Breaking News

ಬೀದರ್: 105 ವರ್ಷ ವಯಸ್ಸಿನ ಅಜ್ಜಿ ಬಾಯಲ್ಲಿ ಮೂಡಿತು ಹೊಸ ಹಲ್ಲು

ಬೀದರ್: ಇತ್ತೀಚಿನ ವರ್ಷಗಳಲ್ಲಿ ನೂರು ವರ್ಷ ಪೂರೈಸುವುದೇ ಅಪರೂಪ. ಅಂಥದ್ದರಲ್ಲಿ, ಶತಾಯುಷಿಯಾದವರಿಗೆ ಹೊಸ ಹಲ್ಲು ಚಿಗುರೊಡೆದರೆ? ಇದೊಂಥರಾ ವಿಶೇಷ ಅಲ್ಲವೇ? ಬೀದರ್ ಜಿಲ್ಲೆಯಲ್ಲೂ ಇಂಥದ್ದೇ ಒಂದು ವಿಶೇಷ ಕಂಡುಬಂದಿದೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಶತಾಯುಷಿ ಗಂಗಮ್ಮ ಗುರಪ್ಪ ಕಣ್ಣೂರ್ ಜನವಾಡ್ ಎಂಬ ಅಜ್ಜಿಗೆ ಹೊಸ ಹಲ್ಲು ಮೂಡಿದೆ. ಇಷ್ಟು ಇಳಿ ವಯಸ್ಸಿನಲ್ಲಿ ಹೊಸದಾಗಿ ಹಲ್ಲು ಚಿಗುರೊಡೆದರೆ ಅಂಥವರಿಗೆ ಈ ಭಾಗದಲ್ಲಿ ತೊಟ್ಟಿಲೋತ್ಸವ ಮಾಡಲಾಗುತ್ತದೆ. 105 ವರ್ಷ …

Read More »

ಅಕ್ರಮವಾಗಿ ಗೋವು ಸಾಗಾಟ ವಾಹನ, ಗೋವುಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ

ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟ ವೇಳೆ ಪೊಲೀಸರು ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ. ದಾಳಿ ವೇಳೆ ಡ್ರೈವರ್ ಸ್ಥಳದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಾಹನದಲ್ಲಿ 8ಕ್ಕೂ ಹೆಚ್ಚು ಗೋವುಗಳ ರಕ್ಷಣೆ ಮಾಡಲಾಗಿದೆ. ಕೆಎ 28 ಬಿ 0742 ನಂಬರಿನ ವಾಹನದಲ್ಲಿ ಗೋವು ಸಾಗಾಟ ಮಾಡಲಾಗುತ್ತಿತ್ತು. ವಾಹನ, ಗೋವುಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಕಳಸಾ ಬಂಡೂರಿ ರೈತರ ಮೇಲೆ ಬಂಧನ ವಾರಂಟ್ ಜಾರಿ

ಕುಡಿಯುವ ನೀರಿಗಾಗಿ ಹೋರಾಟ ಮಾಡಿದ ಕಳಸಾ ಬಂಡೂರಿ ರೈತರ ಮೇಲೆ ಬಂಧನ ವಾರಂಟ್ ಜಾರಿ ಮಾಡಿ ರೈತರ ಮನೆ ಬಾಗಿಲಿಗೆ ವಾರಂಟ್ ನೋಟಿಸ್ ಅಂಟಿಸುವ ಮೂಲಕ ಮತ್ತೆ ರೈತರಿಗೆ ಕಿರುಕುಳ ನೀಡಲು ಪ್ರಾರಂಭಿಸಿದೆ. ಹೌದು 2016 ರಲ್ಲಿ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ಕುಡಿಯುವ ನೀರಿಗಾಗಿ ನಮ್ಮ ಪಾಲಿನ ನೀರನ್ನ ಹುಬ್ಬಳ್ಳಿ ಧಾರವಾಡಕ್ಕೆ ಹೋಗವುದನ್ನು ತಡೆಯಲು ಅಮ್ಮಿನಭಾವಿ ಗ್ರಾಮದ ಬಳಿವಿರುವ ಜಾಕ್ವಲ್ ಬಂದ್ ಮಾಡಲು ಹೋದಾಗ ರಸ್ತೆ ಪ್ರತಿಭಟನೆ ಹೋರಾಟದಲ್ಲಿ …

Read More »

ರಮೇಶ ಜಾರಕಿಹೊಳಿ,BJP ನಾಯಕರು ನಮಗೆ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದ:ಮಹೇಶ ಕುಮಟಳ್ಳಿ ,

ಪಕ್ಷದ ಮೇಲೆ ಮುನಿಸಿಕೊಂಡು ರಾಜೀನಾಮೆಗೆ ಸವದಿ ನಿರ್ಧಾರ, ಅಥಣಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹೇಶ ಕುಮಟಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ್ದಾರೆ. ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ ಮಹೇಶ ಕುಮಟಳ್ಳಿ ಅಥಣಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹೇಶ ಕುಮಟಳ್ಳಿ , ಇಲ್ಲಿಯವರೆಗೂ ನಾನು ಮಾಡಿದ ಅಭಿವೃದ್ದಿ ಕೆಲಸಗಳು ನನ್ನ ಕೈ ಹಿಡಿಯುತ್ತೆ, ಕಳೆದ ಬಾರಿ ನೀವು ಕಾಂಗ್ರೇಸ್ ನಿಂದ ಬಂದು ಬಿಜೆಪಿಗೆ ಸೇರಿದ್ರಿ,ಈಗ ಸವದಿಯವರು ಬಿಜೆಪಿ ಬಿಟ್ಟು ಕಾಂಗ್ರೇಸ್ ಹೋಗ್ತಿದ್ದಾರೆ ಇದಕ್ಕೆ …

Read More »

ಕೇಂದ್ರ ಕಾರಾಗೃಹ ಮೇಲೆ ಪೊಲೀಸ್ ಮಿಂಚಿನ ದಾಳಿ

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹ ( ಜೈಲು)ದ ಮೇಲೆ ಬುಧವಾರ ಬೆಳಗಿನ ಜಾವ ಕಲಬುರಗಿ ಮಹಾನಗರ ಪೊಲೀಸ್ ಉಪ ಆಯುಕ್ತರ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆದಿದೆ. ಪೊಲೀಸ್ ಆಯುಕ್ತ ಆರ್. ಚೇತನ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀ ನಿವಾಸಲು ನೇತೃತ್ವದಲ್ಲಿ ತಂಡಗಳ ದಾಳಿ ನಡೆಸಿ ವ್ಯಾಪಕ ಶೋಧ ನಡೆಸಲಾಗಿದೆ.   ಬೆಳಗಿನ ಜಾವ 5.30ರ ಸುಮಾರಿಗೆ 120 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡ ತಂಡ ದಾಳಿ ನಡೆಸಿ …

Read More »

ಯಾವುದೇ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಹೊಂದುವುದಕ್ಕೆ ಸಿದ್ಧ

ಹುಬ್ಬಳ್ಳಿ: ಯಾವುದೇ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಹೊಂದುವುದಕ್ಕೆ ಸಿದ್ಧ. ಆದರೆ ಗೌರವಯುತವಾಗಿ ಹೊರ ಹೋಗಬೇಕು. ಈ ರೀತಿಯಾಗಿ ಹೋಗುವುದಲ್ಲ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಮಾಜಿ ಸಿಎಂ ಜಗದೀಶ ಶೆಟ್ಟರ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ.   ದೆಹಲಿಗೆ ತೆರಲುವ ಮುನ್ನ ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಪೋನ್ ಮಾಡಿದ್ದಕ್ಕೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಪಾಸಿಟಿವ್ ಹೋಪ್‌ನಲ್ಲಿ ನಾನಿದ್ದೇನೆ. ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ. …

Read More »

ಮಾರಿಕಾಂಬಾ ದೇವಾಲಯದಲ್ಲಿ ಬಿ ಫಾರಂ ಅರ್ಪಿಸಿ ಪೂಜೆ ಸಲ್ಲಿಸಿದ

ಶಿರಸಿ: ಮಾಜಿ ‌ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರದ ಬಿ ಫಾರಂಗಳನ್ನು ಮಾರಿಕಾಂಬಾ ದೇವಾಲಯದಲ್ಲಿ ಪೂಜೆ‌ ಮಾಡಿಸಿದ ಘಟನೆ ಬುಧವಾರ ನಡೆಯಿತು. ಬುಧವಾರ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಜೆಡಿಎಸ್ ರ‍್ಯಾಲಿಗೆ ಚಾಲನೆ ಕೊಡುವ ಮೊದಲು ದೇವಿ ದರ್ಶನ ಪಡೆದು ಬಿ ಫಾರಂ ಪೂಜೆ ಸಲ್ಲಿಸಿದರು‌.   ಬಳಿಕ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಜೆಡಿಎಸ್ ಕಾರ್ಯಕರ್ತರು 50 ಅಡಿಗೂ ಎತ್ತರದ ಅನಾನಸ್ ಹಾರವನ್ನು ಕ್ರೇನ್ ಮೂಲಕ ಮಾಜಿ …

Read More »

ಸಚಿವ ಅಂಗಾರರಿಗೆ ಕೋಕ್: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನದ ಹೊಗೆ

ಸುಳ್ಯ: ಸಚಿವ ಎಸ್. ಅಂಗಾರರವರಿಗೆ ಚುನಾವಣಾ ಟಿಕೆಟ್ ನೀಡದ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟ್ ವಳಲಂಬೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ರಾಜೀನಾಮೆ ಸಂದೇಶ ಕಳುಹಿಸಿರುವ ಅವರು, ಕಳೆದ 30 ವರ್ಷಗಳ ಕಾಲ ಕ್ಷೇತ್ರ ಮತ್ತು ಪಕ್ಷಕ್ಕೆ ಯಾವುದೇ ಚ್ಯುತಿ ಬಾರದ ರೀತಿ ದುಡಿದ ಸಾಮಾನ್ಯ ಮನೆತನದಿಂದ ಬಂದಿರುವ ಸರಳ ಸಜ್ಜನಿಕೆಯ ಎಲ್ಲರ ಜನಮನ ಗೆದ್ದಿರುವ ಪಕ್ಷಾತೀತವಾಗಿ …

Read More »

ಹುಬ್ಬಳ್ಳಿ : ಪೂರ್ವ ಕ್ರಾಂತಿಕಿರಣ, ಕುಂದಗೋಳ ಎಂ.ಆರ್.ಪಾಟೀಲ ಸ್ಪರ್ಧೆ

ಹುಬ್ಬಳ್ಳಿ : ಬಿಜೆಪಿ ಪಕ್ಷದ ಟಿಕೆಟ್ ಫೈನಲ್ ಆಗಿದ್ದು, ಇದೀಗ ಬಿಡುಗಡೆಯಾಗಿದೆ. ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಡಾ.ಕ್ರಾಂತಿ ಕಿರಣಗೆ ಬಿಜೆಪಿ ಟಿಕೆಟ್ , ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಎಂ.ಆರ್.ಪಾಟೀಲಗೆ ಟಿಕೆಟ್ ದೊರೆತಿದ್ದು, ಬಿಜೆಪಿ ಪಾಳೆಯದಲ್ಲಿ ಹೊಸ ಮುಖಗಳಿಗೆ ಅವಕಾಶ ದೊರೆತಂತಾಗಿದೆ.   ಗ್ರಾಮೀಣ ಭಾಗದಿಂದ ಶಾಸಕ ಅಮೃತ ದೇಸಾಯಿ, ನವಲಗುಂದ ಕ್ಷೇತ್ರದಿಂದ ಸಚಿವ ಶಂಕರಪಾಟೀಲ ಮುನೇನಕೊಪ್ಪ ಸ್ಪರ್ಧೆಗೆ ಟಿಕೆಟ್ ಫೈನಲ್ ಆಗಿದ್ದು, ಪಶ್ಚಿಮ ಕ್ಷೇತ್ರದಿಂದ ಶಾಸಕ ಅರವಿಂದ ಬೆಲ್ಲದ …

Read More »

ಬಿಜೆಪಿ ಟಿಕೆಟ್​ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವೇ?

ಮಂಗಳೂರು: ಬಿಜೆಪಿಗೆ ರಾಜೀನಾಮೆ ನೀಡಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಿರ್ಧರಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ. ನಾಳೆ ಕ್ಷೇತ್ರದ ಜನರ ಜತೆ ಚರ್ಚಿಸಿ ಘೋಷಣೆ ಮಾಡುತ್ತೇನೆ. ಬಿಜೆಪಿ ಟಿಕೆಟ್​ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವೇ? ಅಥಣಿ ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಅನೇಕ ಪಕ್ಷದ ಮುಖಂಡರು ನನ್ನನ್ನು ಸಂಪರ್ಕ …

Read More »