ಬೆಳಗಾವಿ ನಗರದ ಎಪಿಎಂಸಿ ಮತ್ತು ಖಡೇಬಜಾರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಟಕಾ ದಂಧೆಯಲ್ಲಿ ತೊಡಗಿದ್ದ ಶುಭಂ ರೆಡ್ಡಿ ಮತ್ತು ಗಾಂಜಾ ಸೇವಿಸಿ ರಂಪಾಟ ಮಾಡುತ್ತಿದ್ದ ಸಾಯಿ ವಿನಾಯಕ ಪ್ರಧಾನ್ನನ್ನು ಅಧಿಕಾರಿಗಳು ಜೈಲಿಗಟ್ಟಿದ್ದಾರೆ.
ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಕಲ್ಯಾಣ ಮಟಕಾ ಆಟ ಆಡಿಸುತ್ತಿದ್ದ ಶುಭಂ ವೆಂಕಟೇಶ ರೆಡ್ಡಿ ಎಂಬಾತನನ್ನು ಎಪಿಎಂಸಿ ಠಾಣೆಯ ಪಿಎಸ್ಐ ಎಸ್.ಆರ್. ಮುತ್ತತ್ತಿ ಮತ್ತು ತಂಡ ದಾಳಿ ಮಾಡಿ ಬಂಧಿಸಿದೆ. ವಿಚಾರಣೆ ವೇಳೆ ಆರೋಪಿ ಕಿಶನ ಸುರೇಶ ಭಜಂತ್ರಿ ಎಂಬಾತನಿಗೆ ಹಣ ನೀಡುತ್ತಿರುವುದಾಗಿ ತಿಳಿಸಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ಖಡೇಬಜಾರ ಠಾಣೆಯ ಪಿಎಸ್ಐ ಆನಂದ ಆದಗೊಂಡ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮಾದಕ ಪದಾರ್ಥ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಸಾಯಿ ವಿನಾಯಕ ಪ್ರಧಾನ ಎಂಬಾತನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.
Laxmi News 24×7