ಬೆಳಗಾವಿ: ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿದ ಖುಶಿಯಲ್ಲಿ ಮನೆಗೆ ತೆರಳುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಸುಧಾಕರ ರಾವಸಾಹೇಬ ಕೊಂಡೆಕರ (47) ದಾವನ್ನಪ್ಪಿದ ವ್ಯಕ್ತಿ. ಕೊಲ್ಲಾಪೂರ ಜಿಲ್ಲೆಯ ಕಾಗಲ್ ನಿಂದ ಹೊರ ಟ್ರ್ಯಾಕ್ಟರ್ ಖರಿದಿ ಮಾಡಿ ಮರಳಿ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮಕ್ಕೆ ಹಿಂತಿರಗುವಾಗ ಕಾರದಗಾ-ಭೋಜಕ್ರಾಸ ರಸ್ತೆಯ ಮೇಲೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ರಸ್ತೆಯ ತಗ್ಗಿನಲ್ಲಿ ಉರುಳು ಬಿದ್ದಿದೆ. ಈ ವೇಳೆ ಸುಧಾಕರ ರಾವಸಾಹೇಬ ಕೊಂಡೆಕರ ಸಾವನ್ನಪ್ಪಿದ್ದು,ಟ್ರ್ಯಾಕ್ಟರ್ ಮಾಲೀಕ ಸಂಜೆಯ ಅಣ್ಣಾಸಾಬ ಚೌಗುಲೆ ಇವರಿಗೆ ಗಾಯಗಳಾಗಿವೆ.
ಸದಲಗಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 98/2026 ಕಲಂ: 281, 125(ಎ), 106(1) ಬಿಎನ್ಎಸ್-2023 ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ
Laxmi News 24×7