Breaking News

ವಾರದಲ್ಲಿ 3 ದಿನ ಮಾತ್ರ ಮದ್ಯ ಖರೀದಿ – ಹಾಸನ ಡಿಸಿ ಸ್ಪಷ್ಟನೆ……….

Spread the love

ಹಾಸನ: ಜಿಲ್ಲೆ ಗ್ರೀನ್‍ಝೋನ್‍ಗೆ ಸೇರಿದರೂ ಕೂಡ ವಾರದಲ್ಲಿ ಮೂರು ದಿನ ಮಾತ್ರ ಮದ್ಯ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಎಂದಿನಂತೆ ಲಾಕ್‍ಡೌನ್ ಮೇ 17ರವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿರುವ ಜಿಲ್ಲಾಧಿಕಾರಿ ಆರ್.ಗಿರೀಶ್, ಮಂಗಳವಾರ, ಗುರುವಾರ, ಶನಿವಾರ ಮಾತ್ರ ಹಾಸನದಲ್ಲಿ ಮದ್ಯ, ದಿನಸಿ ವಸ್ತು ಸೇರಿದಂತೆ ಇತರೆ ವಸ್ತು ಕೊಳ್ಳಲು ಅಂಗಡಿಗಳನ್ನು ತೆರೆಯಬಹುದು. ಉಳಿದ ದಿನಗಳು ಎಂದಿನಂತೆ ಲಾಕ್‍ಡೌನ್ ಮುಂದುವರಿಯಲಿದೆ. ಮೇ 17ರವರೆಗೆ ಹಾಸನದಲ್ಲಿ ನಿಷೇಧಾಜ್ಞೆ ಇರಲಿದ್ದು, ಹೀಗಾಗಿ ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ ಎಂದರು.

ಅಂತರ್ ಜಿಲ್ಲಾ ಪ್ರವೇಶವನ್ನು ಹಾಸನದಲ್ಲಿ ನಿಷೇಧಿಸಲಾಗಿದೆ. ಅನಿವಾರ್ಯತೆ ಇದ್ದವರು ಪಾಸ್ ಪಡೆದು ಓಡಾಡಬೇಕು. ಅಗತ್ಯಕ್ಕೆ ಅನುಗುಣವಾಗಿ ಜಿಲ್ಲೆಯೊಳಗೆ ಬಸ್ ಸಂಚಾರ ಇರಲಿದೆ. ಜನರು ಮಾಸ್ಕ್ ಧರಿಸದೆ ಹೊರಗೆ ಬರಬಾರದು. ಮದುವೆ ಸೇರಿದಂತೆ ಇನ್ನಿತರ ಸಮಾರಂಭದಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಯಾವುದೇ ನಿಯಮ ಮೀರಿದರೆ ದಂಡ ವಿಧಿಸಲಾಗುವುದು. ಲಾಡ್ಜ್, ಥಿಯೇಟರ್, ಪಾರ್ಕ್ ಎಂದಿನಂತೆ ಬಂದ್ ಆಗಿರಲಿವೆ ಎಂದು ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ನಾವೆಲ್ಲರು ಜೆಡಿಎಸ್​ ಪರ ಕೆಲಸ ಮಾಡ್ಬೇಕು: ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದ ಎ. ಮಂಜು

Spread the love ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಎ. ಮಂಜು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ