ಗೋಕಾಕ: ಗೋಕಾಕ ನಗರದ ಲಕ್ಷ್ಮಿ ದೇವಸ್ಥಾನ ಮುಂದೆ ಲಖನ ಜಾರಕಿಹೊಳಿ ಅಭಿಮಾನಿ ಬಳಗ ವತಿಯಿಂದ ಹರಕೆ ಪೂರ್ತಿ ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಎಲ್ಲಾಕಡೆ ಭಾರಿ ಸಂಚಲನ ಮೂಡಿಸಿತ್ತು ಅದಕ್ಕೆ ನಿನ್ನೆ ತೆರೆ ಬಿದ್ದಿದ್ದು ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಎರಡನೇ ಸುತ್ತಿನಲ್ಲಿ ಆಯ್ಕೆ ಆಗಿದ್ದಾರೆ.
ಆಯ್ಕೆ ಆದ ಬೆನ್ನಲ್ಲೇ ಅಭಿಮಾನಿ ಗಳ ಸಂಭ್ರಮ ಜೋರಾಗಿತ್ತು ಇನ್ನು ಇದಷ್ಟೇ ಅಲ್ಲದೆ ಕೆಲವೊಂದು ಜನ ಅಭಿಮಾನಿಗಳು ಗೋಕಾಕ ನಗರದ ಆರಾಧ್ಯ ದೇವತೆ ಲಕ್ಷ್ಮಿ ತಾಯಿಗೆ ಹರಕೆಯನ್ನು ಕೂಡ ಕಟ್ಟಿ ಕೊಂಡಿದ್ದರು
ಇನ್ನು ನಡೆದಂತೆ ಸಾಹುಕಾರರು ಹೇಗೋ ಹಾಗೆ ಅವರ್ ಅಭಿಮಾನಿಗಳು ಕೂಡ ಇವತ್ತು ದೇವಿಗೆ ಬೇಡಿಕೊಂಡ ಹರಕೆ ತೀರಿಸುವ ಕಾರ್ಯ ಮಾಡಿದ್ದಾರೆ.
ಇನ್ನು202 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತೀರಿಸಿ ಸಾಹುಕಾರ ಲಖನ ಜಾರಕಿಹೊಳಿ ಅವರಿಗೆ ಮುಂದಿನ ದಿನಮಾನ್ ಗಳಲ್ಲಿ ಯಶಸ್ಸು ಆರೋಗ್ಯ ಐಶ್ವರ್ಯ ನೀಡಲಿ ಎಂದು ಕೂಡ ಕೇಳಿ ಕೊಂಡಿದ್ದಾರೆ ಇನ್ನು ಐದು ಜನ ಸಹೋದರರಲ್ಲಿ 4ಜನ ವಿಧಾನ ಸಭೆಗೆ ಎಂಟ್ರಿ ಆಗಿದಾರೆ.
ಇನ್ನು ಮುಂಬರುವು ವಿಧಾನ ಸಭಾ ಚುನಾವಣೆಯಲ್ಲಿ ಉಳಿದ್ ಇನ್ನೊಬ್ಬ ಸಹೋದರನನ್ನು ಏನಾದರೂ ವಿಧಾನ ಸಭೆ ಚುನಾವಣೆ ಗೆ ಎಂಟ್ರಿ ಕೊಡ್ತಾರ ಅನ್ನೋದನ್ನ ಕಾದು ನೋಡಬೇಕಿದೆ