Breaking News

ಭಾರತದಲ್ಲಿ ಒಂದೇ ದಿನದಲ್ಲಿ 73,600 ಕೋವಿಡ್ ಲಸಿಕೆ ಕೇಂದ್ರಗಳ ಕಾರ್ಯಾಚರಣೆ

Spread the love

ನವದೆಹಲಿ : ಭಾರತದಲ್ಲಿ ಸೋಮವಾರ ಒಂದೇ ದಿನದಲ್ಲಿ 73,600 ಕೊರೋನಾ ಲಸಿಕೆ ಕೇಂದ್ರಗಳು ಕಾರ್ಯನಿರ್ವಹಿಸುವ ಮೂಲಕ ಇಲ್ಲಿವರೆಗಿನ ಅತ್ಯಂತ ಹೆಚ್ಚಿನ ಲಸಿಕಾ ಕೇಂದ್ರ ಕಾರ್ಯಾಚರಣೆಗೆ ಸಾಕ್ಷಿಯಾಯಿತು. ಇದು ಒಂದು ದಿನದಲ್ಲಿ ದೇಶಾದ್ಯಂತ ಸರಾಸರಿ 45,000 ಕ್ರಿಯಾತ್ಮಕ ಸಿವಿಸಿಗಳಿಗಿಂತ 28,600 ಹೆಚ್ಚಾಗಿದೆ.

ಸೋಮವಾರ ರಾತ್ರಿ 8 ಗಂಟೆಯವರೆಗೆ ಭಾರತದಲ್ಲಿ 31 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ಗಳನ್ನು ನೀಡಲಾಯಿತು. ಫಲಾನುಭವಿಗಳಲ್ಲಿ ಸುಮಾರು 21.7 ಲಕ್ಷ ಜನರು ತಮ್ಮ ಮೊದಲ ಡೋಸ್ ಪಡೆಯುತ್ತಿದ್ದರು ಮತ್ತು 9.3 ಲಕ್ಷ ಜನರಿಗೆ ಎರಡನೇ ಡೋಸ್ ನೀಡಲಾಯಿತು ಎಂದು ಸರ್ಕಾರದ ತಾತ್ಕಾಲಿಕ ವರದಿ ತಿಳಿಸಿದೆ.

ಜನವರಿ ೧೬ ರಂದು ಲಸಿಕೆ ಅಭಿಯಾನ ಪ್ರಾರಂಭವಾದಾಗಿನಿಂದ ದೇಶದಲ್ಲಿ ನೀಡಲಾದ ಲಸಿಕೆ ಡೋಸ್ ಗಳ ಒಟ್ಟು ಸಂಖ್ಯೆ ಈಗ 12.69 ಕೋಟಿಗಿಂತ ಹೆಚ್ಚಾಗಿದೆ.

ಏಮ್ಸ್ ನಲ್ಲಿ ಆಮ್ಲಜನಕ ಬೆಂಬಲಿತ ಹಾಸಿಗೆಗಳ ಹೆಚ್ಚಳ
ಇದಲ್ಲದೆ, ದೇಶಾದ್ಯಂತದ ಎಲ್ಲಾ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಗಳಿಗೆ ಆಮ್ಲಜನಕ ಬೆಂಬಲಿತ ಹಾಸಿಗೆಗಳು ಮತ್ತು ತೀವ್ರ ನಿಗಾ ಘಟಕ (ಐಸಿಯು)-ವೆಂಟಿಲೇಟರ್ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸರ್ಕಾರ ನಿರ್ದೇಶನ ನೀಡಿತು.

ಇದರಲ್ಲಿ ನವದೆಹಲಿ, ಭುವನೇಶ್ವರ, ಜೋಧಪುರ, ಪಾಟ್ನಾ, ರಾಯ್ ಪುರ, ರಿಷಿಕೇಶ್, ಮಂಗಳಗಿರಿ, ನಾಗ್ಪುರ, ಭೋಪಾಲ್, ಪುದುಚೇರಿಯ ಜಿಪ್ಮರ್ ಮತ್ತು ಚಂಡೀಗಢದ ಪಿಜಿಐಎಂಇಆರ್ ಸೇರಿವೆ.

ಈ ಆಸ್ಪತ್ರೆಗಳಲ್ಲಿ ಆಮ್ಲಜನಕ ಬೆಂಬಲಿತ 1,448 ಹಾಸಿಗೆಗಳಿಂದ, ಈ ಸಂಖ್ಯೆಯನ್ನು 2,113 ಕ್ಕೆ ಹೆಚ್ಚಿಸಲಾಗಿದೆ. ಐಸಿಯು-ವೆಂಟಿಲೇಟರ್ ಹಾಸಿಗೆಗಳನ್ನು 519 ರಿಂದ 676ಕ್ಕೆ ಹೆಚ್ಚಿಸಲಾಗಿದೆ.

ಭಾರತವು ಕೋವಿಡ್-19 ರ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವಾಗ, ಈ ಕ್ರಮವು ಈ ರಾಜ್ಯಗಳಾದ್ಯಂತ ಆಸ್ಪತ್ರೆಯ ಹಾಸಿಗೆಗಳ ತುರ್ತು ಅಗತ್ಯವನ್ನು ಪರಿಹರಿಸಲು ಸಹಾಯ ಮಾಡುತ್ತದೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ