ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರ ಬಿದ್ದಿ ಪರಿಣಾಮ ಕಾರ್ ಜಖಂ ಆಗಿದೆ.
ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ತರೀಕೆರೆಯಲ್ಲಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಿರಂತರ ಮಳೆಯಿಂದಾಗಿ ಹೆಚ್ಚಿದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಕೊರೊನಾ, ಲಾಕ್‍ಡೌನ್ ಮಧ್ಯೆ ಮಳೆಯೂ ಸುರಿಯುತ್ತಿದೆ ಎಂದು ಭಯಭೀತರಾಗಿದ್ದಾರೆ.
ತರೀಕೆರೆ, ಮೂಡಿಗೆರೆ, ಕಡೂರು ತಾಲೂಕಿನ ಹಲವೆಡೆ ಮಳೆಯಾಗಿದೆ. ಮಳೆ ನೀರು ರಸ್ತೆ ಮೇಲೆ ತುಂಬಿ ಹರಿದಿದ್ದು, ವಾಹನ ಸವಾರರ ಪರದಾಡುವಂತಾಯಿತು. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಎಫೆಕ್ಟ್ ಕುಡುಕರಿಗೂ ತಟ್ಟಿದ್ದು, ಎಷ್ಟೇ ಮಳೆ ಸುರಿದರೂ ಕ್ಯೂನಿಂದ ಮಾತ್ರ ಕದಲಿಲ್ಲ. ಎಣ್ಣೆಯನ್ನು ಪಡೆಯುವ ವರೆಗೂ ಮಳೆಯಲ್ಲೇ ನನೆದು ತಮ್ಮ ಸರತಿ ಬಂದ ನಂತರ ಎಣ್ಣೆ ಖರಿದಿಸಿ ಮರಳಿದ್ದಾರೆ.