Breaking News

ನೀಟ್ ವ್ಯವಸ್ಥೆ ರಾಜ್ಯದಲ್ಲಿ ರದ್ದು ಮಾಡೋದಿಲ್ಲ: ಶರಣ ಪ್ರಕಾಶ್ ಪಾಟೀಲ್

Spread the love

ಬೆಂಗಳೂರು: ಮೆಡಿಕಲ್ ಸೀಟು ಹಂಚಿಕೆಯಲ್ಲಿ ನೀಟ್ ವ್ಯವಸ್ಥೆ ರಾಜ್ಯದಲ್ಲಿ ರದ್ದು ಮಾಡೋದಿಲ್ಲ ಅಂತ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಐವಾನ್ ಡಿಸೋಜ ಪ್ರಶ್ನೆ ಕೇಳಿದ್ರು. ರಾಜ್ಯದಲ್ಲಿ ನೀಟ್ ವ್ಯವಸ್ಥೆ ರದ್ದು ಮಾಡಬೇಕು. CET ಅಡಿಯೇ ಮೆಡಿಕಲ್ ಸೀಟು ರಾಜ್ಯದ ಮಕ್ಕಳಿಗೆ ಕೊಡಬೇಕು. ಪಿಯುಸಿಯಲ್ಲಿ ಫೇಲ್ ಆಗಿ ನೀಟ್‌ನಲ್ಲಿ ರ‍್ಯಾಂಕ್ ಪಡೆಯುತ್ತಾರೆ. ನೀಟ್ ಸೀಟಿನಲ್ಲಿ ಮಾಫಿಯಾ ನಡೆಯುತ್ತಿದೆ. ಇದರಿಂದ ನಮ್ಮ ಗ್ರಾಮೀಣ ಮಕ್ಕಳಿಗೆ ಅನ್ಯಾಯ ಆಗ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ನೀಟ್ ಕಬ್ಬಿಣದ ಕಡಲೆ. ರಾಜ್ಯದಲ್ಲಿ ನೀಟ್ ವ್ಯವಸ್ಥೆ ರದ್ದು ಮಾಡಬೇಕು ಅಂತ ಒತ್ತಾಯ ಮಾಡಿದ್ರು.

ಇದಕ್ಕೆ ಸಚಿವ ಶರಣು ಪ್ರಕಾಶ್ ಪಾಟೀಲ್ ಉತ್ತರ ನೀಡಿ, ‌ನೀಟ್ ವ್ಯವಸ್ಥೆ ಬಂದಿರೋದ್ರೀಂದ ನಮ್ಮ ರಾಜ್ಯದ ಮೆಡಿಕಲ್ ಸೀಟು ಕಡಿಮೆ ಆಗಿಲ್ಲ. ಸರ್ಕಾರಿ ಸೀಟು, ಖಾಸಗಿ ಸೀಟು ಸೇಮ್ ಇದೆ. 15% ಆಲ್ ಇಂಡಿಯಾ ಕೋಟಾ. 85% ನಮ್ಮ ಮಕ್ಕಳಿಗೆ ಸಿಗಲಿದೆ. ಖಾಸಗಿ ಕಾಲೇಜುಗಳಲ್ಲಿ 40% ಮೆಡಿಕಲ್ ನಮ್ಮ ರಾಜ್ಯಕ್ಕೆ ಸಿಗಲಿದೆ. ಆಲ್ ಇಂಡಿಯಾ ಕೋಟಾ ಮತ್ತು ಡೀಮ್ಡ್ ವಿವಿ ಸೀಟು ಮಾತ್ರ MCI ಸೀಟು ಹಂಚಿಕೆ ಮಾಡುತ್ತದೆ. ರಾಜ್ಯದ ಮೆಡಿಕಲ್ ಸೀಟು ಭರ್ತಿಗೆ ರಾಜ್ಯಕ್ಕೆ ಅಧಿಕಾರ ಕೊಡಲಾಗಿದೆ ಅಂತ ತಿಳಿಸಿದರು.

ನೀಟ್ ಎಕ್ಸಾಂ ಗ್ರಾಮೀಣ ಮಕ್ಕಳಿಗೆ ಸಮಸ್ಯೆ ಆಗ್ತಿದೆ.ಹೀಗಾಗಿ ಶಾಲಾ ಶಿಕ್ಷಣ ಇಲಾಖೆ ಪ್ರತಿ ವರ್ಷ 25 ಸಾವಿರ ಮಕ್ಕಳಿಗೆ ನೀಟ್ ಗೆ ಕೋಚಿಂಗ್ ಕೊಡ್ತಿದೆ. ಗ್ರಾಮೀಣಾ ಮಕ್ಕಳಿಗೆ ಸಮಸ್ಯೆ ಆಗ್ತಿದೆ ಅಂತಾನೆ ಮೆಡಿಕಲ್ ಸೀಟಿನಲ್ಲಿ 15% ಗ್ರಾಮೀಣ ಮಕ್ಕಳಿಗೆ ಮೀಸಲಾತಿ ಕೊಡ್ತಾ ಇದ್ದೇವೆ‌.ಗ್ರಾಮೀಣ ಭಾಗದ ಮಕ್ಕಳಲ್ಲಿ ನೀಟ್ ತರಬೇತಿ ಕೊಡ್ತೀವಿ. ಇದರ ಬಗ್ಗೆ ಕ್ರಮ ತಗೋತೀವಿ ಎಂದರು.

ನೀಟ್ ವಾಪಸ್ ಪಡೆಯೊ ಪ್ರಶ್ನೆ ಇಲ್ಲ. ಸುಪ್ರೀಂಕೋರ್ಟ್ ಆದೇಶ ಇದೆ.ಸಂಸತ್ ನಲ್ಲಿ ಕಾಯ್ದೆ ಆಗಿದೆ.ರಾಜ್ಯವು ನೀಟ್ ಅನ್ನೇ ನಾವು ಮುಂದುವರೆಸುತ್ತೇವೆ. ರಾಜ್ಯದಲ್ಲಿ ನೀಟ್ ವ್ಯವಸ್ಥೆ ರದ್ದು ಇಲ್ಲ ಅಂತ ಸಚಿವರು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಹೆರಿಗೆಗೆ 15 ದಿನ ಮುಂಚಿತವಾಗಿಯೇ ಶಿಕ್ಷಕಿಯರಿಗೆ ರಜೆ: ಮಧು ಬಂಗಾರಪ್ಪ

Spread the loveಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚೆಯೇ ರಜೆ ಕೊಡಬೇಕು ಎಂಬ ನಿಯಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ