟೋಪಣ್ಣವರ A.A.P. ಅಭ್ಯರ್ಥಿ

ಬೆಂಗಳೂರು ಆಮ್ ಆದ್ಮ ಪಕ್ಷದಿಂದ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು ರಾಜ್ಯ 28 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ. ಬೆಳಗಾವಿ ನಿಪ್ಪಾಣಿ ಮತಕ್ಷೇತ್ರದಿಂದ ರಾಜೇಶ ಅಣ್ಣಾಸಾಹೇಬ ಬಸವಣ್ಣ, ಬೆಳಗಾವಿ ಉತ್ತರ ಮತಕ್ಷೇತ್ರದಿಂದ ರಾಜಕುಮಾರ ಟೋಪಣ್ಣವರ ಹಾಗೂ ಸವದತ್ತಿ ಮತಕ್ಷೇತ್ರದಿಂದ ಬಾಪುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

Read More »