ಬೆಳಗಾವಿ: ಮೆಥೋಡಿಸ್ಟ್ ಚರ್ಚಗೆ ಸಂಬಂಧಿಸಿದ ಸಿಪಿಏಡ್ ಮೈದಾನ ಆಸ್ತಿಯನ್ನು ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡಿ, ಸಂಸ್ಥೆಗೆ ಒಳಪಟ್ಟ 14 ಶಾಲೆ ಹಾಗೂ ಸಂಸ್ಥೆಯಲ್ಲಿನ ಹಣವನ್ನು ದುರುಪಯೋಗ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕ್ರೈಸ್ತ ಬಾಂಧವರ ವತಿಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಮೆಥೋಡಿಸ್ಟ್ ಚರ್ಚ್ ನಿಂದ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ನಡೆಸಿ, ಮೆಥೋಡಿಸ್ಟ್ ಸಂಸ್ಥೆಯಲ್ಲಿ ಅಕ್ರಮ ಎಸಗಿರುವವರ ವಿರುದ್ಧ ಆಕ್ರೋಶ ಹೊರಹಾಕಿದರು.
ಇದಕ್ಕೂ ಮೊದಲು, ಚರ್ಚ್ ಆವರಣದಲ್ಲಿರುವ ರೇ. ನಂದಕುಮಾರ ಅವರ ಕಚೇರಿಗೆ ಪ್ರತಿಭಟನಾಕಾರರು ಮುತ್ತಿದೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಸಿಡಿದರು. ಬಳಿಕ ಕಚೇರಿಗೆ ಬಿಗ್ ಜಡಿದು ನ್ಯಾಯ ಸಿಗೊವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಕ್ತರು ನೀಡಿರುವ ಕಾಣಿಕೆ/ ದೇಣಿಗೆ ಹಣವನ್ನು ದುರುಪಯೋಗ ಮಾಡಿಕೊಂಡು, ಚರ್ಚಿನ ಆಸ್ತಿ ಮಾರಾಟ ಮಾಡುವ ತನಿಖೆ ನಡೆಸಿ, ತಪ್ಪಿತಸ್ಥರ ಶಿಕ್ಷೆಯಾಗಬೇಕೆಂದು ಮನವಿ ಮೂಲಕ ಕೇಳಿಕೊಂಡರು.
ರೇ.ನಂದಕುಮಾರ ಜೆ, ರೇ. ಡೇವಿಡ್ ನಥಾನಿಯಲ್ ಹಾಗೂ ರೇ. ಬಿಶೋಫ್ ಎನ್ ಎಲ್ ಕರಕರೆ ಸೇರಿಕೊಂಡ ಮೆಥೋಡಿಸ್ಟ್ ಚರ್ಚ್ ಸಂಭಂದಿಸಿದ 12 ಎಕರೆ ಆಸ್ತಿಯನ್ನು ಲಪಟಾಯಿಸಲು ಹುನ್ನಾರ ಈಗಾಗಲೇ ಸಿಪಿಏಡ್/ಬಿಪಿಏಡ್ ಕಾಲೇಜ ಖಾಸಗಿ ಆಸ್ಪತ್ರೆಗೆ ಗುತ್ತಿಗೆ ಆಧಾರದ ನೀಡಲಾಗಿದ್ದು, ಈ ವಿಷಯವನ್ನು ಚರ್ಚಿನ ಕಮೀಟಯವರ ಗಮನಕ್ಕೂ ತರದೇ ವ್ಯವಹಾರ ಮಾಡಿತ್ತಿದ್ದಾರೆ ಸಂಸ್ಥೆಗೆ ದ್ರೋಹ ಎಸಗುತ್ತಿರುವ ಮೂವರ ವಿರುದ್ಧ ಕ್ರಮವಾಗಬೇಕಿದೆ ಎಂದರು.
ದಿನಕರ್ ಚಿಲ್ಲಾಳ ಮಾತನಾಡಿ, ಜಿಲ್ಲಾ ಮೇಲ್ವಿಚಾರಕರಾದ ರೇ.ನಂದಕುಮಾರ ಅವರು ಚರ್ಚ್‌ಗೆ ಸಂಭಂದಿಸಿದ ಆಸ್ತಿಯನ್ನು ನೋಡಿಕೊಳ್ಳಲು ಜವಾಬ್ದಾರಿ ನೀಡಲಾಗಿದೆ. ( ಇವಾಗ ಬೇಲಿ ಎದ್ದು ಹೊಲ ಮೇಯಿದಂತೆ )ಆಗಿದೆ- ರೇ.ನಂದಕುಮಾರ ಅವರು ಬರುವ 39 ಲಕ್ಷಕ್ಕಿಂತ ಅಧಿಕ ಆಧಾಯವನ್ನು ನುಂಗಿಹಾಕಿದ್ದಾರೆ. ಮೆಥೋಡಿಸ್ಟ್ ಚರ್ಚ್ ಸಂಬಂಧಿಸಿದ 14 ಶಿಕ್ಷಣ ಸಂಸ್ಥೆ ಆದಾಯದಲ್ಲಿ ಅಕ್ರಮ ಎಸಗಿದ್ದು, ನೇಮಕಾತಿ ಮುಖಾಂತರ ಲಕ್ಷಾಂತರ ಹಣವನ್ನು ದೋಚಿದ್ದಾರೆ ಎಂದು ಆರೋಪಿಸಿದರು.
ಈ ಮೂವರು ಜತೆಗೂಡಿ ಮೆಥೋಡಿಸ್ಟ್ ಬೆಳಗಾವಿ ಚರ್ಚಿನ 26.32 ಎಕರೆ ಆಸ್ತಿಯನ್ನು ಮೇ. ಡಮ್ಮಣಗಿ/ ಶಾನು ಡೆವಲ್ಪರ್ಸ್ ರೊಂದಿಗೆ ಪರಭಾರಿ ಮಾಡಿಕೊಂಡಿರುವ ಸತ್ಯಾಂಶ ಬಯಲಾಗಿದ್ದು, ಅಕ್ರಮದ ಬಗ್ಗೆ ಸದಸ್ಯರು ಹಾಗೂ ಕಮೀಟಿಯವರೂ ಪ್ರಶ್ನಿಸಿದರೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಶವಂತ ಮಡೆಣ್ಣನ್ಮವರ, ಶಾಭು ಸಣ್ಣಕ್ಕಿ, ಮರೆಪ್ಪಾ ಮರಪ್ಪಗೊಳ, ರಮೇಶ ಸಣ್ಣಕ್ಕಿ, ರವಿ , ವಿಜಯ ಮೇತ್ರಿ ಹಾಗೂ ಇತರರು ಇದ್ದರು.