Breaking News

ಅವಮಾನ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ ಹಿರಿಯ ನಟ ಜಗ್ಗೇಶ್..!

Spread the love

ಬೆಂಗಳೂರು, ಫೆ.23- ನನ್ನನ್ನು ಹೀಯಾಳಿಸುವ ಮೂಲಕ 40 ವರ್ಷದ ಕಲಾಸೇವೆಯನ್ನು ಅಪಮಾನ ಮಾಡಿದ್ದೀರಾ, ನಾನು ಏನೂ ತಪ್ಪು ಮಾಡಿಲ್ಲ, ಯಾರಿಗೂ ಹೆದರಿ ಓಡಿ ಹೋಗುವುದಿಲ್ಲ. ಚಿತ್ರರಂಗದಲ್ಲಿ ರೌಡಿಸಂ ಅನ್ನು ಪ್ರೋತ್ಸಾಹಿಸುವ ಕೆಲಸ ಬೇಡ ಎಂದು ಹಿರಿಯ ನಟ ನವರಸನಾಯಕ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುಮಾರು 14 ನಿಮಿಷ 47 ಸೆಕೆಂಡ್‍ನ ವಿಡಿಯೋ ಮೂಲಕ ತಮಗಾದ ಅವಮಾನ, ನೋವುಗಳನ್ನು ಹೊರಹಾಕಿದ್ದಾರೆ.ಇಂದು ಬೆಳಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುಮಾರು 14 ನಿಮಿಷ 47 ಸೆಕೆಂಡ್‍ನ ವಿಡಿಯೋ ಮೂಲಕ ತಮಗಾದ ಅವಮಾನ, ನೋವುಗಳನ್ನು ಹೊರಹಾಕಿದ್ದಾರೆ.ನಿನ್ನೆ ಸುಮಾರು 20 ಮಂದಿ ಹುಡುಗರು ನನ್ನ ಬಳಿ ಬಂದಿದ್ದರು, ಎಲ್ಲರೂ ಉದ್ವೇಗದಲ್ಲಿದ್ದರು, ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ, ಆದರೂ ನಾನು ಹೆದರಿ ಓಡಿ ಹೋಗಿಲ್ಲ, ಗಂಡಸಾಗಿ ಅವರ ಮುಂದೆ ಕುಳಿತು ಮಾತನಾಡಿದ್ದೇನೆ, ಉತ್ತರ ಕೊಟ್ಟಿದ್ದೇನೆ, ನನ್ನ ಸ್ನೇಹಿತರ ಮೂಲಕ ಅದೇ ಹುಡುಗರು ರಾತ್ರಿ ನನ್ನ ಜೊತೆ ಮಾತನಾಡಿದ್ದಾರೆ ಎಂದು ಜಗ್ಗೇಶ್ ಹೇಳಿದ್ದಾರೆ.

ನಾನು 40 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದಾಗ ಬಹಳಷ್ಟು ಮಂದಿ ಹುಟ್ಟೇ ಇರಲಿಲ್ಲ, ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಶ್, ಶಂಕರ್‍ನಾಗ್, ಅನಂತ್‍ನಾಗ್‍ರಂತವರ ಜೊತೆ ನೋವನ್ನು ಹಂಚಿಕೊಂಡು ಬೆಳೆದವನು


Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ