ಮುಂಬೈ: ಭೀಕರ ರಸ್ತೆ ಅಪಘಾತದಲ್ಲಿ 13 ಜನರು ಸಾವನ್ನಪ್ಪಿರುವ ಘತನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಖಾಸಗಿ ಬಸ್ ಪಲ್ಟಿಯಾಗಿ 13 ಜನರು ಮೃತಪಟ್ಟಿದ್ದು, 29 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಖೋಪೋಲಿ ನಗರದಲ್ಲಿ ಈ ದುರಂತ ಸಂಭವಿಸಿದೆ.
Read More »ಮಹಾರಾಷ್ಟ್ರದಿಂದ 6 ಟಿಎಂಸಿ ನೀರು ಬಿಡುಗಡೆಗೆ ಸರ್ಕಾರದ ಮನವಿ
ಬೆಳಗಾವಿ: ಬೆಳಗಾವಿ, ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೇ ತಿಂಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಲಿರುವುದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ತಲಾ ಮೂರು ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿರುತ್ತದೆ. ಈ ಕುರಿತು ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಅವರು, …
Read More »ಸಿಎಂ ರೇಸ್ ನಲ್ಲಿದ್ದವರಿಗೆ ಟಿಕೆಟ್ ಸಿಗದಂತೆ ಮಾಡಿದ್ದು ಜೋಶಿ :ಯು.ಟಿ.ಖಾದರ್,
ಮಂಗಳೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣ ಅಕಣ ರಂಗೇರಿದೆ. ಹಿರಿಯ ನಾಯಕರಿಗೆ ಬಿಜೆಪಿ ಟಿಕೆಟ್ ನೀಡದ ವಿಚಾರವಾಗಿ ಮಾತನಾಡಿರುವ ಪರಿಷತ್ ಉಪನಾಅಕ ಯು.ಟಿ.ಖಾದರ್, ಹಿಂದೆಲ್ಲ ಬಿಜೆಪಿಯಲ್ಲಿ ಮೂರು ಬಾಗಿಲಿತ್ತು, ಈಗ 25 ಬಾಗಿಲುಗಳಾಗಿವೆ ಎಂದು ಟಾಂಗ್ ನೀಡಿದರು. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ಈಬಾರಿ ಟಿಕೆಟ್ ಘೋಷಣೆಯಲ್ಲಿಯೇ ಎಲ್ಲವೂ ಗೊತ್ತಾಗುತ್ತದೆ. ಯಾರೆಲ್ಲ ಮುಖ್ಯಮಂತ್ರಿ ರೇಸ್ ನಲ್ಲಿದ್ದರು, ಅವರೆಲ್ಲರಿಗೂ ಟೆಕೆಟ್ ಸಿಗದಂತೆ ಪ್ರಹ್ಲಾದ್ ಜೋಶಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಯಾರೂ ಮುಖ್ಯಮಂತ್ರಿ …
Read More »ಶೆಟ್ಟರ್ಗೆ ಟಿಕೆಟ್ ತಪ್ಪಿಸುತ್ತಿರುವುದು ನಾವಲ್ಲ.
ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸುತ್ತಿರೋದು ನಾವಲ್ಲ. ನೂರಾರು ಜನ ನೂರಾರು ಆರೋಪ ಮಾಡ್ತಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸುಳ್ಳು ವದಂತಿ ಎಂದು ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈವರೆಗೂ ನಾವು ಪಕ್ಷದ ವರಿಷ್ಠರ ಜತೆ ಸಂಪರ್ಕದಲ್ಲಿದ್ದೇವೆ. ನಾವು ಹಾಗೂ ಶೆಟ್ಟರ್ ಬಹಳ ಆತ್ಮೀಯರು. ಯಾವುದೇ ಕಾರಣಕ್ಕೂ ಅಂತಹ ಕೆಲಸ ಮಾಡಲ್ಲ. ಅವರಿಗೆ ಶೆಟ್ಟರ್ ಟಿಕೆಟ್ ಕೊಡಿಸಲು ಬಹಳ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ …
Read More »ಬೆಂಬಲಿಗರ ಸಭೆ ಕರೆದ ಬೆನ್ನಲ್ಲೇ ಶೆಟ್ಟರ್ ಅವರ ಮನವೊಲಿಸುವ ಜೋಶಿ ಯತ್ನ
ಹುಬ್ಬಳ್ಳಿ: ವಿಧಾನಾಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಈಗಾಗಲೇ ಕೆಲ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಅನೇಕರಿಗೆ ಪಕ್ಷದಿಂದ ಟಿಕೆಟ್ ದೊರೆತ್ತಿದೆ. ಇನ್ನು ಕೆಲವರಿಗೆ ಟಿಕೆಟ್ ದೊರೆತ್ತಿಲ್ಲ. ಇದರ ಮಧ್ಯೆ ಇನ್ನು ಕೆಲ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಿಲ್ಲ. ಹೀಗಾಗಿ ಶೆಟ್ಟರ್ ಟಿಕೆಟ್ ಘೋಷಣೆ ವಿಳಂಬ ಹಿನ್ನೆಲೆ ಬೆಂಬಲಿಗರ ಸಭೆಗೆ ತಯಾರಿ ನಡೆಸಿದ್ದರು. ಇದರ ಮಧ್ಯೆ ಶೆಟ್ಟರ್ ನಿವಾಸಕ್ಕೆ ಜೋಶಿ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ …
Read More »ಹಿಡಕಲ್ ಡ್ಯಾಂ ನೀರು ಪೂರೈಕೆ ಪೈಪ್ ಭಗ್ನ; 50 ಅಡಿ ಎತ್ತರ ಪುಟಿದ ನೀರು
ಬೆಳಗಾವಿ: ಹಿಡಕಲ್ ಡ್ಯಾಂನಿಂದ ಬೆಳಗಾವಿ ನಗರಕ್ಕೆ ನೀರು ಪೂರೈಸುವ ಪೈಪ್ ಲೈನ್ ಶನಿವಾರ ಒಡೆದ ಪರಿಣಾಮ ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ. ಖನಗಾಂವ ಬಿ.ಕೆ. ಗ್ರಾಮದ ಬಳಿ ಒತ್ತಡದಿಂದ ಒಡೆದ ಪೈಪ್ ಪೈನ್ ನಿಂದ ನೀರು ಸುಮಾರು 50 ಅಡಿ ಎತ್ತರಕ್ಕೆ ಚಿಮ್ಮಿತ್ತು. ಹಲವರು ಇದನ್ನು ಕಂಡು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ ಬಿರು ಬೇಸಿಗೆಯಲ್ಲಿ ನೀರಿನ ಅಪವ್ಯಯವಾಗುತ್ತಿರುವುದಕ್ಕೆ ಮರುಗಿದರು. ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಈ ಭಾರಿ ಪ್ರಮಾಣದ ನೀರಿನ ಹೊರಹೊಮ್ಮುವಿಕೆಯಿಂದ ಕೆಲ ಕಾಲ …
Read More »ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ, ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ: ಡಿಸಿ
ಬೆಳಗಾವಿ: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಗೆ ನಿಯೋಜಿತಗೊಂಡಿರುವ ಎಲ್ಲ 18 ಮತಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜತೆ ಸುವರ್ಣ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶನಿವಾರ ಸಭೆ ನಡೆಸಿದರು. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವೆಚ್ಚ ವೀಕ್ಷಕ ಸುಬೋಧ ಸಿಂಗ್ ಮಾತನಾಡಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಿಯೋಜಿಸಲಾಗಿರುವ ವಿವಿಧ ತಂಡಗಳು …
Read More »ಶಿಗ್ಗಾಂವಿಯಲ್ಲಿ ಗ್ರಾಮದೇವತೆ ದರ್ಶನ ಪಡೆದು ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ
ಹಾವೇರಿ/ಧಾರವಾಡ: ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು. ಇಂದು ಸಿಎಂ ಬೆಂಗಳೂರಿನಿಂದ ಶಿಗ್ಗಾಂವಿಗೆ ಆಗಮಿಸಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ಶಿವಕುಮಾರ್ ಉದಾಸಿ, ಸಚಿವ ಸಿ.ಸಿ ಪಾಟೀಲ್, ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರು ಮತ್ತು ಕುಟುಂಬಸ್ಥರು ಸಿಎಂ ಬೊಮ್ಮಾಯಿಗೆ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಿಎಂ, ಕ್ಷೇತ್ರದಲ್ಲಿ ಈ ಹಿಂದಿನಕ್ಕಿಂತಲೂ ಹೆಚ್ಚಿನ ಬೆಂಬಲ ಇದೆ. ತಾಲೂಕಿನ ಅಭಿವೃದ್ಧಿಯನ್ನು …
Read More »ಉತ್ತರ ಕನ್ನಡ ಜಿಲ್ಲೆಯ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳದೆ ದಿನನಿತ್ಯ ಸವಾರರು ಪರದಾಡುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳದೆ ದಿನನಿತ್ಯ ಸವಾರರು ಪರದಾಡುವಂತಾಗಿದೆ. ಧೂಳುಮಯವಾದ ಹೆದ್ದಾರಿಯ ಸಮಸ್ಯೆಯ ಕುರಿತು ಸ್ಥಳೀಯರು ಹಾಗು ಸವಾರರು ಆರೋಪ ಮಾಡುತ್ತಿರುವುದು.ಕಾರವಾರ: ಅದು ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ರಾಷ್ಟ್ರೀಯ ಹೆದ್ದಾರಿ. ಇಲ್ಲಿ ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಉರುಳಿದರೂ ಈವರೆಗೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅರೆ ಬರೆ ಕಾಮಗಾರಿಯಾಗಿರುವ ಹೆದ್ದಾರಿಯಲ್ಲಿ ತಗ್ಗು, ದಿನ್ನೆ, ಧೂಳಿನ ಮಧ್ಯ ಅನಿವಾರ್ಯವಾಗಿ ವಾಹನಗಳು ಸಂಚಾರ ಮಾಡುವಂತಾಗಿದೆ. …
Read More »ಜೆಡಿಎಸ್ ಭರವಸೆ ಪತ್ರ ಬಿಡುಗಡೆ: ಮಾತೃಶ್ರೀ, ಮಹಿಳಾ ಸಬಲೀಕರಣ, ರೈತ ಚೈತನ್ಯ ಸೇರಿ 12 ಭರವಸೆ ನೀಡಿದ ಜೆಡಿಎಸ್
ಬೆಂಗಳೂರು: ಕರುನಾಡ ಜನತೆಗಾಗಿ ಜೆಡಿಎಸ್ 12 ಭರವಸೆಯ ಪತ್ರ ಸಿದ್ದಪಡಿಸಿದ್ದು, ಇಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಿಡುಗಡೆ ಮಾಡಿದ್ದಾರೆ. ಪದ್ಮನಾಭನಗರದಲ್ಲಿರುವ ಗೌಡರ ನಿವಾಸದಲ್ಲಿ ಇಂದು ಭರವಸೆ ಪತ್ರ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, ಜನತಾ ಪ್ರಣಾಳಿಕೆ ಕರುಡು ರಚನಾ ಸಮಿತಿಯ ಅಧ್ಯಕ್ಷ ಬಿ.ಎಂ.ಫಾರೂಕ್ ಅವರು, ಸದಸ್ಯರಾದ ಕುಪೇಂದ್ರ ರೆಡ್ಡಿ, ಕೆ.ಎನ್. ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಜೆಡಿಎಸ್ ಪಕ್ಷ ಅಧಿಕಾರಕ್ಕೆ …
Read More »