ಬೆಂಗಳೂರು: ತಮಗಿಂತ ಹೆಚ್ಚು ಮದ್ಯ ಸೇವನೆ ಮಾಡಿದ್ದ ಗೆಳೆಯನನ್ನು ಕೊಂದ ಇಬ್ಬರನ್ನು ಬಂಧಿಸುವಲ್ಲಿ ಬೆಂಗಳೂರಿನ ಆರ್.ಟಿ.ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇ 4ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೇ 6ರಂದು ಮದ್ಯ ಖರೀದಿಸಿ ರಾಜೇಶ್, ಸುಜಿತ್ ಮತ್ತು ಕಿಶೋರ್ ಸೇರಿಕೊಂಡು ಪಾರ್ಟಿ ಮಾಡಿದ್ದರು. ಪಾರ್ಟಿ ಮಧ್ಯೆ ಹೆಚ್ಚು ಮದ್ಯ ತಮಗೆ ಬೇಕೆಂದು ಮೂವರು ಕಿತ್ತಾಡಿಕೊಂಡಿದ್ದಾರೆ.
ಮದ್ಯ ಖರೀದಿಗೆ ಕಿಶೋರ್ ಹೆಚ್ಚು ನೀಡಿಲ್ಲ ಎಂದು ರಾಜೇಶ್ ಮತ್ತು ಸುಜಿತ್ ಕಿಡಿಕಾರಿದ್ದಾರೆ. ಹೆಚ್ಚು ಹಣ ನೀಡದೇ ಅಧಿಕ ಮದ್ಯ ಕುಡಿದ ಎಂಬ ಕಾರಣಕ್ಕೆ ರಾಜೇಶ್ ಮತ್ತು ಸುಜಿತ್ ಸೇರಿಕೊಂಡು ಗೆಳೆಯ ಕಿಶೋರ್ ನನ್ನು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು