ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆದುಕೊಂಡು ಬರಲು ಕೇಂದ್ರ ಸರ್ಕಾರಕ್ಕೆ ಸಿಎಂ ಹಾಗೂ ಸಿಎಸ್ ಪತ್ರ ಬರೆದಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಅವರು ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಕೊಲ್ಲಿ ದೇಶಗಳಲ್ಲಿ ಕನ್ನಡಿಗರು ಸಿಲುಕಿರುವ ಬಗ್ಗೆ ಪ್ರತಿಕ್ರಿಯಿಸಿದರು. ಬಹಳಷ್ಟು ಜನ ಕನ್ನಡಿಗರು ಅಲ್ಲಿ ಸಿಲುಕಿದ್ದಾರೆ. ಯಾವ ಸ್ಥಿತಿಯಲ್ಲಿ ಇದ್ದಾರೆ ಅವರೆಲ್ಲ ಎಂಬುದು ಗೊತ್ತಿಲ್ಲ. ದುಬೈನಲ್ಲಿರುವ ಕೆಲವರು ಸಹಾಯ ಮಾಡ್ತಿದ್ದಾರೆ. ಎಂಎಲ್‌ಸಿ ಬೋಜೆಗೌಡ ಕುಟುಂಬ, ಇನ್ನೂ ಹಲವು ಶಾಸಕರು ಅಲ್ಲೇ ಸಿಲುಕಿಕೊಂಡಿದ್ರು. ಬಂಕರ್‌ನಲ್ಲಿಟ್ಟಿದ್ರು ಎಂದು ಅವರು ಹೇಳಿದ್ರು ಎಂದು ತಿಳಿಸಿದ್ದಾರೆ.
ಇರಾನ್‍ನಲ್ಲಿ ಅಲಿ ಖಮೇನಿ ಸಾವು ಹಿನ್ನೆಲೆ, ನಿಗಾ ಇಡಲು ಕೇಂದ್ರ ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ ಕಳಿಸಿರುವ ವಿಚಾರದ ಬಗ್ಗೆ ನಮ್ಮ ಡಿಜಿ ಅವರು ನನಗೆ ಏನೂ ಹೇಳಿಲ್ಲ. ಈ ರೀತಿ ಪತ್ರ ಬಂದಿದೆ ಅಂತ ಮಾಧ್ಯಮಗಳಲ್ಲೇ ನೋಡಿದ್ದು. ಅಹಿತಕರ ಘಟನೆಗಳು ಆಗುತ್ತೆ ಅಂತ ನನಗೆ ಅನಿಸಿಲ್ಲ. ಏನೇ ಇದ್ರೂ ನಾವು ಎಚ್ಚರಿಕೆ ವಹಿಸುತ್ತೇವೆ.
ಖಮೇನಿ ಪರ ಶಾಸಕ ಹ್ಯಾರೀಸ್ ಪ್ರತಿಭಟನೆ ನಡೆಸಿದ ವಿಚಾರವಾಗಿ, ಯಾರೇ ಇರಲಿ ನಿಯಮಾನುಸಾರ ಪ್ರತಿಭಟನೆ ಮಾಡಬೇಕು. ಇಲ್ಲವಾದಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ತೇವೆ. ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ಮಾಡಿ ಅಂತ ಹೈಕೋರ್ಟ್ ಹೇಳಿದೆ. ಬೇರೆ ಕಡೆ ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಹೇಳಿದ್ದಾರೆ.
Laxmi News 24×7