Breaking News

ಸೆ.17ಕ್ಕೆ 70 ವಸಂತಗಳನ್ನು ಪೂರೈಸಲಿರುವ ಪ್ರಧಾನಿ ನರೇಂದ್ರ ಮೋದಿ: ಬಿಜೆಪಿಯಿಂದ ಸೇವಾ ಸಪ್ತಾಹ ಆಚರಣೆ

Spread the love

ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 17ಕ್ಕೆ 70 ವರ್ಷಗಳನ್ನು ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಅಂದು ವಿಶೇಷ ದಿನ.

ಈ ದಿನವನ್ನು ವಿಶೇಷವಾಗಿ ಮಹತ್ವಪೂರ್ಣವಾಗಿ ಆಚರಿಸಲು ಉದ್ದೇಶಿಸಿರುವ ಭಾರತೀಯ ಜನತಾ ಪಾರ್ಟಿ ಸೆಪ್ಟೆಂಬರ್ 14ರಿಂದ 20ರವರೆಗೆ ಸೇವಾ ಸಪ್ತಾಹವನ್ನು ಆಚರಿಸಲು ನಿರ್ಧರಿಸಿದೆ.

ನರೇಂದ್ರ ದಾಮೋದರದಾಸ್ ಮೋದಿ ಸೆಪ್ಟೆಂಬರ್ 17, 1950ರಂದು ಗುಜರಾತ್ ನ ವಡಾನಗರದಲ್ಲಿ ಜನಿಸಿದ್ದರು. ಆ ಸಮಯದಲ್ಲಿ ಅದು ಬಾಂಬೆ ಪ್ರಾಂತ್ಯಕ್ಕೆ ಸೇರಿತ್ತು. ನಂತರ ಗುಜರಾತ್ ರಾಜ್ಯವಾಯಿತು.

ಭಾರತೀಯ ಜನತಾ ಪಾರ್ಟಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾದ ಡಿಸೆಂಬರ್ 25ನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ.

 


Spread the love

About Laxminews 24x7

Check Also

ಚಡಚಣ ಎಸ್‌‍ಬಿಐ ಬ್ಯಾಂಕ್‌ ದರೋಡೆ; ದರೋಡೆಕೋರರ ಪತ್ತೆಗೆ 8 ತಂಡಗಳ ರಚನೆ; ಬಂಗಾರ ಇಟ್ಟವರಿಂದ ಗೋಳಾಟ!

Spread the loveವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ​ಗೆ ಮಂಗಳವಾರ ಸಂಜೆ ಮಾಸ್ಕ್​ ಧರಿಸಿಕೊಂಡು ನುಗ್ಗಿದ್ದ ಕಳ್ಳರು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ