ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿರುವ ಬೆನ್ನಲ್ಲೆ ಭಾರತಕ್ಕೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ಗೆದ್ದು ಬಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ವಿಷ್ಯದಲ್ಲಿ ಭಾರತ ಬ್ರೆಜಿಲ್ ಹಿಂದಿಕ್ಕಿ ವಿಶ್ವದ ಅಗ್ರ ಸ್ಥಾನವನ್ನು ತಲುಪಿದೆ. ಇಲ್ಲಿಯವರೆಗೆ ಭಾರತದಲ್ಲಿ 38 ಲಕ್ಷ 59 ಸಾವಿರ 399 ರೋಗಿಗಳು ಕೊರೊನಾ ಸೋಲಿಸಿದ್ದಾರೆ.
ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಬ್ರೆಜಿಲ್ ನಲ್ಲಿ 37 ಲಕ್ಷ 23 ಸಾವಿರ 206 ಸೋಂಕಿತರು ಗುಣಮುಖರಾಗಿದ್ದಾರೆ. ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಮೂರನೇ ಸ್ಥಾನದಲ್ಲಿದೆ. ಯುಎಸ್ ನಲ್ಲಿ ಇಲ್ಲಿಯವರೆಗೆ 24 ಲಕ್ಷ 51 ಸಾವಿರ ಮಂದಿ ಕೊರೊನಾ ಚಿಕಿತ್ಸೆ ನಂತ್ರ ಗುಣಮುಖರಾಗಿದ್ದಾರೆ.
ವಿಶ್ವದ 2 ಕೋಟಿ 91 ಲಕ್ಷಕ್ಕೂ ಹೆಚ್ಚು ಜನರು ಈವರೆಗೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.ಚಿಕಿತ್ಸೆಯ ನಂತರ 1 ಕೋಟಿ 97 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ವಿಶ್ವಾದ್ಯಂತ ಕೊರೊನಾಗೆ ಇದುವರೆಗೆ 9 ಲಕ್ಷ 27 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಭಾರತದಲ್ಲಿ ಕೊರೊನಾದಿಂದ ಇದುವರೆಗೆ 80 ಸಾವಿರ 776 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 1000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
Laxmi News 24×7