Breaking News

ಫ್ಯಾನ್‌, ಬೆಡ್‌ ಇಲ್ಲ- ಇಂದ್ರಾಣಿ ಪಕ್ಕದಲ್ಲೇ ರಿಯಾ ಜೈಲುವಾಸ

Spread the love

ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಗೆಳತಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್‌ ವಜಾಗೊಳಿಸಿದ್ದು, ಹೀಗಾಗಿ ಆಕೆಗೆ ಜೈಲೇ ಗತಿಯಾಗಿದೆ. ಹೈಫೈ ಜೀವನ ನಡೆಸುತ್ತಿದ್ದ ರಿಯಾ ಸದ್ಯ ಸೆರೆಮನೆ ವಾಸಿಯಾಗಿದ್ದು, ಮೂಲ ಸೌಕರ್ಯಗಳಿಲ್ಲದ ಕತ್ತಲೆ ಕೋಣೆಯಲ್ಲಿ ದಿನ ಕಳೆಯಬೇಕಿದೆ.

ಇನ್ಮೇಲೆ ರಿಯಾಗೆ ಚಾಪೆನೇ ಗತಿ?
ಹೌದು ಭದ್ರತೆಯ ಕಾರಣಗಳಿಂದ ರಿಯಾ ಚಕ್ರವರ್ತಿಯನ್ನು ಪ್ರತ್ಯೇಕ ಕೋಣೆಯಲ್ಲಿಡಲಾಗಿದೆ ಎಂದು ಮೂಲಗಳು ತಿಳಿಸಿದ್ದು, ರಿಯಾ ಇರುವ ಬೈಕುಲ್ಲಾ ಜೈಲಿನಲ್ಲಿ ಫ್ಯಾನ್‌ ಇಲ್ಲ, ಬೆಡ್‌ ಇಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಜೈಲಿನಲ್ಲಿ ರಿಯಾಗೆ ಮಲಗಲು ಚಾಪೆ ನೀಡಲಾಗಿದೆ. ಆದರೆ ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸೆಲ್‌ನಲ್ಲಿ ಫ್ಯಾನ್‌ ಇಲ್ಲ ಎಂದು ತಿಳಿಸಿರುವ ಅಧಿಕಾರಿಗಳು ಕೋರ್ಟ್‌ ಒಪ್ಪಿದರೆ ಟೇಬಲ್‌ ಫ್ಯಾನ್‌ ಒದಗಿಸಲಾಗುವುದು ಎಂದು ಹೇಳಿದ್ದಾರೆ.

 

ಶೀನಾ ಪಕ್ಕದಲ್ಲೇ ರಿಯಾ ವಾಸ
ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ತನಿಖೆಯಿಂದ ಗಮನ ಸೆಳೆದಿರುವ ರಿಯಾ ಸೆಲ್‌ ಪಕ್ಕದಲ್ಲೇ ಶೀನಾ ಬೋರಾ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ ಇಂದ್ರಾಣಿ ಮುಖರ್ಜಿ ಸೆಲ್ ಇದೆಯಂತೆ.

ಹಲ್ಲೆಯ ಭೀತಿ
ಆತಂಕಕಾರಿ ವಿಚಾರವೆಂದರೆ ಸುಶಾಂತ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಿಯಾ ಮೇಲೆ ಸಹ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಟಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮೂರು ಶಿಫ್ಟ್ ನಲ್ಲಿ ಇಬ್ಬರು ಕಾನ್‌ಸ್ಟೇಬಲ್‌ ಗಳು ನಟಿಗೆ ರಕ್ಷಣೆ ನೀಡುತ್ತಿದ್ದಾರೆ. ಇನ್ನು ಸೆಪ್ಟೆಂಬರ್‌ 22ರವರೆಗೆ ರಿಯಾಗೆ ನ್ಯಾಯಾಂಗ ಬಂಧನವಿದ್ದು, ರಿಯಾ ಬಾಂಬೆ ಹೈಕೋರ್ಟಿಗೆ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ.

ಇಲ್ಲಿಯವರಿಗಿನ ಪ್ರಕರಣದ ಬೆಳವಣಿಗೆ
ಜೂನ್‌ 14 ರಂದು ಮೃತಪಟ್ಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ತನಿಖೆಗೆ ಸಂಬಂಧಿಸಿದ ಡ್ರಗ್ಸ್ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಿ 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಸಾವನ್ನಪ್ಪಿದ ನಟ ಸುಶಾಂತ್‌ಗೆ ರಿಯಾ ಚಕ್ರವರ್ತಿ ಗಾಂಜಾ ಸೇವನೆ ಮಾಡಲು ಗಾಂಜಾ ಖರೀದಿಸುತ್ತಿದ್ದಳು ಎಂಬ ಆರೋಪದ ಮೇಲೆ ಎನ್‌ಸಿಬಿ ಅಧಿಕಾರಿಗಳು ರಿಯಾಳನ್ನು ಬಂಧಿಸಿತ್ತು. ಅನಂತರ ಆಕೆ ಸ್ಥಳೀಯ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು ಅದು ಕೂಡ ವಜಾಗೊಂಡಿತ್ತು. ಮತ್ತೆ ಮುಂಬೈ ಕೋರ್ಟಿಗೆ ಆಕೆ ಅರ್ಜಿ ಸಲ್ಲಿಸಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಾದವನ್ನು ಆಲಿಸಿದ್ದ ಕೋರ್ಟ್‌, ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಈ ತೀರ್ಪು ಬಂದಿದ್ದು, ರಿಯಾ ಮತ್ತು ಆಕೆಯ ಸಹೋದರ ಶೌವಿಕ್‌ ಚಕ್ರವರ್ತಿ ಸೇರಿದಂತೆ ಎಂಟು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ.


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ