ಬೆಂಗಳೂರು: ಸಿಲಿಕಾನ್ ಸಿಟಿ ಸೀಲ್‍ಡೌನ್ ಆಗುವುದು ಬಹುತೇಕ ಪಕ್ಕಾ ಆಗಿದೆ. ನಗರದಲ್ಲಿ ನಿತ್ಯ 150ಕ್ಕೂ ಪಾಸಿಟಿವ್ ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ಪೊಲೀಸ್, ಸಾರಿಗೆ ನೌಕರರು ಹಾಗೂ ವೈದ್ಯರಿಗೂ ಎಲ್ಲ ವಿಭಾಗದ ಜನರಿಗೂ ಕೊರೊನಾ ಬಂದಿದೆ. ಹೀಗಾಗಿ ಕೊರೊನಾ ಪ್ರತಿದಿನ ಹೆಚ್ಚುತ್ತಿದ್ದು, ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ.
ಬೆಂಗಳೂರನ್ನ ಮತ್ತೆ 15 ದಿನ ಲಾಕ್‍ಡೌನ್ ಮಾಡಿಬಿಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಕೆಲ ಸಚಿವರು ಲಾಕ್‍ಡೌನ್ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಂದಾಯ ಸಚಿವ, ಆರೋಗ್ಯ ಸಚಿವರು ಸಿಎಂ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಲಾಕ್‍ಡೌನ್ ಮಾಡಲು ಸಾಧ್ಯವಿಲ್ಲ, ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸದ್ಯ ಐದು ಪ್ಲಾನ್‍ಗಳು ರಾಜ್ಯ ಸರ್ಕಾರದ ಮುಂದಿದ್ದು, ಗುರುವಾರದ ಕ್ಯಾಬಿನೆಟ್ ಸಭೆಯಲ್ಲಿ ಆ 5 ಪ್ಲಾನ್‍ಗಳು ಬಗ್ಗೆ ಚರ್ಚೆ ಮಾಡಲಾಗುತ್ತದೆ. ಆ 5 ಲಾಕ್‍ಡೌನ್ ಪ್ಲಾನ್‍ಗಳು ಏನು ಗೊತ್ತಾ?
1. ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆ ಕರ್ಫ್ಯೂ ಜಾರಿ ಮಾಡುವ ಪ್ಲಾನ್ ಇದೆ.
2. ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆ ತನಕ ಕರ್ಫ್ಯೂ ಪ್ಲಾನ್
3. ಸೋಂಕಿತ ಏರಿಯಾಗಳನ್ನ ಸೇರಿಸಿ ಬಂಚ್ ಲಾಕ್‍ಡೌನ್ ಮಾಡುವುದು
4. ಸೋಂಕಿತ ಏರಿಯಾಗಳನ್ನು ಫುಲ್ ಸೀಲ್‍ಡೌನ್ ಮಾಡುವುದು
5. ಸೋಂಕಿತರು ಹೆಚ್ಚಿರುವ ಏರಿಯಾದ ರಸ್ತೆ ಮಾತ್ರ ಸೀಲ್‍ಡೌನ್ ಮಾಡುವುದು
ಸೀಲ್‍ಡೌನ್‍ಗೆ ಕಾರಣಗಳೇನು?
ಬೆಂಗಳೂರಲ್ಲಿ ಡೆಡ್ಲಿ ವೈರಸ್ ದಿನವೊಂದಕ್ಕೆ ಶತಕ ದಾಟಿ ಮುನ್ನುಗ್ಗುತ್ತಿದೆ. 5 ದಿನಗಳಿಂದ ಬೆಂಗಳೂರಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸ್, ಡಾಕ್ಟರ್ಸ್, ಸಾರಿಗೆ ನೌಕರರು, ಭಿಕ್ಷುಕರು, ಸರ್ಕಾರಿ ನೌಕರರು ಸೇರಿ ಬಹುತೇಕ ಕಡೆ ಸೋಂಕು ಹರಡಿದೆ. ಪರಿಸ್ಥಿತಿ ಕೈ ಮೀರಿದರೆ ಬೆಂಗಳೂರು ಸೀಲ್‍ಡೌನ್ ಆಗುವುದು ಖಚಿತವಾಗಿದೆ. ಪ್ರಕರಣಗಳು ಹೆಚ್ಚಾದರೆ ಸೀಲ್‍ಡೌನ್ ಅನಿವಾರ್ಯ ಎಂದು ತಜ್ಞರು ಸೂಚಿಸಿದ್ದಾರೆ.
ಸೀಲ್‍ಡೌನ್‍ಗೆ ತಜ್ಞರು ಕೊಟ್ಟ ಕಾರಣವೇನು?
* ಸರ್ಕಾರದ ಬಳಿ ಸೌಲಭ್ಯಗಳಿಲ್ಲ: ಬೆಡ್, ಅಂಬುಲೆನ್ಸ್‍ಗಳು ಸಿಗುತ್ತಿಲ್ಲ, ರೋಗಿಗಳು ಮಾತ್ರ ನೂರಾರು ಸಂಖ್ಯೆಯಲ್ಲಿ ಬೆಳೆಯುತ್ತಲೇ ಇದೆ..
* ಆಸ್ಪತ್ರೆಗಳ ವ್ಯವಸ್ಥೆ ಮಾಡಲು ಸೋತ ಸರ್ಕಾರ: ವಿಕ್ಟೋರಿಯಾಗಾಗಿ ಮೀಸಲಿರುವ ಆಸ್ಪತ್ರೆಗಳಲ್ಲಿ ಕಂಪ್ಲೀಟ್ ಫುಲ್
* ಸೋಂಕಿತರು ಮನೆಯಲ್ಲೇ ಉಳಿಯುವಂತೆ ಆಗಿದೆ
* ಆಸ್ಪತ್ರೆಗಳ ವ್ಯವಸ್ಥೆ ಮಾಡಲು ಸರ್ಕಾರ ಸೋತಿದೆ
* ವಾಣಿಜ್ಯ, ಕೈಗಾರಿಕೆ, ಸಾರಿಗೆ ಎಲ್ಲಾ ಕಡೆ ಸೋಂಕು ಕಾಣಿಸಿಕೊಳ್ಳುತ್ತಿದೆ
* ಲಾಕ್‍ಡೌನ್ ಸಡಲಿಕೆ ಬಳಿಕ ಕೇಸ್ ದುಪ್ಪಟ್ಟಾಗಿದೆ, ಮತ್ತೆ ಲಾಕ್‍ಡೌನ್ ಮಾಡದೇ ವಿಧಿಯಿಲ್ಲ
* ಸರ್ಕಾರಕ್ಕೆ ಲಾಕ್‍ಡೌನ್ ಸಡಲಿಕೆ ಲಾಭಕ್ಕಿಂತ ಕೊರೊನಾ ಚಿಕಿತ್ಸೆ, ಕಂಟೈನ್ಮೆಂಟ್ ನಷ್ಟವೇ ದುಬಾರಿ
* ಸದ್ಯ 501 ಕಂಟೈನ್‍ಮೆಂಟ್ ಜೋನ್‍ಗಳ ಗುರುತಿಸಿದ್ದು, ನಿತ್ಯ 50ಕ್ಕೂ ಹೆಚ್ಚು ಹೊಸ ಕೇಸ್ ಪಟ್ಟಿಗೆ ಸೇರ್ಪಡೆ
* ಸಮುದಾಯಕ್ಕೆ ತಲುಪಿದಾಗ ಕೈ ಚೆಲ್ಲೊ ಬದಲು ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೇಯದು
ಕೊರೊನಾ ಪ್ರಕರಣಗಳು ಹೆಚ್ಚಾದರೆ ಸೀಲ್‍ಡೌನ್ ಅನಿವಾರ್ಯವಾಗಿದೆ. ಈ ಸಂಬಂಧ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾವಿನ ಸಂಖ್ಯೆ ನಿಲ್ಲಿಸಲು ಲಾಕ್‍ಡೌನ್ ಅನಿವಾರ್ಯ ಎಂದಿದ್ದಾರೆ.