ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಮುಖಂಡರ ನಡುವಿನ ವಾಕ್ಸಮರವೂ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಚಿತ್ರನಟ ಕಿಚ್ಚ ಸುದೀಪ್ ಅವರು ಬೊಮ್ಮಾಯಿ ಅವರಿಗೆ ಸಾಥ್ ನೀಡಿದ್ದರು. ಇದೇ ವೇಳೆ, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಜೆ.ಪಿ.ನಡ್ಡಾ, ‘ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ …
Read More »ರಾಜ್ಯದ 20 ಕಡೆ ಮೋದಿ ರ‍್ಯಾಲಿ: ಸಿಎಂ ಬೊಮ್ಮಾಯಿ
ಕಲಬುರಗಿ: ರಾಜ್ಯದ 20 ಕಡೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚುನಾವಣಾ ರ‍್ಯಾಲಿ ಹಾಗೂ ಪ್ರಚಾರ ಸಭೆಗಳನ್ನು ಆಯೋಜಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅಫಜಲಪುರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಎಲ್ಲ ವಿಭಾಗಗಳಲ್ಲಿ ಜತೆಗೆ ಪ್ರಮುಖ ಕ್ಷೇತ್ರಗಳಲ್ಲಿ ಮೋದಿ ಅವರು ಚುನಾವಣ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡುವರು ಜತೆಗೆ ರ‍್ಯಾಲಿ ನಡೆಸುವರು.ಕಲ್ಯಾಣ ಕರ್ನಾಟಕದ …
Read More »ಲಿಂಗಾಯತ vs ಕುರುಬ: ಯಡಿಯೂರಪ್ಪ ಮಗನಿಗೆ ಮಣೆ ಹಾಕುವ ಬಿಜೆಪಿ ಹೈಕಮಾಂಡ್‌ಗೆ ಈಶ್ವರಪ್ಪ ಮಗನ ಬಗ್ಗೆ ಯಾಕಿಲ್ಲ ಚಿಂತೆ?
ಬೆಂಗಳೂರು, ಏಪ್ರಿಲ್. 20: ಇದು ಚುನಾವಣಾ ಸಮಯ. ಈಗ ನಡೆಯುವ ಪ್ರತಿ ವಿಷಯಕ್ಕೂ ಚುನಾವಣೆಯ ಲಿಂಕಿರುತ್ತದೆ. ಅಂತಹದರಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನಿರಾಕರಿಸಿದರೇ ಅದರ ಸುತ್ತಲೂ ಒಂದು ರೀತಿಯ ಊಹಾಪೋಹಗಳು, ವದಂತಿಗಳು ಹರಡುವುದು ಸಾಮಾನ್ಯ. ಈಗ ಅಂತಹದ್ದೇ ವದಂತಿಗಳ ಕೋಟೆಯಲ್ಲಿ ಸುತ್ತಿಕೊಂಡಿದ ಶಿವಮೊಗ್ಗ ವಿಧಾನಸಭಾ ಕ್ಷೇತ್ರ. ಎಸ್. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್ . ಈಶ್ವರಪ್ಪ. ತಮ್ಮ ಮಗಣಿಗಾಗಿ ಟಿಕೆಟ್ ಬೇಡಿಕೆಯಿಟ್ಟು, ರಾಜಕೀಯ ನಿವೃತ್ತಿ …
Read More »ಕೊಪ್ಪಳ: ಮೆರವಣಿಗೆ ವೇಳೆ ಬೆದರಿದ ಎತ್ತುಗಳು; ಬಿದ್ದ ಜೆಡಿಎಸ್ ಕಾರ್ಯಕರ್ತರು
ಕೊಪ್ಪಳ: ಬಿಜೆಪಿಗೆ ಸೆಡ್ಡು ಹೊಡೆದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ಸಿ.ವಿ. ಚಂದ್ರಶೇಖರ್ ಅದ್ದೂರಿ ಮೆರವಣಿಗೆ ಮೂಲಕ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಕ್ಷೇತ್ರದ ವಿವಿಧ ಗ್ರಾಮಗಳಿಂದ ಪಕ್ಷದ ಕಾರ್ಯಕರ್ತರು ಹಾಗೂ ಚಂದ್ರಶೇಖರ್ ಬೆಂಬಲಿಗರು ಚಕ್ಕಡಿ, ಎತ್ತಿನ ಬಂಡಿಗಳನ್ನು ತೆಗೆದುಕೊಂಡು ಬಂದಿದ್ದರು. ಗವಿಮಠದ ಮುಂಭಾಗದ ರಸ್ತೆಯಲ್ಲಿ ಎತ್ತಿನಬಂಡಿಯಲ್ಲಿ ಸಾಕಷ್ಟು ಜನ ಕಾರ್ಯಕರ್ತರು ಹತ್ತಿದಾಗ ಹಿಂಬಂಡಿಯಾಗಿ ರಸ್ತೆ ಮೇಲೆಯೇ ಬಿದ್ದರು. ಮೆರವಣಿಗೆಯಲ್ಲಿ ಡಿಜೆ ಅಬ್ಬರ ಮತ್ತು ಹಲಗೆ ಶಬ್ದಕ್ಕೆ ಎತ್ತುಗಳು …
Read More »ಸರಳ ರೀತಿಯಲ್ಲಿ ರಾಹುಕಾಲದಲ್ಲಿ ಮೌಢ್ಯಕ್ಕೆ ಮತ್ತೊಮ್ಮೆ ಸೆಡ್ಡು ಹೊಡೆದು ನಾಮ ಪತ್ರ ಸಲ್ಲಿಸಿದ ಸಾಹುಕಾರ ಸತೀಶ್ ಜಾರಕಿಹೊಳಿ
ಹುಕ್ಕೇರಿ:ಸತೀಶ್ ಜಾರಕಿಹೊಳಿ ಮೌಢ್ಯಕ್ಕೆ ಸೆಡ್ಡು ಹೊಡೆದು ಮತ್ತೆ ರಾಹುಕಾಲದಲ್ಲಿ ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರತಿ ಬಾರಿ ಯಂತೆ ಈ ಬಾರಿಯೂ ಕೂಡ ಅತ್ಯಂತ ಸರಳ ರೀತಿಯಲ್ಲಿ ಕೆಲವ ಐದೇ ಜನ ಚುನಾವಣಾ ಕಚೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದ್ದಾರೆ https://fb.watch/j-WnDh1nbM/?mibextid=2Rb1fB ಯಾರ ಬಗ್ಗೆಯೂ ಟೀಕೆ ಮಾಡದೆ ಜನರನ್ನ ಸೇರಿಸದೆ ಸರಳ ರೀತಿಯಲ್ಲಿ ನಾಮ ನಿರ್ದೇಶನ ಮಾಡುವುದು ಬಹುತೇಕ ರಾಜಕಾರಣಿಗಳಲ್ಲಿ ಸತೀಶ್ ಜಾರಕಿಹೊಳಿ ಮುಂಚಿನವರು ಎನ್ನ ಬಹುದು …
Read More »ವಿಧಾನಸಭಾ ಚುನಾವಣಾ ಅಖಾಡದಲ್ಲಿ ಅಚ್ಚರಿ ಬೆಳವಣಿಗೆ
ಬೆಂಗಳೂರು: ವಿಧಾನಸಭಾ ಚುನಾವಣಾ ಅಖಾಡದಲ್ಲಿ ಅಚ್ಚರಿ ಬೆಳವಣಿಗೆ ನಡೆದಿದ್ದು, ಸಂಸದ ಡಿ.ಕೆ.ಸುರೇಶ್ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಡಿ.ಕೆ.ಸುರೇಶ್ ಪದ್ಮನಾಭನಗರದಿಂದ ನಾಮಪತ್ರ ಸಲ್ಲಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಕೊನೇ ಕ್ಷಣದಲ್ಲಿ ಡಿ.ಕೆ.ಸುರೇಶ್ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದು, ಅಚ್ಚರಿ ಮೂಡಿಸಿದೆ.
Read More »ಜನರು ಕೊಟ್ಟ ದೇಣಿಗೆಯೇ ಮುತಾಲಿಕ್ ಅವರ ಆದಾಯದ ಮೂಲ
ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ನಾಮಪತ್ರ ಸಲ್ಲಿಸಿದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ ಪ್ರಮೋದ ಮುತಾಲಿಕ್ ಕೈಯಲ್ಲಿ ₹10,500 ನಗದು, ಖಾತೆಯಲ್ಲಿ ₹3,000 ಹಾಗೂ ಅಂಚೆ ಇಲಾಖೆಯ ಎನ್‌ಎಸ್‌ಸಿ ಬಾಂಡ್‌ನಲ್ಲಿ ₹2.50 ಲಕ್ಷ ಠೇವಣಿ ಸೇರಿ ₹2.63 ಲಕ್ಷ ಹಣ ಹೊಂದಿದ್ದಾರೆ. ಇದರ ಹೊರತಾಗಿ ಯಾವುದೇ ಆಸ್ತಿ, ಸ್ವಂತ ವಾಹನ ಇಲ್ಲ. ಹಾಗೆಯೇ ಸಾಲವನ್ನೂ ಮಾಡಿಲ್ಲ. ಅವಿವಾಹಿತರಾಗಿರುವ ಮುತಾಲಿಕ್ …
Read More »ಹಾವೇರಿ: ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶ
ಹಾವೇರಿ: ನಗರದ ಹೊರವಲಯದಲ್ಲಿರುವ ಅಜ್ಜಯ್ಯನ ಗುಡಿ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಾವೇರಿ ಎಸ್.ಎಸ್.ಟಿ ತಂಡದ ಅಧಿಕಾರಿಗಳು ₹6 ಕೋಟಿ 90 ಲಕ್ಷ ಮೌಲ್ಯದ ಚಿನ್ನಾಭರಣಗಳು ಎಂದು ಅಂದಾಜಿಸಿದ್ದಾರೆ. ಹುಬ್ಬಳ್ಳಿಯಿಂದ ಹಾವೇರಿ ಮತ್ತು ದಾವಣಗೆರೆಯ ಚಿನ್ನದ ಅಂಗಡಿಗಳಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸಾಗಿಸಲಾಗುತ್ತಿತ್ತು. 11 ಕೆ.ಜಿ.ಯಷ್ಟು ಚಿನ್ನ, 70 …
Read More »ಶೇ 3ರಷ್ಟು ಲಿಂಗಾಯತರ ಮತ ಕಾಂಗ್ರೆಸ್‌ನತ್ತ: ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಬಿಜೆಪಿ ತ್ಯಜಿಸಿ ಜಗದೀಶ ಶೆಟ್ಟರ್ ಮತ್ತ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದರಿಂದ ವೀರಶೈವ ಲಿಂಗಾಯತರ ಶೇ 2ರಿಂದ 3ರಷ್ಟು ಮತ ಪಕ್ಷಕ್ಕೆ ಬರಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಮ್ಮ ಸಮೀಕ್ಷೆ ಪ್ರಕಾರ ನಾವು 141 ಸೀಟು ಗೆಲ್ಲುತ್ತಿದ್ದೆವು. ಆದರೆ, ಈ ಇಬ್ಬರ ಸೇರ್ಪಡೆಯಿಂದ 150 ಸೀಟು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಕಾಂಗ್ರೆಸ್ ಸಿದ್ಧಾಂತ ಒಪ್ಪಿ …
Read More »ಲಕ್ಷ್ಮಣ ಸವದಿ ಆಸ್ತಿ ಎಷ್ಟು?
ಅಥಣಿ: ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಉಪಮುಖ್ಯಮಂತ್ರಿಯೂ ಆದ ಲಕ್ಷ್ಮಣ ಸವದಿ ಕೋಟಿ ವೀರ ಅನ್ನಿಸಿಕೊಂಡಿದ್ದಾರೆ. ತಮ್ಮ ಹಾಗೂ ಪಿತ್ರಾರ್ಜಿತ ಆಸ್ತಿ ಸೇರಿ ಈ ಬಾರಿ ₹ 29.55 ಕೋಟಿ ಆಸ್ತಿ ಹೊಂದಿದ್ದಾಗಿ ಅವರು ಘೋಷಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ₹ 7 ಲಕ್ಷ ಹಾಗೂ ಪತ್ನಿ ಕೈಯಲ್ಲಿ ₹ 2 ಲಕ್ಷ ಹಣವಿದೆ. ವಿವಿಧ ಬ್ಯಾಂಕು, ಸಹಕಾರ ಸಂಘಗಳಲ್ಲಿ ₹ 6.66 ಕೋಟಿ ಹಣವನ್ನು ಅವರು ಉಳಿತಾಯ ಮಾಡಿದ್ದಾರೆ. …
Read More »