Breaking News

ಮಹಾಮಾರಿ ಕೊರೊನಾ ಗೆದ್ದ 7 ವರ್ಷದ ಮಕ್ಕಳು………….

Spread the love

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಜಗತ್ತಿನ ಮೇಲೆ ಸವಾರಿ ಹೆಚ್ಚು ಮಾಡುತ್ತಿರುವ ಕೊರೊನಾ ವೈರಸ್ ಈಗಾಗಲೇ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇತ್ತ ಹಲವರು ಮಹಾಮಾರಿಯ ವಿರುದ್ಧ ಹೋರಾಟ ಮಾಡಿ ಗುಣಮುಖರಾಗುತ್ತಿದ್ದು, ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಏಳು ವರ್ಷದ ಇಬ್ಬರು ಮಕ್ಕಳು ಕೊರೊನಾಗೆ ಸೆಡ್ಡು ಹೊಡೆದಿದ್ದಾರೆ.

ಮೇ 19 ಹಾಗೂ 22 ರಂದು ಕೊರೊನಾ ಪಾಸಿಟಿವ್ ಬಂದಿದ್ದ ಇಬ್ಬರು ಮಕ್ಕಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಬದುಕಿನ ಅನಿವಾರ್ಯತೆಗೆ ಮುಂಬೈ ಸೇರಿದ್ದ ಇವರು ಕೊರೊನಾ ಲಾಕ್‍ಡೌನ್ ಹಿನ್ನೆಲೆ ಉದ್ಯೋಗವಿಲ್ಲದೆ ಊರಿಗೆ ಹಿಂದಿರುಗಿದ್ದರು. ಟೆಂಪೋದಲ್ಲಿ ಬಂದಿದ್ದ ಎಲ್ಲರನ್ನೂ ಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಿ, ಪರೀಕ್ಷೆ ನಡೆಸಲಾಗಿತ್ತು.

ಮೇ 19 ಹಾಗೂ 22 ರಂದು ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಕೂಡಲೇ ಅವರನ್ನ ಚಿಕ್ಕಮಗಳೂರು ನಗರದ ಕೋವಿಡ್ 19 ಆಸ್ಪತ್ರೆ ದಾಖಲಿಸಲಾಗಿತ್ತು. ಕಳೆದ ಎಂಟತ್ತು ದಿನಗಳಿಂದ ನಿರಂತರ ಚಿಕಿತ್ಸೆಯ ಬಳಿಕ ಇಂದು ಇಬ್ಬರು ಮಕ್ಕಳು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರ

ಈ ಇಬ್ಬರು ಮಕ್ಕಳು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಪಟ್ಟು 18 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಅದರಲ್ಲಿ ತರೀಕೆರೆ ಗರ್ಭಿಣಿ ಹಾಗೂ ಮೂಡಿಗೆರೆಯ ವೈದ್ಯರ ಪಾಸಿಟಿವ್ ಕೇಸ್‍ನ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‍ನಲ್ಲಿ ಪರೀಕ್ಷೆಯ ಬಳಿಕ ನೆಗೆಟಿವ್ ಎಂದು ವರದಿ ಬಂದಿದ್ದು, ಜಿಲ್ಲೆಯಲ್ಲಿ 14 ಸಕ್ರಿಯ ಪ್ರಕರಣಗಳಿವೆ.

https://youtu.be/OYEMtBeW6b0


Spread the love

About Laxminews 24x7

Check Also

ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು

Spread the loveಚಿಕ್ಕಮಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಪಕ್ಷದ ವಿರುದ್ಧವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ