ತಿರುವು ಪಡೆದ ಲವ್ ಜಿಹಾದ್ ಕೇಸ್ : ಸಮೀರನ ಅತ್ಯಾಚಾರ, ಬ್ಲ್ಯಾಕ್‌ಮೇಲ್ ತಂತ್ರ ಬಿಚ್ಚಿಟ್ಟ ಸಂತ್ರಸ್ತ ಯುವತಿ.!

Spread the love

ಹುಬ್ಬಳ್ಳಿ,:-, ಜಿಮ್ ಟ್ರೈನರ್ ಸಮೀರ್ ಮುಲ್ಲಾ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾ*ಚಾರ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಪ್ರಕರಣವನ್ನು ಹಿಂದೂ ಸಂಘಟನೆಗಳು ‘ಲವ್ ಜಿಹಾದ್’ ಎಂದು ಆಕ್ರೋಶ ಹೊರಹಾಕಿವೆ.

ಧಾರವಾಡ/ಹುಬ್ಬಳ್ಳಿ (ಏ.03): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನಿಂಗ್ ಮಾಡುವ ನೆಪದಲ್ಲಿ ಹಿಂದೂ ಹುಡುಗಿಯರನ್ನು ಪ್ರೀತಿ ಮಾಡುವುದಾಗಿ ನಂಬಿಸಿ ಅತ್ಯಾ*ಚಾರ ಮಾಡಿ, ಅದರ ವಿಡಿಯೋ ತೋರಿಸಿ ಬೆದರಿಕೆ ಹಾಕಿ ಲವ್ ಜಿಹಾದ್ ಮಾಡತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ನಂಬಿಸಿ, ಅಮಲು ಪದಾರ್ಥ ನೀಡಿ ಅತ್ಯಾ*ಚಾರ ಎಸಗಿದ ಜಿಮ್ ಟ್ರೈನರ್ ಸಮೀರ್‌ನ ಕೃತ್ಯವನ್ನು ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅತ್ಯಾಚಾರದ ಎಳೆಎಳೆ ಬಿಚ್ಚಿಟ್ಟ ಸಂತ್ರಸ್ತೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಸಂತ್ರಸ್ತ ಯುವತಿ, ಜಿಮ್ ಟ್ರೈನರ್ ಸಮೀರ್ ಎಸಗಿರುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ‘ಸಮೀರ್ ಅಕ್ಕ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆಯಾಗಿದ್ದರು. ಅವಳ ಮೂಲಕವೇ ಸಮೀರ್ ಪರಿಚಯವಾಗಿದ್ದ. ನಾವು ಸ್ನೇಹಿತರಾಗಿ ಬರ್ತ್‌ಡೇ ಪಾರ್ಟಿ, ವೀಕೆಂಡ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದೆವು. ಈ ವೇಳೆ ಸಮೀರ್ ಕೂಡ ಬರುತ್ತಿದ್ದರಿಂದ ನಮ್ಮ ನಡುವೆ ಆತ್ಮೀಯತೆ ಬೆಳೆದಿತ್ತು’ ಎಂದು ಯುವತಿ ತಿಳಿಸಿದ್ದಾಳೆ.

ಆತ್ಮೀಯವಾಗಿದ್ದ ಹಿಂದೂ ಕುಟುಂಬದ ಯುವತಿ ಜೊತೆಗೆ ಜಿಮ್ ಟ್ರೈನರ್ ಲವ್‌ಜಿಹಾದ್ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಗಲಾಟೆ!

ಪ್ರಜ್ಞೆ ತಪ್ಪಿದಾಗ ನನ್ನ ಮೇಲೆ ಅತ್ಯಾಚಾರ
‘ಒಂದು ದಿನ ತೈಸೀಮ್ ಅವರ ತಮ್ಮ ಸಮೀರ್ ಮುಲ್ಲಾ ತನನ್ನ ಪಿಕ್ ಮಾಡುವುಂತೆ ತನ್ನ ಮನೆಗೆ ಕರೆಸಿಕೊಂಡು ನನಗೆ ಅಮಲು ಪದಾರ್ಥ ಬೆರೆಸಿದ ಪಾನೀಯ ನೀಡಿದ್ದನು. ನಾನು ಪ್ರಜ್ಞೆ ತಪ್ಪಿದಾಗ ನನ್ನ ಮೇಲೆ ಅತ್ಯಾ*ಚಾರ ಎಸಗಿ, ಅದನ್ನು ವಿಡಿಯೋ ಮಾಡಿಕೊಂಡಿದ್ದನು. ಇದು ನನಗೆ ಮೊದಲು ಗೊತ್ತಿರಲಿಲ್ಲ. ನಂತರ ಆತನೇ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದಾಗ ನನ್ನ ಮೇಲಾದ ದೌರ್ಜನ್ಯದ ಅರಿವಾಯಿತು. ಆ ವಿಡಿಯೋ ಇಟ್ಟುಕೊಂಡು ನನಗೆ ಮೋಸ ಮಾಡಿದ್ದಾನೆ’ ಎಂದು ಯುವತಿ ಕಣ್ಣೀರು ಹಾಕಿದ್ದಾಳೆ.

‘ಲವ್ ಜಿಹಾದ್’ ಆರೋಪ ಮತ್ತು ಹಲ್ಲೆ:
ಈ ವಿಷಯ ತಿಳಿಯುತ್ತಿದ್ದಂತೆಯೇ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದಾರೆ. ಯುವಕ ಸಮೀರ್‌ನನ್ನು ಹಿಡಿದು ವಿಚಾರಣೆ ನಡೆಸಿದ ಸಂಘಟನೆಯವರು, ನಂತರ ಆತನನ್ನು ಹಳೆ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಿಮ್‌ಗಳು ಈಗ ಲವ್ ಜಿಹಾದ್‌ನ ಕೇಂದ್ರಗಳಾಗುತ್ತಿವೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಆರೋಪ ಮಾಡಿದ ಯುವತಿ ಮನೆಗೆ ನುಗ್ಗಿ ಹಲ್ಲೆ
ಇನ್ನು ಸಮೀರ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದರಿಂದ ರೊಚ್ಚಿಗೆದ್ದ ಆತನ ಕುಟುಂಬಸ್ಥರು ಮತ್ತು ಬೆಂಬಲಿಗರು, ವಿಕಾಸ ನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಯುವತಿಯ ಪೋಷಕರು ಮತ್ತು ಸಂಬಂಧಿಕರ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ‘ನಿಮ್ಮ ಮಗಳೇ ನಮ್ಮ ಹುಡುಗನ ಹಿಂದೆ ಬಂದಿದ್ದಾಳೆ, ಅದಕ್ಕೆ ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ’ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪೊಲೀಸ್ ಬಿಗಿ ಬಂದೋಬಸ್ತ್
ಸದ್ಯ ಸಮೀರ್ ಪೊಲೀಸ್ ವಶದಲ್ಲಿದ್ದಾನೆ. ಯುವತಿಯ ಮನೆಯವರು ತಮಗಾದ ಅನ್ಯಾಯ ಮತ್ತು ಹಲ್ಲೆಯ ವಿರುದ್ಧ ದೂರು ನೀಡಿದ್ದಾರೆ. ಹುಬ್ಬಳ್ಳಿಯ ವಿಕಾಸ ನಗರ ಮತ್ತು ವಿಜಯನಗರದ ಸುತ್ತಮುತ್ತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಮೊಬೈಲ್‌ನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್
ಇನ್ನು ಆರೋಪಿ ಸಮೀರ್ ಮುಲ್ಲಾನ ಮೊಬೈಲ್ ಅನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಹಲವು ಪ್ರಗ್ನೆನ್ಸಿ ಸ್ಕ್ಯಾನಿಂಗ್ ರಿಪೋರ್ಟ್‌ಗಳು ಕೂಡ ಲಭ್ಯವಾಗಿವೆ. ಹಲವು ಹುಡುಗಿಯರನ್ನು ಈತ ಹೀಗೆಯೇ ಅತ್ಯಾ*ಚಾರಕ್ಕೆ ಬಳಸಿಕೊಂಡು ಲವ್ ಜಿಹಾದ್‌ಗೆ ಬಲವಂತ ಮಾಡಿದ್ದಾನೆ ಎಂಬ ಆರೋಪಗಳಿಗೆ ಸಾಕ್ಷಿ ಸಿಕ್ಕಂತಾಗಿವೆ.

ಗರ್ಭ ನಿರೋಧಕ ಮಾತ್ರೆಗಳು
ಜಿಮ್ ಟ್ರೈನರ್ ಆಗಿದ್ದ ಸಮೀರ್ ಮುಲ್ಲಾನ ಬಳಿ ಮಹಿಳೆಯರ ಗರ್ಭ ನಿರೋಧಕ ಮಾತ್ರೆಗಳು ಕೂಡ ಲಭ್ಯವಾಗಿವೆ. ಆದರೆ, ಆತನ ಅಕ್ಕ ತೈಸಿಮ್ ಮುಲ್ಲಾ ನನ್ನ ತಮ್ಮ ಇನ್ನೂ 24 ವರ್ಷದವನು. ಆತನ ಮೇಲೆ ಗಂಭೀರ ಆರೋಪ ಮಾಡುವುದು ಸರಿಯಲ್ಲ. ಗರ್ಭ ನಿರೋಧಕ ಮಾತ್ರೆ ಇಟ್ಟುಕೊಳ್ಳುವ ಪ್ರಮೇಯ ಆತನಿಗಿಲ್ಲ ಎಂದೆಲ್ಲಾ ವಾದ ಮಾಡಿದ್ದಾಳೆ. ಆದರೆ, ಇದೀಗ ಸಂತ್ರಸ್ತೆಯೇ ಅತ್ಯಾ*ಚಾರ ಪ್ರಕರಣದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಕರಣ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದೆ.


Spread the love

About Laxminews 24x7

Check Also

ಹುಬ್ಬಳ್ಳಿ | ಫ್ಲೈವುಡ್‌ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ – ನಾಲ್ವರು ಕಾರ್ಮಿಕರು ಅಸ್ವಸ್ಥ

Spread the loveಹುಬ್ಬಳ್ಳಿ: ಬಿಲ್ಡಿಂಗ್‌ ಒಂದರ ಫ್ಲೈವುಡ್‌ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ ಆಗಿ ನಾಲ್ವರು ಕಾರ್ಮಿಕರು ಅಸ್ವಸ್ಥರಾದ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ