Breaking News

1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ – ಅಧಿಕಾರಿಯನ್ನು ಚೇಸ್ ಮಾಡಿ ಹಿಡಿದ ʻಲೋಕಾʼ ಪೊಲೀಸರು

Spread the love

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತಿ  ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ  ಅಧಿಕಾರಿಗಳಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ. ಈ-ಖಾತೆ ಮಾಡಲು ಅಧಿಕಾರಿ ಸುರೇಶ್ ಶೆಟ್ಟಿ 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅದರಂತೆ 1 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ರಾಘವೇಂದ್ರ ರೆಡ್ಡಿ ಎಂಬವರಿಗೆ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮುಖ್ಯಾಧಿಕಾರಿ ಅಡ್ವಾನ್ಸ್ ಆಗಿ ಒಂದು ಲಕ್ಷ‌ ರೂ. ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾನೆ. ಹಣ ತೆಗೆದುಕೊಳ್ಳುವಾಗ ಲೋಕಾಯುಕ್ತರು ಬರುತ್ತಿದ್ದಂತೆ ಎಸ್ಕೇಪ್ ಆಗಲು ನೋಡಿದ್ದ ಅಧಿಕಾರಿ ಸಿರವಾರದಿಂದ ಕವಿತಾಳ ಪಟ್ಟಣದ ಕಡೆಗೆ ಪರಾರಿಯಾಗಲು ಪ್ರಯತ್ನಿಸಿದ್ದ. ಸಿನಿಮೀಯ ರೀತಿ ಕಾರಿನಲ್ಲಿ ಚೇಸ್ ಮಾಡಿ ಅಧಿಕಾರಿಯನ್ನು ಲೋಕಾಯುಕ್ತರು ಹಿಡಿದಿದ್ದಾರೆ.

ಸದ್ಯ ಕವಿತಾಳ ಪ್ರವಾಸಿ ಮಂದಿರದಲ್ಲಿ ಅಧಿಕಾರಿಯ ವಿಚಾರಣೆ ಹಾಗೂ ಪಂಚನಾಮೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ರವಿ ಪುರುಷೋತ್ತಮ್‌, ಸಿಬ್ಬಂದಿ ವಿಜಯಕುಮಾರ್, ಅಮರೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


Spread the love

About Laxminews 24x7

Check Also

ಪೊದೆಯಲ್ಲಿ ಮಲಗಲು ಸಹಕರಿಸದ ಮಹಿಳೆಯ ಕೊಲೆ, ಜೀವಾವಧಿ ಶಿಕ್ಷೆ

Spread the loveರಾಯಚೂರ: ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ