ಭಾರತೀನಗರ: ಭಾರಿ ಮಳೆಯಿಂದಾಗಿ ಹನುಮಂತನಗರ ಸಮೀಪವಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಭಾನುವಾರ ಸುರಿದ ಭಾರಿ ಮಳೆಗೆ ಹನುಮಂತನಗರ ಸಮೀಪದ ಹೆಬ್ಬಾಳ ಚನ್ನಯ್ಯ ನಾಲೆ ಸೇತುವೆ ಮೇಲೆ ಮಳೆಯ ನೀರು ನಿಂತಿದ್ದರಿಂದ ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ.
ಶತತ 2 ಗಂಟೆಗಳ ಸುರಿದ ಭಾರಿ ಮಳೆಗೆ ಭಾರತೀನಗರ-ಮಂಡ್ಯ ರಸ್ತೆ ಮಾರ್ಗವಾಗಿ ಬರುವ ಹನುಮಂತನಗರ ರಸ್ತೆ ಸಮೀಪದಲ್ಲಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ ಮೇಲೆ ಮಳೆ ನೀರು ನಿಂತಿದೆ. ಇದರಿಂದ ಹೊರಗಿನಿಂದ ಬಂದ ವಾಹನ ಸವಾರರು ಭಯದಿಂದಲೇ ಸಂಚರಿಸುತ್ತಿದ್ದ ದೃಶ್ಯ ಕಂಡುಬಂದಿತು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಮೇಲೆ ನೀರು ನಿಲ್ಲದಂತೆ ಮಾಡಬೇಕು. ಮಳೆ ನೀರು ಹೆಬ್ಬಾಳ ನಾಲೆಗೆ ಹೋಗುವಂತೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Laxmi News 24×7