ಗೋಕಾಕ: ಮೋದಿ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಕೊರೋನಾ ಪ್ಯಾಕೇಜ್ ದುರುಪಯೋಗವಾಗುವ ಪ್ರಶ್ನೆಯೆ ಉದ್ಭವಿಸುವುದಿಲ್ಲ ಏಕೆಂದರೆ ಅದು ಘೋಷಣೆ ಮಾತ್ರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಮಾತನಾಡಿ 2014 ರಲ್ಲಿ ಘೋಷಣೆಯಂತೆ ಇದು ಕೂಡ ಮೋದಿ ಜುಮ್ಲಾ ಮಾತ್ರ ಎಂದಿರುವ ಅವರು ಜನಸಾಮಾನ್ಯರಿಗೆ ನೆರವಾಗುವ ಯಾವುದೇ ಯೋಜನೆಯಿಲ್ಲ ಎಂದರು.
ಈಗಾಗಲೇ ಸರ್ಕಾರದ ಅಂಗಸಂಸ್ಥೆಗಳಿಂದ ಮತ್ತು ವಿವಿಧ ಇಲಾಖೆಗಳಿಂದ ಪರಿಹಾರ ಘೋಷಿಸಲಾಗಿದೆ. ಅವು ಎಲ್ಲವೂ ಸೇರಿ ಈ 20 ಲಕ್ಷ ಕೋಟಿಯ ಕೇಂದ್ರ ಗಿಮ್ಮಿಕ ಮಾಡಿದೆ ಎಂದು ಟೀಕಿಸಿದರು.
https://youtu.be/j0nvlESxpts
ಬ್ಯಾಂಕಗಳ ಮೂಲಕ ಸಬ್ಸಿಡಿ, ಕಂತುಗಳು ಅನ್ನುತ್ತಾರೆ ಆದ್ರೆ ಯಾವುದೇ ರೀತಿಯ ನೇರವಾದ ಸಹಾಯ ವಿಲ್ಲ. ನಮ್ಮ ದುಡ್ಡು ನಮಗೆ ನೀಡುವುದಕ್ಕೆ ಕೇಂದ್ರ ಪ್ಯಾಕೇಜ್ ಎಂದು ನಾಮಕರಣ ಮಾಡಿದೆ. ಉದಾಹರಣೆಗಾಗಿ 3 ಲಕ್ಷ ಕೋಟಿ ಸಣ್ಣ ಕೈಗಾರಿಕೆಗಳಿಗೆ ಸಾಲ ಎಂದು ಹೇಳಿದ್ದಾರೆ. ಇದಕ್ಕೆ ಸ್ಯುರಿಟಿ ಸರ್ಕಾರ ಎಂದು ಹೇಳಿದೆ. ಆದ್ರೆ ಬಡ್ಡಿಯೂ ತುಂಬಿ ತೆಗೆದುಕೊಂಡ ಸಾಲ ತುಂಬಲೆಬೇಕು ಎಂದು ಹೇಳಿದ್ದಾರೆ.
ಈಗ ಘೋಷಣೆ ಮಾಡಿರುವ ಪ್ಯಾಕೇಜ್ ನಿಂದ ಜನರಿಗೆ ಯಾವುದೇ ರೀತಿಯ ರಿಲೀಫ್ ಸಿಗುವುದಿಲ್ಲ ಇದು ಕೂಡ ಭಾಷಣ ಮಾತ್ರ ಎಂದು ಪ್ರಧಾನಿ ಮೋದಿ ಅವರಿಗೆ ಟಾಂಗ್ ಕೊಟ್ಟರ ಅವರು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೊರೋನಾ ಪ್ಯಾಕೇಜ್ ಕಣ್ಣೊರೆಸುವ ತಂತ್ರ ಎಂದಿದ್ದಾರೆ.
https://youtu.be/aHlfLX-o7Ps