ಬೆಂಗಳೂರು: ಅಂಗಡಿ ಓಪನ್ ಮಾಡಿದ ಮೊದಲ ದಿನವೇ ಮದ್ಯಪ್ರಿಯರಿಗೆ ಸರ್ಕಾರ ಬೆಲೆ ಏರಿಕೆಯ ಶಾಕ್ ನೀಡಿದೆ. ಒಣಗಿದ ತುಟಿಗೆ ಎಣ್ಣೆ ಸೇರಿ ನಶೆ ಏರುವ ಮೊದಲೇ ಕಿಕ್ ಇಳಿಯುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಇವತ್ತು ಮದ್ಯ ಖರೀದಿ ಮಾಡೋರಿಗೆ ಬೆಲೆ ಏರಿಕೆಯ ಬಿಸಿ ತಾಗಲ್ಲ. ಅಂಗಡಿಯಲ್ಲಿ ಹಳೆ ಸ್ಟಾರ್ ಇರೋದರಿಂದ ಮೊದಲ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ನಾಳೆಯಿಂದ ಬಜೆಟ್ ನಲ್ಲಿ ಸೆಸ್ ಶೇ.6 ಅನ್ವಯವಾಗಲಿದೆ. ಏಪ್ರಿಲ್ ಮೊದಲ ದಿನದಿಂದಲೇ ಮದ್ಯದ ಬೆಲೆ ಹೆಚ್ಚಳವಾಗಬೇಕಿತ್ತು. ಆದ್ರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಬಂದ್ ಆಗಿದ್ದರಿಂದ ಬೆಲೆ ಏರಿಕೆಯಾಗಿರಲಿಲ್ಲ.
ಇವತ್ತು ಬಹುತೇಕ ಅಂಗಡಿಗಳಲ್ಲಿ ಹಳೆಯ ಸ್ಟಾಕ್ ಇರೋದರಿಂದ ಮೊದಲಿನ ಬೆಲೆಯಲ್ಲಿ ಎಣ್ಣೆ ಮಾರಾಟ ಮಾಡಲಾಗುತ್ತಿದೆ. ಹೊಸ ಸ್ಟಾಕ್ ಅಂಗಡಿಗಳಿಗೆ ಪ್ರವೇಶಿಸುತ್ತಿದ್ದಂತೆ ಬೆಲೆಯಲ್ಲಿ ಏರಿಕೆ ಆಗಲಿದೆ.
2020-21ಸಾಲಿಗೆ ಮದ್ಯದ ಎಲ್ಲ 18 ಘೋಷಿತ ಬೆಲೆಯ ಸ್ಲ್ಯಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ‘ಅನುಬಂಧ-ಅ’ರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇ.6ರಷ್ಟು ಹೆಚ್ಚಿಸಲಾಗುವುದು. ಈ ಬೆಲೆ ಹೆಚ್ಚಳದಿಂದ 2020-21ನೇ ವರ್ಷದಲ್ಲಿ 22,700 ಕೋಟಿ ರೂ. ರಾಜಸ್ವ ಸಂಗ್ರಹವಾಗಲಿದೆ ಅಂತ ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಬಜ್‍ಟ್ ಮಂಡನೆ ವೇಳೆ ಹೇಳಿದ್ದರು.