ಮೈಸೂರು: ಇತ್ತೀಚಿನ ದಿನಗಳಲ್ಲಿ ಭ್ರಷ್ಟರನ್ನು ದೂರುವುದು ಕಡಿಮೆ ಆಗುತ್ತಿದೆ ಅಂತ ನಿವೃತ್ತ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಮೈಸೂರಿನಲ್ಲಿ ಕೋಳಿ ಸಾಂಬರ್ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದವರಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿ, ಗೌರವಿಸಲಾಗುತ್ತಿದೆ. ಆಡಳಿತ ವ್ಯವಸ್ಥೆಯಿಂದಲೇ ಜನರಿಗೆ ಅನ್ಯಾಯವಾಗುತ್ತಿದೆ. ಇದು ಸಮಾಜದ ತಪ್ಪಲ್ಲ, ಈ ಬಗ್ಗೆ ಪ್ರಶ್ನೆ ಮಾಡದ ವ್ಯಕ್ತಿಗಳದ್ದೇ ತಪ್ಪು ಅಂತ ಅಸಮಾಧಾನ ಹೊರಹಾಕಿದ್ರು.
ಮೊದಲೆಲ್ಲಾ ರಾಷ್ಟ್ರದ ಮಹಾನ್ ನಾಯಕರ ಭಾವಚಿತ್ರಗಳನ್ನು ಮನೆಗಳಲ್ಲಿ ಹಾಕಿ ಅವರಂತೆಯೇ ಮೇರು ವ್ಯಕ್ತಿಗಳಾಗಬೇಕೆಂದು ಮಕ್ಕಳಿಗೆ ತಿಳಿ ಹೇಳಲಾಗುತ್ತಿತ್ತು, ಆದ್ರೀಗ ಯಾರ ಭಾವಚಿತ್ರ ಹಾಕಿ ಅವರಂತೆ ಆಗಿ ಎಂದು ಹೇಳಬೇಕು? ಅಂತ ಪ್ರಶ್ನೆ ಮಾಡಿದ್ರು.