Breaking News

ನಗರಸಭೆಯ ಆಸ್ತಿ ತೆರಿಗೆ ಹಣ ದುರ್ಬಳಕೆ: ಇಬ್ಬರ ಬಂಧನ

Spread the love

ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಗರಸಭೆ ಕಚೇರಿ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬನ್ನಂಜೆ ನಿವಾಸಿ ಶಾಲಿನಿ ಹಾಗೂ ಕುಕ್ಕಿಕಟ್ಟೆಯ ಗಣೇಶ್ ಎಂದು ಗುರುತಿಸಲಾಗಿದೆ.

ಆನಂದ ಸುವರ್ಣ ಎಂಬವರು ಕಲ್ಮಾಡಿಯಲ್ಲಿರುವ ತನ್ನ ಕಟ್ಟಡಕ್ಕೆ ಸಂಬಂಧಪಟ್ಟಂತೆ 2025ರ ಅ.16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು 34,730 ರೂ. ಹಣವನ್ನು ನಗರಸಭೆ ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿ ಕೊಂಡಿರುವ ಶಾಲಿನಿ ಎಂಬಾಕೆಗೆ ನೀಡಿದ್ದರು. ಅದಕ್ಕೆ ಶಾಲಿನಿ ತೆರಿಗೆ ಸ್ವೀಕೃತಿಯನ್ನು ನೀಡಿದ್ದರು.

ಇತ್ತೀಚೆಗೆ ಆನಂದ ಸುವರ್ಣ ಆಸ್ತಿ ತೆರಿಗೆ ಪೋರ್ಟಲ್‌ನಲ್ಲಿ ತೆರಿಗೆ ಪಾವತಿಯಾದ ಬಗ್ಗೆ ತಪಾಸಣೆ ನಡೆಸಿದಾಗ ತೆರಿಗೆ ಪಾವತಿ ಆಗದೇ ಪೆಂಡಿಂಗ್ ಇರುವುದಾಗಿ ತಿಳಿದುಬಂತು. ಈ ವಿಚಾರವನ್ನು ಆನಂದ ಸುವರ್ಣ ಅವರು ಪೌರಾಯುಕ್ತರ ಗಮನಕ್ಕೆ ತಂದಿದ್ದು, ಅವರು ಕೂಡ ಪರಿಶೀಲಿಸಿದಾಗ ಪೆಂಡಿಂಗ್ ಇರುವುದು ಕಂಡುಬಂದಿದೆ.

ಅನಂತರ ಕಚೇರಿಯಲ್ಲಿ ಕೆಲಸವನ್ನು ಮಾಡಿಕೊಂಡಿರುವ ಶಾಲಿನಿ ಅವರನ್ನು ಕರೆದು ವಿಚಾರಿಸಿದಾಗ ಆಕೆ ತಪ್ಪು ಒಪ್ಪಿಕೊಂಡಿದ್ದು, 2026ರ ಫೆ.16ರಂದು ಆಕೆ ಆನಂದ ಸುವರ್ಣ ಅವರ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ಒಟ್ಟು 35,213ರೂ. ಭರಿಸಿದ್ದಳು. ಶಾಲಿನಿ ಅವರು ಆನಂದ ಸುವರ್ಣ ನೀಡಿದ ತೆರಿಗೆ ಹಣವನ್ನು ಸರಕಾರಕ್ಕೆ ಕಟ್ಟದೇ ಚಲನ್‌ನಲ್ಲಿ ಬ್ಯಾಂಕ್‌ನ ಮೊಹರನ್ನು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಇನ್ನಿತರರೊಂದಿಗೆ ಸೇರಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


Spread the love

About Laxminews 24x7

Check Also

ಬಾಲಕಿಗೆ ಪ್ರೀತಿಸುವಂತೆ ಕಿರುಕುಳ : ಮೆಸ್ಕಾಂ ಸಿಬ್ಬಂದಿ ಪೊಲೀಸರ ವಶಕ್ಕೆ

Spread the loveಪುತ್ತೂರು(ಡಿಸೆಂಬರ್​. 22): ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸವಣೂರು ಸಮೀಪದ‌ ನಿವಾಸಿಯಾಗಿರುವ ಪಿಯುಸಿ ಓದುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ