Breaking News
a view of Kempegowda Bus stand in Bengaluru on Wednesday during the lockdown with a few relaxation. -KPN ###

ಮೇ 17ರ ಬಳಿಕ.. ಏನಿರುತ್ತೆ? ಏನಿರಲ್ಲ?………..

Spread the love

ಬೆಂಗಳೂರು: ಕೊರೊನಾ ಲಾಕ್‍ಡೌನ್ 3.0 ಮುಕ್ತಾಯಕ್ಕೆ ಇನ್ನು 7 ದಿನ ಬಾಕಿ ಇದೆ. ಈ ಹೊತ್ತಲ್ಲೇ ಮೇ 17ರ ಬಳಿಕ ಮುಂದಿನ ಕಥೆ ಏನು? ಲಾಕ್‍ಡೌನ್ ಅಂತ್ಯ ಆಗುತ್ತಾ? ಮತ್ತೆ ಏನಾದರೂ ಮುಂದುವರಿಸ್ತಾರಾ? ಮುಂದುವರಿಸೋದಾದ್ರೆ, ಯಾವ ಮಾರ್ಗಸೂಚಿ ಇರುತ್ತೆ? ಲಾಕ್‍ಡೌನ್ ಎಂಡ್ ಆದರೆ ಮತ್ತೆ ವೈರಸ್ ಹಬ್ಬಿದ್ರೆ ಏನ್ ಮಾಡೋದು? ಅನ್ನೋ ಎಲ್ಲಾ ಲೆಕ್ಕಾಚಾರ-ಆತಂಕದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮಧ್ಯಾಹ್ನ 3 ಗಂಟೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದಾರೆ.

ಮೋದಿ ಜೊತೆಗಿನ ಈ ವಿಡಿಯೋ ಸಂವಾದಕ್ಕೆ ಮೊದಲು ನಾಳೆ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಸಚಿವರು, ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸ್ತಿದ್ದಾರೆ. ರಾಜ್ಯದ ಕೊರೋನಾ ಪ್ರಕರಣ, ಲಾಕ್‍ಡೌನ್ ನಿರ್ಬಂಧ, ಲಾಕ್‍ಡೌನ್ ಸಡಿಲಿಕೆ, ನಿರ್ವಹಣೆಗಳ ಬಗ್ಗೆ ವಿವರ ಪಡೆಯಲಿದ್ದಾರೆ.

ಮೇ 17ರ ಬಳಿಕ.. ಏನಿರುತ್ತೆ? ಏನಿರಲ್ಲ?
> ಎಲ್ಲ ಜಿಲ್ಲೆಗಳಲ್ಲೂ ಅಂತರ್ ಜಿಲ್ಲಾ ಸಾರಿಗೆಗೆ ಅವಕಾಶ ಸಾಧ್ಯತೆ.
> ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಸಾರಿಗೆ ಸಂಚಾರಕ್ಕೆ ಅವಕಾಶ ಸಾಧ್ಯತೆ.
> ಸರ್ಕಾರಿ, ಖಾಸಗಿ ಬಸ್, ಆಟೋ ರಿಕ್ಷಾ, ಟ್ಯಾಕ್ಸಿಗೆ ಅವಕಾಶ ಸಿಗಬಹುದು.
> ಶೇ.50 ರಷ್ಟು ಬಸ್, ಪ್ರಯಾಣಿಕರಿಗೆ ಅವಕಾಶ ಸಾಧ್ಯತೆ.
> ಶಾಪಿಂಗ್ ಮಾಲ್, ಥಿಯೇಟರ್‍ಗಳಿಗೆ ನಿರ್ಬಂಧ ಮುಂದುವರಿಸಬಹುದು.
> ಧಾರಾವಾಹಿ, ಸಿನಿಮಾ ಹೊರಾಂಗಣ ಶೂಟಿಂಗ್‍ಗೂ ನಿರ್ಬಂಧ ಮುಂದುವರಿಸಬಹುದು.
> ದೇಗುಲ, ದೇವರ ಜಾತ್ರೆ, ಸಂತೆ, ಉತ್ಸವಗಳಿಗೆ ಬಹುತೇಕ ನಿರ್ಬಂಧ ಇರಬಹುದು.
> ಸರ್ಕಾರಿ, ಖಾಸಗಿ ಸಭೆ, ಸಮಾರಂಭಗಳಿಗೂ ಅವಕಾಶ ಕೊಡದಿರಬಹುದು.
> ಜೂನ್ ಮಧ್ಯಭಾಗ ಅಥವಾ ಜುಲೈನಲ್ಲಿ ಶಾಲಾ-ಕಾಲೇಜುಗಳ ಆರಂಭ ಆಗಬಹುದು.

ಈ ಮಧ್ಯೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಈ ಸಂಬಂಧ ನಾಳೆ ಸರ್ಕಾರಿ ಬ್ಯಾಂಕ್‍ಗಳ ಜೊತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚರ್ಚೆ ನಡೆಸಲಿದ್ದಾರೆ.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ