ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30 ಲಕ್ಷದ ಗಡಿ ದಾಟಿದೆ. ಶನಿವಾರ 69,239 ಮಂದಿಗೆ ಸೋಂಕು ತಗುಲಿದ್ದು, ಕೊರೊನಾ ತನ್ನೆಲ್ಲ ಹಿಂದಿನ ದಾಖಲೆಗಳ ಬ್ರೇಕ್ ಮಾಡಿದೆ. ಕಳೆದ 24 ಗಂಟೆಯಲ್ಲಿ ಕೊರೊನಾದಿಂದಾಗಿ ಒಟ್ಟು 912 ಜನರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 56,706ಕ್ಕೆ ಏರಿಕೆಯಾಗಿದೆ.
ಸದ್ಯ 7,07,668 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 30,44,941ಕ್ಕೆ ಏರಿಕೆಯಾಗಿದೆ. ಕೊರೊನಾದಿಂದ ಗುಣಮುಖ ಪ್ರಮಾಣ ಶೇ.74.89ರಷ್ಟಿದೆ. ಕಳೆದ 15 ದಿನದಲ್ಲಿಯೇ 20 ಲಕ್ಷ ಪ್ರಕರಣಗಳು ವರದಿಯಾಗಿವೆ. ಬ್ರೆಜಿಲ್ ಮತ್ತು ಅಮೆರಿಕಾದ ನಂತರದ ಸ್ಥಾನಲದಲ್ಲಿಯೇ ಭಾರತ ಇದೆ. ಆಗಸ್ಟ್ 22ರಂದು ಒಟ್ಟು 8,01,147 ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ.ಮಹಾರಾಷ್ಟ್ರ (6,71,942), ತಮಿಳುನಾಡು (3,73,410), ಆಂಧ್ರಪ್ರದೇಶ (3,45,216), ಕರ್ನಾಟಕ (2,71,876) ಮತ್ತು ಉತ್ತರ ಪ್ರದೇಶ (1,82,453) ರಾಜ್ಯಗಳು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಐದು ಸ್ಥಾನದಲ್ಲಿವೆ.