Breaking News

₹13,165 ಕೋಟಿ ರಕ್ಷಣಾ ಉಪಕರಣಗಳ ಖರೀದಿಗೆ ರಾಜನಾಥ್​​ ಸಿಂಗ್​​ ಅನುಮೋದನೆ

Spread the love

ನವದೆಹಲಿ: ಸೇನಾ ಪಡೆಗಳಿಗೆ ಮತ್ತಷ್ಟು ಶಕ್ತಿ ತುಂಬಲು ರಕ್ಷಣಾ ಸ್ವಾಧೀನ ಮಂಡಳಿ ಮುಂದಾಗಿದೆ. ಹೀಗಾಗಿಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​​​​ ಅಧ್ಯಕ್ಷತೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ₹13,165 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ಖರೀದಿಸಲು ಅನುಮತಿ ನೀಡಿದೆ.

ಭಾರತೀಯ ಮೂರು ಸೇನಾ ಪಡೆಗಳಿಗೂ ಎಎಲ್‌ಎಚ್‌ ಹೆಲಿಕಾಪ್ಟರ್‌ ಸೇರಿದಂತೆ ಹಲವು ರಕ್ಷಣಾ ಉಪಕರಣಗಳನ್ನು ಈ ಯೋಜನೆಯಡಿ ಖರೀದಿಸಲಾಗುತ್ತದೆ. ಈ ಕ್ರಮದಿಂದಾಗಿ ಸ್ಥಳೀಯವಾಗಿ ಅವಲಂಬನೆಯಾಗುವ ಮೂಲಕ ಆತ್ಮ ನಿರ್ಭರ ಭಾರತವನ್ನು ಉತ್ತೇಜಿಸಿದಂತಾಗಲಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೇನಾಪಡೆ, ವಾಯುಪಡೆ, ನೌಕಾಪಡೆಗೆ ಶಕ್ತಿ ತುಂಬು ಅಗತ್ಯವಾದ ರಕ್ಷಣಾ ಉಪಕರಣಗಳ ಖರೀದಿಗೆ ಅನುಮತಿ ನೀಡಲಾಗಿದೆ.

 


Spread the love

About Laxminews 24x7

Check Also

ಬಿಜೆಪಿಯವರು ಬಳ್ಳಾರಿಯಿಂದ ಪಾದಯಾತ್ರೆ ಮಾಡಲಿ, ಬೇಡ ಅಂದವರು ಯಾರು?: ಸಿಎಂ

Spread the loveಮಂಗಳೂರು: “ಬಿಜೆಪಿಯವರು ಬಳ್ಳಾರಿಯಿಂದ ಪಾದಯಾತ್ರೆ ಮಾಡಲಿ, ಬೇಡ ಅಂದವರು ಯಾರು?. ನಾವು (ಕಾಂಗ್ರೆಸ್​) ಪಾದಯಾತ್ರೆ ಮಾಡಿರುವುದು ನಿರ್ದಿಷ್ಟ ಕಾರಣಕ್ಕೋಸ್ಕರ” …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ