Breaking News

ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರಿಗೆ ಗಂಭೀರ ಗಾಯ: ಮಾನವೀಯತೆ ಮರೆತು ವಿಡಿಯೋ ಮಾಡಿದ ಜನ

Spread the love

ಯಾದಗಿರಿ ಜಿಲ್ಲೆ ಅಲ್ಲೀಪುರ ತಾಂಡಾದ ಬಳಿ ಬೈಕ್, ಟಿಪ್ಪರ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಗೂರು ಗ್ರಾಮದ ತಾಯಿ, ಮಗ, ಮಗಳು ಗಾಯಗೊಂಡು ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ. ಜನ ನೀರು ಕೊಡದೇ ಅಮಾನವೀಯವಾಗಿ ವರ್ತಿಸಿದ್ದಾರೆ. ಗಾಯಗೊಂಡವರು ನರಳಾಡುತ್ತಾ ಸಹಾಯಕ್ಕಾಗಿ ಗೋಗರೆದರೂ ನೆರವಾಗದೇ ವಿಡಿಯೋ ಮಾಡಿಕೊಂಡು ಅಮಾನವೀಯ ವರ್ತನೆ ತೋರಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಇದೇ ಮಾರ್ಗವಾಗಿ ಬರುವಾಗ ಗಾಯಾಳುಗಳನ್ನು ಗಮನಿಸಿದ್ದು ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿಪುರ ತಾಂಡಾದ ತಾಯಿ, ಮಗಳು, ಮಗ ಆಸ್ಪತ್ರೆಗೆ ಹೋಗುವಾಗ ಟಿಪ್ಪರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಯಾದಗಿರಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜನ ಮಾನವೀಯತೆಯನ್ನೇ ಮರೆತು ವರ್ತಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ! ಸ್ಥಳೀಯಾಡಳಿತ, ಪೊಲೀಸರೂ ಮೌನ

Spread the loveಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ