ಬೆಂಗಳೂರು, ಮೇ 25- ರಾಜ್ಯದ ನಾನಾ ಭಾಗಗಳಿಂದ ಶ್ರಮಿಕ್ ರೈಲಿನ ಮೂಲಕ ಸುಮಾರು 1.50 ಲಕ್ಷ ವಲಸಿಗರು ತಮ್ಮೂರಿಗೆ ಸಂತಸದಿಂದ ತೆರಳಿದ್ದಾರೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಸುಮಾರು 150 ರೈಲುಗಳು ಬಿಹಾರ, ಜಾರ್ಖಂಡ್, ಒಡಿಸ್ಸಾ, ನವದೆಹಲಿ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ಭಾಗಗಳಿಗೆ ವಲಸಿಗರನ್ನು ಸುರಕ್ಷಿತವಾಗಿ ತಲುಪಿಸಿದೆ
ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಅವರಿಗೆ ಕುಡಿಯುವ ನೀರಿನ ಬಾಟಲ್, ಹಣ್ಣು, ಪಾನೀಯ, ಬನ್ ಸೇರಿದಂತೆ ಆಹಾರ ಉತ್ಪನ್ನಗಳ ಪ್ಯಾಕೆಟ್‍ಗಳನ್ನು ಕಾರ್ಮಿಕ ಇಲಾಖೆಯೊಂದಿಗೆ ನೀಡಿ ಕಳುಹಿಸಿಕೊಡಲಾಗಿದೆ.
ಇದಲ್ಲದೆ ಮಕ್ಕಳಿಗೆ ಚಾಕೊಲೇಟ್, ಬಿಸ್ಕೆಟ್ ಪೊಟ್ಟಣಗಳನ್ನು ಕೂಡ ನೀಡಲಾಗಿದೆ. ಹಲವು ಸ್ವಯಂ ಸೇವಾ ಸಂಸ್ಥೆಗಳು, ಕಂಪೆನಿಗಳು ನೆರವಿಗೆ ಬಂದಿದ್ದು , ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸುವುದಾಗಿ ಬೆಂಗಳೂರು ವಿಭಾಗದ ನೈಋತ್ಯ ರೈಲ್ವೆ ಡಿಸಿಎಂ ರೋಷನ್ ಕುಮಾರ್ ತಿಳಿಸಿದ್ದಾರೆ.