Breaking News

50 ಸಾವಿರ ರೂಪಾಯಿಯನ್ನು ಮರಳಿ ಮಹಿಳೆಗೆ ಹಿಂದಿರುಗಿಸಿ ರಿಕ್ಷಾ ಚಾಲಕ

Spread the love

ಉಡುಪಿ ; ಮಹಿಳೆಯೊಬ್ಬರು ರಿಕ್ಷಾದಲ್ಲಿ ಮರೆತು ಬಿಟ್ಟುಹೋದ 50 ಸಾವಿರ ರೂಪಾಯಿಯನ್ನು ಮರಳಿ ಮಹಿಳೆಗೆ ಹಿಂದಿರುಗಿಸಿ ರಿಕ್ಷಾ ಚಾಲಕ ಅಂಬಲಪಾಡಿಯ ಜಯ ಶೆಟ್ಟಿ ಅವರು ಮಾನವೀಯತೆ ಮೆರೆದಿದ್ದಾರೆ.

ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ ಬಂದಿದ್ದು, ರಿಕ್ಷಾದಿಂದ ಇಳಿಯುವಾಗ ಗಡಿಬಿಡಿಯಲ್ಲಿ 50ಸಾವಿರ ರೂಪಾಯಿ ಹಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು.

ಮಹಿಳೆಯನ್ನು ಬಸ್‍ಸ್ಟ್ಯಾಂಡಿನಲ್ಲಿ ಬಿಟ್ಟು ಉಡುಪಿಯ ಕಾರ್ತಿಕ್ ಎಸ್ಟೇಟ್ ಸಮೀಪದ ಆಟೋ ಸ್ಟ್ಯಾಂಡಿಗೆ ಮರಳಿದ್ದ ರಿಕ್ಷಾ ಚಾಲಕ ಜಯ ಶೆಟ್ಟಿ ಎಂಬವರು ಸೀಟ್‍ನಲ್ಲಿ ಪ್ಲಾಸ್ಟಿಕ್ ಇರುವುದನ್ನು ಗಮನಿಸಿದ್ದಾರೆ. ಏನೆಂದು ತೆರೆದಾಗ ಅದರಲ್ಲಿ 50ಸಾವಿರ ಹಣವಿದ್ದದ್ದು ಪತ್ತೆಯಾಗಿದೆ.

ಆ ಕೂಡಲೇ ಉಡುಪಿಯಿಂದ ಕಟಪಾಡಿಗೆ ಬಂದು ಕುರ್ಕಾಲಿನ ಮಹಿಳೆಯನ್ನು ಸಂಪರ್ಕಿಸಿದ ಜಯ ಶೆಟ್ಟಿಯವರು 50ಸಾವಿರ ರೂಪಾಯಿ ಹಣವನ್ನು ಮರಳಿಸುವ ಮೂಲಕ ಮಾನವೀಯತೆ ಮೆರೆದರು.

 

ಆಟೋ ರಿಕ್ಷಾ ಚಾಲಕರ ಮಾನವೀಯ ಗುಣವನ್ನು ಹಾಗೂ ಅವರು ಮಾಡಿದ ಉಪಕಾರವನ್ನು ಮಹಿಳೆ ಹಾಗೂ ಕಟಪಾಡಿಯ ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ. ಆಟೋರಿಕ್ಷಾ ಚಾಲಕ ಜಯ ಶೆಟ್ಟಿ ಅವರ ಈ ಕೆಲಸ ಇತರರಿಗೂ ಮಾದರಿಯಾಗಲಿ ಎಂಬುದೇ ಆಶಯ..

 


Spread the love

About Laxminews 24x7

Check Also

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ

Spread the loveಬೆಂಗಳೂರು : ಸಿಐಡಿ ಕರ್ನಾಟಕ, ಇನ್ಫೋಸಿಸ್ ಫೌಂಡೇಶನ್ ಆ್ಯಂಡ್ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‌ಸಿಐ) ದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ