ಹೊಸದಿಲ್ಲಿ: ವಿರೋಧ ಪಕ್ಷದ ಭಾರೀ ಪ್ರತಿಭಟನೆಯ ನಡುವೆ ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾಗಿವೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ ಪ್ರೋತ್ಸಾಹ ಮತ್ತು ನೆರವು ಮಸೂದೆ-2020 ಹಾಗೂ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020 ರ ಒಪ್ಪಂದ ಮಸೂದೆ ಯನ್ನು ಮಂಡಿಸಲಾಗಿದೆ.
ಮಸೂದೆ ಚರ್ಚೆ ವೇಳೆ, ಟಿಎಂಸಿ ಸಂಸದರಾದ ಡೆರೆಕ್ ಓ ಬ್ರಯನ್ ಹಾಗೂ ಇತರೆ ಕೆಲ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕೂಡ ಮಸೂದೆಯನ್ನ ವಿರೋಧಿಸಿ ಮಾತನಾಡಿ, ಕೊರೊನಾ ಸಾಂಕ್ರಾಮಿಕದ ನಡುವೆ ಈ ಮಸೂದೆಗಳನ್ನು ಅಂಗೀಕರಿಸಲು ಅವಸರವೇಕೆ? ಈ ಮಸೂದೆಗಳಿಂದ ರೈತ ಸಮುದಾಯಕ್ಕೆ ಏನು ಉಪಯೋಗ? ರೈತರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಉದ್ದೇಶವನ್ನ ಈಡೇರಿಸಿಕೊಳ್ಳಲು ಇದು ಹೇಗೆ ನೆರವಾಗುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ವಿವರಿಸಬೇಕು ಎಂದು ಹೆಚ್ಡಿಡಿ ಒತ್ತಾಯಿಸಿದರು.
ಭಾರೀ ಗದ್ದಲ, ಪ್ರತಿಭಟನೆ ನಡುವೆಯೂ ಎರಡು ಮಸೂದೆ ಅಂಗೀಕಾರಗೊಳಿಸಲಾಗಿದೆ.
Laxmi News 24×7