Breaking News

ಬಸ್ ಇಲ್ಲದೆ ಪರದಾಟ ; ಜೆಸಿಬಿಯಲ್ಲಿಯೇ ಶಾಲೆಗೆ ತೆರಳಿದ ವಿದ್ಯಾರ್ಥಿಗಳು.

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಪ್ರೌಢಶಾಲೆ ವಿದ್ಯಾರ್ಥಿಗಳು ಜೆಸಿಬಿ ಯಂತ್ರದಲ್ಲಿ ಕುಳಿತು ಶಾಲೆಗೆ ತೆರಳಿದ ಘಟನೆ ನಡೆದಿದೆ. ಸಮವಸ್ತ್ರ ಧರಿಸಿದ್ದ ಹತ್ತಾರು ವಿದ್ಯಾರ್ಥಿಗಳು ಕೊಪ್ಪಳ-ಕುಷ್ಟಗಿ ರಾಜ್ಯ ಹೆದ್ದಾರಿಯಲ್ಲಿ ಜೆಸಿಬಿಯ ಹಿಂದಿನ ಬಕೆಟ್‌ ಮತ್ತು ಕ್ಯಾಬಿನ್ ಒಳಗೆ ಕುಳಿತು ಶಾಲೆಗೆ ತೆರಳಿದರು. ಶಾಖಾಪುರ ಕ್ರಾಸ್‌ ಸಮೀಪ ವಿದ್ಯಾರ್ಥಿಗಳು ನಿಂತಿದ್ದರೂ ಕುಷ್ಟಗಿಯಿಂದ ಕೊಪ್ಪಳಕ್ಕೆ ಹೋಗುವ ಸಾರಿಗೆ ಬಸ್‌ಗಳು ನಿಲ್ಲುವುದಿಲ್ಲ. ಬಹುತೇಕ ಬಸ್‌ಗಳು …

Read More »

ಲೈಂಗಿಕ ಕಿರುಕುಳ ; ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು, ದಂಡ ವಿಧಿಸಿದ ಕೋರ್ಟ್.!

ಗದಗ : ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕೇಸ್ ಗೆ ಸಂಬಂಧಿಸಿದಂತೆ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಂಕ್ರಪ್ಪ ಹಳ್ಳಿಗುಡಿ ಅವರಿಗೆ 5 ವರ್ಷ ಜೈಲು ಶಿಕ್ಷೆ ನೀಡಿ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಆರೋಪಿ ಶಂಕ್ರಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಎಒ) ಆಗಿದ್ದ ವೇಳೆ ವಿದ್ಯಾರ್ಥಿನಿಯ ಮನೆಗೆ ಹೋಗಿ ಲೈಂಗಿಕ ಕಿರುಕುಳ ನೀಡಿದ್ದನು. ಪ್ರಕರಣ ಕುರಿತಂತೆ ಸಂತ್ರಸ್ತೆ ಬಾಲಕಿ 21 ಫೆಬ್ರವರಿ 2020 ರಲ್ಲಿ‌ …

Read More »

ಹೆಂಡತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಆಕೆಯ ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

ಬೆಳಗಾವಿ : ಬೆಳಗಾವಿ ಜಿಲ್ಲೆಯ ಯರಗಟ್ಟಿ (Yaragatti) ತಾಲೂಕಿನ ಹಲಕಿ ಗ್ರಾಮದ ಸಮೀಪ ಹೆಂಡತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಆಕೆಯ ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ರಮೇಶ್ ಗುಂಜಗಿ(24) ಕೊಲೆಯಾದ ಯುವಕನಾಗಿದ್ದು, ಯಲ್ಲಪ್ಪ ಕಸೊಳ್ಳಿ ಎಂಬಾತ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ನಿವಾಸಿಯಾಗಿರುವ ರಮೇಶ್ ಗುಂಜಗಿ, ಎರಡು ತಿಂಗಳ ಹಿಂದೆ ಮನೆ ಪಕ್ಕದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಈ ವಿಷಯ ತಿಳಿದ …

Read More »

ಸ್ಮಶಾನ ಭೂಮಿ ನೀಡುವಂತೆ ರಸ್ತೆ ಮಧ್ಯೆ ಶವ ವಿಟ್ಟು ಪ್ರತಿಭಟನೆ

ಧಾರವಾಡ: ಸ್ಮಶಾನ ಭೂಮಿ ನೀಡುವಂತೆ ಶವ ವಿಟ್ಟು ಆಕ್ರೋಶ ಹೊರ ಹಾಕಿರುವ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ತಡವಾಗಿ ಬೆಳಕಿಗೆ ಬಂದ ಪ್ರಕರಣವಾಗಿದ್ದು, ಹಲವಾರು ವರ್ಷಗಳಿಂದ ಸ್ಮಶಾನಕ್ಕೆ ಬೇಡಿಕೆಯಿಟ್ಟರೂ ಉಪಯೋಗವಾಗದೆ. ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿ ಗಂಗವ್ವ ಬೆಳಹಾರ(65) ನಿಧನರಾಗಿದ್ದು, ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೆ ಆಕ್ರೋಶಗೊಂಡಿದ್ದಾರೆ. ಇನ್ನೂ ಈ ವೇಳೆ ಸ್ಥಳಕ್ಕೆ ಪೊಲೀಸರ ಆಗಮಿಸಿ ಗ್ರಾಮಸ್ಥರ ಮನವೋಲಿಕೆ ಮಾಡಲು ಮುಂದಾಗಿದ್ದರು. ಈ ಮೊದಲಿದ್ದ ಖಾಸಗಿ …

Read More »

ಮಹದಾಯಿ ವಿಚಾರದಲ್ಲಿ ಗೋವಾ ಮತ್ತು ಮಹಾರಾಷ್ಟ್ರ ಒಗ್ಗಟ್ಟಾಗಿ ಹೋರಾಟ – ಏಕನಾಥ್ ಶಿಂಧೆ

ಬೆಳಗಾವಿ: ಮಹದಾಯಿ (Mahadayi River) ನದಿ ನೀರು ಹಂಚಿಕ ವಿಚಾರವಾಗಿಕರ್ನಾಟಕ(Karnataka) ಹಾಗೂ ಗೋವಾ (Goa) ರಾಜ್ಯಗಳ ನಡುವೆ ದಶಕಗಳಿಂದ ಹೋರಾಟ ನಡೆಯುತ್ತಿದೆ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಿದ್ದಂತೆ ಮಹಾರಾಷ್ಟ್ರ (Maharashtra) ಹಾಗೂ ಗೋವಾ ಸರ್ಕಾರ ಒಗ್ಗಟ್ಟಾಗಿ “ಮಹದಾಯಿ ವಿಚಾರದಲ್ಲಿ ಹೋರಾಟ” ನಡೆಸಲು ಮುಂದಾಗಿವೆ. ಹೌದು ಒಂದಡೆ ಗಡಿ ಕ್ಯಾತೆ ತೆಗೆಯುತ್ತಿರುವ ಮಹರಾಷ್ಟ್ರ ಇದೀಗ ಮಹದಾಯಿ ವಿಚಾರದಲ್ಲೂ ಮೂಗು ತೂರಿಸಿದೆ. ಗೋವಾ ಮತ್ತು ಮಹಾರಾಷ್ಟ್ರ ಈ ಎರಡೂ ರಾಜ್ಯಗಳು ಸಹೋದರರಿದ್ದಂತೆ. …

Read More »

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಯಲಕ್ಕೆ 18 ಲಕ್ಷ ರೂ. ವಿದ್ಯುತ್​ ಬಿಲ್, ಕುಲಪತಿ ಶಾಕ್

ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿಯಾಗಿರುವ ಗೃಹಜ್ಯೋತಿ ಯೋಜನೆಗೆ(Gruha Jyothi Scheme) ಅನುಮೋದನೆ ನೀಡಿದ ಬೆನ್ನಲ್ಲೇ ವಿದ್ಯುತ್ ಬಿಲ್​ನಲ್ಲಿ (Electricity Bill) ಭಾರೀ ಪ್ರಮಾಣದಲ್ಲಿ ಏರಿಕೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದುಪ್ಪಟ್ಟು ವಿದ್ಯುತ್ ಬಿಲ್‌ಗೆ ಗ್ರಾಹಕರು ಹೈರಾಣಾಗಿದ್ದಾರೆ. ಬಿಲ್ ರೀಡರ್ ಯಡವಟ್ಟಿನಿಂದ ಮಂಗಳೂರಿನ (Mangaluru) ಉಳ್ಳಾಲ (Ullala) ನಿವಾಸಿಯೋರ್ವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ರೂ. ವಿದ್ಯುತ್ ಬಿಲ್ (Electricity Bill) ಬಂದಿತ್ತು. ಅದರಂತೆ ಇದೀಗ ಬೆಳಗಾವಿ ವಿಶ್ವೇಶ್ವರಯ್ಯ …

Read More »

ವ್ಯಾಕ್ಸಿನ್ ಡಿಪೋದಲ್ಲಿ ಅಕ್ರಮ ಕಾಮಗಾರಿ ಆರೋಪ; ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಕೇಸ್ ದಾಖಲಿಸಿದ ಡಿಎಚ್‌ಒ

ಬೆಳಗಾವಿ : ನಗರದ ವ್ಯಾಕ್ಸಿನ್ ಡಿಪೋದಲ್ಲಿಅಕ್ರಮ ಕಾಮಗಾರಿಆರೋಪ ಕೇಳಿಬಂದಿದ್ದು, ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಡಿಎಚ್‌ಒ( DHO ) ಡಾ.ಮಹೇಶ್ ಕೋಣಿ ಕೇಸ್ ದಾಖಲಿಸಿದ್ದಾರೆ. ಪರವಾನಿಗೆ ಇಲ್ಲದೇ ತಮ್ಮ ಕಚೇರಿ ಆವರಣದಲ್ಲಿನ ಜಾಗದಲ್ಲಿ ಅಕ್ರಮ ಕಾಮಗಾರಿ ಮಾಡಿದ್ದಾರೆ. ಮಣ್ಣು ಜೊತೆಗೆ ಮರಕಡಿದು ಅಕ್ರಮವಾಗಿ ಸಾಗಿಸಿದ್ದಾರೆಂದು ಸ್ಮಾರ್ಟ ಸಿಟಿ ಎಂಡಿ ವಿರುದ್ಧ ಸೆಕ್ಷೆನ್ 420, 427, 447ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ಈ ಹಿನ್ನಲೆ ಕಾಮಗಾರಿಯನ್ನ ಅರ್ಧಕ್ಕೆ ಸ್ಥಗಿತ ಮಾಡಲಾಗಿದೆ. …

Read More »

ಬೆಳಗಾವಿಯ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಕಾಮಗಾರಿಗೆ 100 ಕೋಟಿ ವೆಚ್ಚ ಮಾಡಿದ್ದಾರೆ. ಆದ್ರೇ ಇದಕ್ಕೆ ಡಿಎಚ್‌ಒ ಅವರ ಅನುಮತಿಯನ್ನೇ ಪಡೆದಿಲ್ಲವಂತೆ.

Vaccine Depo Under Smart City: ಬೆಳಗಾವಿಯ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಕಾಮಗಾರಿಗೆ 100 ಕೋಟಿ ವೆಚ್ಚ ಮಾಡಿದ್ದಾರೆ. ಆದ್ರೇ ಇದಕ್ಕೆ ಡಿಎಚ್‌ಒ ಅವರ ಅನುಮತಿಯನ್ನೇ ಪಡೆದಿಲ್ಲವಂತೆ. ವ್ಯಾಕ್ಸಿನ್ ಡಿಪೋ ಆರೋಗ್ಯ ಇಲಾಖೆಗೆ ಸೇರಿದ ಜಾಗ, ಆದರೆ ಅವರ ಅನುಮತಿಯನ್ನೇ ಪಡೆಯದೇ ಕಾಮಗಾರಿ ಮಾಡಿದ್ದಾರಂತೆ. ಬೆಳಗಾವಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳ ನಡುವೆ ಕಾಮಗಾರಿ ಫೈಟ್ ಶುರುವಾಗಿದೆ. ಅದು ಯಾವ ಹಂತಕ್ಕೆ ಹೋಗಿದೆ ಅಂದ್ರೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗುವ …

Read More »

ಕಾಡಲ್ಲಿ ಯುವತಿಯ ಶವ ಪತ್ತೆ; ಆಕೆಯ ಮೂವರು ಚಿಕ್ಕಮ್ಮಂದಿರ ಬಂಧನ: ಆಗಿದ್ದೇನು?

ಉತ್ತರಕನ್ನಡ: ದೇವಿಮನೆ ಘಟ್ಟ ಪ್ರದೇಶದ ಕಾಡಿನಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆ ಸಂಬಂಧ ಐವರನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಆರೋಪಿಗಳ ಪೈಕಿ ಸಾವಿಗೀಡಾದ ಯುವತಿ ಮೂವರು ಚಿಕ್ಕಮ್ಮಂದಿರೂ ಇದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಆಕೆಯನ್ನು ಶಿಗ್ಗಾವಿ ಮೂಲದ ತನುಜಾ (26) ಎಂದು ಪತ್ತೆ ಹಚ್ಚಿದ್ದಲ್ಲದೆ, ಆರೋಪಿಗಳನ್ನೂ ಪತ್ತೆ ಹಚ್ಚಿ ಬಂಧಿಸಿದ್ದಾರೆ.   3 ಕೋಟಿ …

Read More »

4 ದಿನದಲ್ಲಿ 12.51 ಲಕ್ಷ ಗ್ರಾಹಕರು ನೋಂದಣಿ: ಸಾರ್ವಜನಿಕರ ಅನುಕೂಲಕ್ಕೆ ಹೊಸ ಲಿಂಕ್ ಬಿಡುಗಡೆ!

ಗೃಹಜ್ಯೋತಿನೋಂದಣಿ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಸಂಜೆ ವೇಳೆಗೆ ಒಟ್ಟು 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಜೂನ್‌ 18ರಂದು ಆರಂಭಗೊಂಡಿದ್ದು, ತಾಂತ್ರಿಕ ದೋಷಗಳ ನಡುವೆಯೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.   ಮೊದಲ ದಿನ- 96,305, 2ನೇ ದಿನ- 3,34,845 3ನೇ ದಿನ- 4,64,225 ಹಾಗೂ 4ನೇ ದಿನ 3.56 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. …

Read More »