Breaking News

50 ವರ್ಷಗಳಿಂದ ತಿರುಗಿ ನೋಡದ ಸರ್ಕಾರ, ಸ್ವತಃ ಖರ್ಚಿನಲ್ಲಿಯೇ ರಸ್ತೆ ನಿರ್ಮಿಸಿಕೊಂಡ ಗ್ರಾಮಸ್ಥರು..!

Spread the love

ತಿಪಟೂರು , – ಕಳೆದ 50 ವರ್ಷಗಳಿಂದಲೂ ಸರ್ಕಾರದಿಂದ ಅಭಿವೃದ್ಧಿಪಡಿಸದ ರಸ್ತೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಅಭಿವೃದ್ಧಿಪಡಿಸಿ ಮಾದರಿ ರಸ್ತೆಯನ್ನು ನಿರ್ಮಾಣ ಮಾಡಿ ಜನಪ್ರತಿನಿಗಳ ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿದ್ದಾರೆ.

ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮತ್ತಿಹಳ್ಳಿ ಗ್ರಾಮದ ಕೆರೆಯ ಹಿಂಭಾಗದಿಂದ ಚಿಕ್ಕಬಿದರೆ ಗ್ರಾಮಕ್ಕೆ ಸಂಪರ್ಕಿಸುವ ಸುಮಾರು 1.5 ಕಿ.ಮೀ.ರಸ್ತೆಯನ್ನು ಒಂದು ಲಕ್ಷ ರೂಗಳ ಸ್ವತಃ ಖರ್ಚಿನಲ್ಲಿಯೇ ಗ್ರಾಮಸ್ಥರು ಅಭಿವೃದ್ಧಿಪಡಿಸಿದ್ದಾರೆ.

ರಸ್ತೆಯೂ ಹಿಂದೆ ಕಾಲುದಾರಿಯಲ್ಲಿ ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿತ್ತು. ಈ ರಸ್ತೆಯೂ ಗ್ರಾಮದ ಅನೇಕರಿಗೆ ಹೊಲ, ಗದ್ದೆ, ತೋಟ ಹಾಗೂ ಪಕ್ಕದ ಗ್ರಾಮಕ್ಕೆ ತರಳಲು ಅವಶ್ಯಕವಾಗಿತ್ತು.

ಆದರೆ ಗ್ರಾಮ ಪಂಚಾಯತಿಯಿಂದ ಶಾಸಕರವರೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದಂತಹ ಸಂದರ್ಭದಲ್ಲಿ ಗ್ರಾಮದ ಪ್ರಜ್ಞಾವಂತ ಯುವಕರು, ಹಿರಿಯರು ಒಟ್ಟಾಗಿ ಸೇರಿ ನಿ ಸಂಗ್ರಹ ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿ ಯಶಸ್ವಿಯಾಗಿದ್ದಾರೆ. ರಸ್ತೆಯನ್ನು ಗ್ರಾಮದ ದೇವರಾದ ವೀರಭದ್ರೇಶ್ವರ, ನಾಡದೇವತೆ ಬಿದರಾಬಿಂಕದೇವಿ, ಯಲ್ಲಮ್ಮದೇವಿ ದೇವರನ್ನು ರಸ್ತೆ ಮೂಲಕ ಕರೆದುಕೊಂಡು ಹೋಗಿ ಪೂಜೆ, ಅಭಿಷೇಕ ಮಾಡಿ ಲೋಕಾರ್ಪಣೆ ಮಾಡಿದ್ದಾರೆ.

ಗ್ರಾಮೀಣ ಭಾಗದ ರಸ್ತೆಗಳನ್ನು ಸಂಪರ್ಕಿಸುವ ಸಲುವಾಗಿ ನರೇಗಾ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಿದ್ದರೂ ಅಕಾರಿಗಳ, ಜನಪ್ರತಿನಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರೇ ಸ್ವತಃ ಖರ್ಚಿನಲ್ಲಿ ರಸ್ತೆ ಅಭಿವೃದ್ಧಿ ಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ