Breaking News

ಕನ್ನಡ ಕಾದಂಬರಿ ಕ್ಷೇತ್ರದ ಪಿತಾಮಹ ಗಳಗನಾಥರು

ಕನ್ನಡ ಸಾಹಿತ್ಯಲೋಕದಲ್ಲಿ ಕಾದಂಬರಿಗಳ ಪ್ರವೇಶವಾದದ್ದೇ ಗಳಗನಾಥರಿಂದ. ಗಳಗನಾಥ ಎನ್ನುವದು ಒಂದು ಗ್ರಾಮ. ಅಲ್ಲಿಯ ಅಧಿದೇವತೆ ಗಳಗನಾಥೇಶ್ವರ. 1868 ರ ಜನೆವರಿ ಐದರಂದು ಜನಿಸಿದ ವೆಂಕಟೇಶ ತಿರಕೋ ಕುಲಕರ್ಣಿಯವರೇ ಗಳಗನಾಥ ಎಂಬ ಹೆಸರಿನಿಂದ ಪ್ರಸಿದ್ಧವಾದವರು. ಏಳನೇ ಇಯತ್ತೆಯತನಕ ಕಲಿತ ಅವರು ಶಿಕ್ಷಕ ತರಬೇತಿಯನ್ನೂ ಪಡೆದು ಶಿಕ್ಷಕರಾಗಿ ಕೆಲಸ ಮಾಡುವುದರೊಂದಿಗೆ ಶತಮಾನದ ಇತಿಹಾಸವುಳ್ಳ “ಸದ್ಬೋಧಚಂದ್ರಿಕೆ” ಎಂಬ ಮಾಸಪತ್ರಿಕೆಯನ್ನೂ ಪ್ರಾರಂಭಿಸಿ ನಡೆಸಿದರು. ಅಗಡಿ ಶೇಷಾಚಲ ಸದ್ಗುರುಗಳ ಪ್ರಭಾವಕ್ಕೊಳಗಾಗಿ ಸಾತ್ವಿಕ ಬದುಕು ಸಾಗಿಸಿದ ಅವರು ಕನ್ನಡಕ್ಕೆ …

Read More »

2 ಕ್ಷೇತ್ರಗಳ ಗಡಿಯಲ್ಲಿ ತೋಟದ ಮನೆಯಲ್ಲಿ ಅಕ್ರಮ ಕುಕ್ಕರ್ ದಾಸ್ತಾನು ಪತ್ತೆ

ಬೆಳಗಾವಿ : ಸವದತ್ತಿ ತಾಲೂಕಿನ ತೆಗ್ಗಿಹಾಳ ಗ್ರಾಮಕ್ಕೆ ಹೊಂದಿಕೊಂಡಂತೆ ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕಿನ ಗಡಿ ಅಂಚಿನಲ್ಲಿರುವ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ‌ ಇಡಲಾಗಿದ್ದ ಕುಕ್ಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಹಾಗೂ ಎಫ್.ಎಸ್.ಟಿ. ತಂಡವು ಶನಿವಾರ(ಏ.22) ಮಧ್ಯಾಹ್ನ ತೋಟದ ಮನೆಯ ತಗಡಿನ ಷೆಡ್ ನಲ್ಲಿದ್ದ ಸುಮಾರು 1600 ಕುಕ್ಕರ್ ಗಳನ್ನು ಪತ್ತೆ ಮಾಡಿರುತ್ತದೆ. ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಿರ್ದೇಶನದಂತೆ …

Read More »

ವಿಧಾನ-ಕದನ 2023: ಮೂರೂ ಪಕ್ಷದಲ್ಲಿ ಮುಂದುವರಿದ ಜಿಗಿದಾಟ

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾದರೂ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳ ಟಿಕೆಟ್‌ ವಂಚಿತರು, ಆಕಾಂಕ್ಷಿತರ “ಪಕ್ಷಾಂತರ ಪ್ರಕ್ರಿಯೆ” ಮುಂದುವರಿದಿದೆ. ಶುಕ್ರವಾರವೂ ಮೂರೂ ಪಕ್ಷಗಳ ಪ್ರಮುಖ ನಾಯಕರು ತಮ್ಮ ಬೆಂಬಲಿಗರ ಸಮ್ಮುಖದಲ್ಲಿ “ಪಕ್ಷ ಬದಲಾವಣೆ” ಮಾಡುವ ಮೂಲಕ ಚುನಾವಣೆಯ ಕಣ ರಂಗೇರಿಸಿದ್ದಾರೆ.   ಬಿಜೆಪಿ ತೊರೆದು ಕೈ ಹಿಡಿದ ನಾಯಕರು ಬೆಂಗಳೂರು: ತುಮಕೂರು ಜಿಲ್ಲೆ ಕೊರಟಗೆರೆಯ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಗಂಗ ಹನುಮಯ್ಯ ಸೇರಿದಂತೆ …

Read More »

ರಂಜಾನ್ ಪ್ರಯುಕ್ತ ಮಂತ್ರಾಲಯ ರಾಯರ ದರ್ಶನ ಪಡೆದ ಮುಸ್ಲಿಮರು

ರಾಯಚೂರು: ರಂಜಾನ್ ಹಬ್ಬದ ಪ್ರಯುಕ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿದ ವಿವಿಧ ಗ್ರಾಮಗಳ ಮುಸ್ಲಿಮರು ಸಾಮೂಹಿಕವಾಗಿ ಶನಿವಾರ ರಾಯರ ದರ್ಶನ ಪಡೆದರು. ರಾಯರ ದರ್ಶನದ ಬಳಿಕ ಮಠದ ಪ್ರಕಾರದಲ್ಲಿ ಕುಳಿತಿದ್ದ ಮುಸ್ಲಿಂ ಭಕ್ತರಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಂತ್ರಾಕ್ಷತೆ ಹಾಗೂ ಪರಿಮಳ ಪ್ರಸಾದ ವಿತರಿಸಿದರು.   ‘ಸಂವಿಧಾನದಲ್ಲಿ ನಂಬಿಕೆ ಹೊಂದಿ ನಿಮ್ಮ ಧರ್ಮ ಪಾಲನೆ ಮಾಡುವುದರ ಜೊತೆಯಲ್ಲಿಯೇ ಎಲ್ಲರೊಂದಿಗೆ ಒಂದಾಗಿ ಬಾಳಬೇಕು. ಇದರಿಂದ ಎಲ್ಲರಿಗೂ …

Read More »

ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿನ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯನ್ನು ಸಿದ್ದುಪ್ರಸಾದ್ ಶಹಾಪುರ (23) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಜೇವರ್ಗಿ ತಾಲೂಕಿನ ಬೀರಾಳ ಬಿ ಗ್ರಾಮದ ನಿವಾಸಿ. ಬಿಕಾಂ ಮುಗಿದು ಎರಡು ವರ್ಷ ಆಗಿದೆ.ಹಾಸ್ಟೆಲ್ ನ ಹಳೆಯ ವಿದ್ಯಾರ್ಥಿ ಆಗಿದ್ದ ಎನ್ನಲಾಗಿದೆ. ಆರ್ಥಿಕ ಸಮಸ್ಯೆ ಇರುವುದರಿಂದ ಹಾಸ್ಟೆಲ್ ನಲ್ಲಿ ವಾಸವಾಗಿದ್ದ. ಕುಟುಂಬದ ಮೂಲಗಳ ಪ್ರಕಾರ ಸಾಲ ಮಾಡಿಕೊಂಡಿದ್ದ.ಮೂರು …

Read More »

ಪಿಯು ಫಲಿತಾಂಶ: ಬೈಲಹೊಂಗಲದ ಸಹನಾ ರಾಜ್ಯಕ್ಕೆ 3 ನೇ ರ‍್ಯಾಂಕ್

ಬೈಲಹೊಂಗಲ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಹನಾ ಉಳವಪ್ಪ ಕಡಕೋಳ ದ್ವೀತಿಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 98.5ಅಂಕ ಪಡೆದು ರಾಜ್ಯಕ್ಕೆ 3 ನೇ ರ‍್ಯಾಂಕ್ ಪಡೆದು ಬೈಲಹೊಂಗಲ ನಾಡಿಗೆ ಕೀರ್ತಿ ತಂದಿದ್ದಾಳೆ. ಕನ್ನಡ 98, ಇಂಗ್ಲಿಷ್ 96, ಇತಿಹಾಸ 100, ಭೂಗೋಳ ಶಾಸ್ತ್ರ100, ಅರ್ಥಶಾಸ್ತ್ರ 99, ರಾಜ್ಯಶಾಸ್ತ್ರ 98 ಅಂಕ ಪಡೆದಿದ್ದಾಳೆ. ತಾಲೂಕಿನ ಆನಿಗೋಳ ಗ್ರಾಮದ ಬಡ ಕೃಷಿ ಕುಟುಂಬದಿಂದ ಬಂದ ಇವಳು ತನ್ನ ಪ್ರಾಥಮಿಕ, ಪ್ರೌಡಶಿಕ್ಷಣವನ್ನು …

Read More »

ರಾಜ್ಯದಲ್ಲಿ BJP ಅಧಿಕಾರ ಹಿಡಿಯುವುದು ನಿಶ್ಚಿತ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಚಿಕ್ಕೋಡಿ: ಮೋದಿ ಜನಪ್ರಿಯತೆ ನೋಡಿ ಕಾಂಗ್ರೆಸ್ ನಾಯಕರು ಕಂಗಾಲಾಗುತ್ತಿದ್ದಾರೆ. ಮೋದಿ ಹಾಗೆ ಕಾಂಗ್ರೆಸ್ ದಲ್ಲಿ ನಾಯಕರಿಲ್ಲ. ಮೀಸಲಾತಿ ಬಗ್ಗೆ ಜನರಿಗೆ ತಪ್ಪು ಹೇಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.   ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಅವರ ನಾಮಪತ್ರ ಸಲ್ಲಿಸಿದ ಬಳಿಕ ಅವರು ಮಾತನಾಡಿ, ಇಡೀ ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ. …

Read More »

ಕೈ ಹಿಡಿದ ವಿಶ್ವನಾಥ್ ಪಾಟೀಲ್; ಆಣೆಕಟ್ಟು ಒಡೆದು ನೀರು ಹರಿದು ಬರುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ; ಡಿ.ಕೆ ಶಿವಕುಮಾರ್

ಬೆಂಗಳೂರು: ‘ಬಿಜೆಪಿ ಪಕ್ಷದ ಆಣೆಕಟ್ಟು ಒಡೆದಿದ್ದು, ಅದರ ನಾಯಕರೆಲ್ಲರೂ ನೀರಿನಂತೆ ಹರಿದು ಬರುತ್ತಿರುವುದಕ್ಕೆ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ್ ಪಾಟೀಲ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದೇ ಸಾಕ್ಷಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಕುಟುಕಿದ್ದಾರೆ ಸದಾಶಿವನಗರ ನಿವಾಸದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ನಾಯಕ ಶಿವಾನಂದ ಪಾಟೀಲ್, ಅರವಿಂದ ಚೌಹಾಣ್ ಸೇರಿದಂತೆ ಅನೇಕ ನಾಯಕರನ್ನು ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ …

Read More »

ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ

ಸವದತ್ತಿ: ಭಾರೀ ಕುತೂಹಲ ಕೆರಳಿಸಿದ್ದ ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರವಾಗಿದೆ. ರತ್ನಾ ಮಾಮನಿ 2018ರ ಹಳೆಯ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಹಾಗೂ ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ವಿಚಾರಣೆ ಆರಂಭವಾಗಿತ್ತು. ವಿಚಾರಣೆಯ ನಂತರ ಚುನಾವಣಾಧಿಕಾರಿ ಡಾ.ರಾಜೀವ ಕೊಲೇರ್ ತೀರ್ಪು ನೀಡಿದ್ದಾರೆ.

Read More »

ಲಂಚ ಪಡೆಯುತ್ತಿದ್ದ ಆರೋಗ್ಯ ಅಧೀಕ್ಷಕನ ಬಂಧನ

ಚೆನ್ನೈ: ನರ್ಸಿಂಗ್ ವಿದ್ಯಾರ್ಥಿಗಳನ್ನು ತರಬೇತಿಗೆ ಕಳುಹಿಸಲು ಲಂಚ ಪಡೆದಿದ್ದ ಆರೋಗ್ಯ ಅಧೀಕ್ಷಕರೊಬ್ಬರನ್ನು ಬಂಧಿಸಲಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಈ ಘಟನೆ ನಡೆದಿದೆ. ವಿಜಿಲೆನ್ಸ್‌ ಗೆ ಬಂದ ನರ್ಸಿಂಗ್ ಸಂಸ್ಥೆಯೊಂದರ ದೂರು ಆಧರಿಸಿ ಜಿಲ್ಲಾ ಆರೋಗ್ಯ ಅಧೀಕ್ಷಕ ಕೃಷ್ಣಮೂರ್ತಿ ಅವರನ್ನು ಬಂಧಿಸಲಾಗಿದೆ. ಎಲ್ಲ ನರ್ಸಿಂಗ್ ಸಂಸ್ಥೆಗಳಲ್ಲಿ ಮೂರು ತಿಂಗಳ ಆಸ್ಪತ್ರೆಯಲ್ಲಿ ತರಬೇತಿ ಕಡ್ಡಾಯವಾಗಿದ್ದು ಇದಕ್ಕೆ ಜಿಲ್ಲಾ ಆರೋಗ್ಯ ಅಧೀಕ್ಷಕರು ಅನುಮತಿ ನೀಡಬೇಕು. ಈ ಅನುಮತಿ ನೀಡಲು ಕೃಷ್ಣಮೂರ್ತಿ ಲಂಚ ಕೇಳಿದ್ದ ಬಗ್ಗೆ ವೆಲ್ಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ …

Read More »