ಉಡುಪಿ : ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯೊಬ್ಬನನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೊರೋನಾ ಸೋಂಕಿತರಾಗಿದ್ದ ಕಾರಣ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಕಳುಹಿಸಲಾಗಿತ್ತು. ಇಂತಹ ಶವವನ್ನು ಆಂಬುಲೆನ್ಸ್ ಮೂಲಕ ಕುಂದಾಪುರಕ್ಕೆ ಶವಸಂಸ್ಕಾರ ಮಾಡಲು ತರಲಾಗಿತ್ತು. ಶವವನ್ನು ಸ್ಮಾಶನದಲ್ಲಿ ತೆರೆದು ನೋಡಿದವರಿಗೆ ಅಲ್ಲಿ ಶಾಕ್ ಕಾದಿತ್ತು. ಅದೇ ಮೃತಪಟ್ಟ ವ್ಯಕ್ತಿಯೇ ಬೇರೆಯಾಗಿದ್ದರೇ, ತಂದಿದ್ದ ಶವವೇ ಬೇರೆಯವರದ್ದಾಗಿತ್ತು.
ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನೇರಂಬಳ್ಳಿ ಮೂಲದ 65 ವರ್ಷದ ವೃದ್ಧರೊಬ್ಬರು ಕೊರೋನಾದಿಂದ ಸಾವನ್ನಪ್ಪಿದ್ದರು. ಇಂತಹ ವ್ಯಕ್ತಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿದ್ದರು. ಇಂತಹ ಶವವನ್ನು ಆಂಬುಲೆನ್ಸ್ ಚಾಲಕ ಕುಂದಾಪುರದ ಹಳೇಕೋಟೆ ಸ್ಮಶಾನಕ್ಕೆ ತಂದಿದ್ದ.
ಕುಂದಾಪುರದ ಹಳೇಕೋಟೆಯ ಸ್ಮಾಶನದಲ್ಲಿ ಶವವನ್ನು ಬಿಚ್ಚಿ ನೋಡಿದಾಗ ಬೇರೆಯವರದ್ದಾಗಿತ್ತು. ಹೀಗಾಗಿ ನೇರಂಬಳ್ಳಿ ಮೂಲಕ 65 ವರ್ಷದ ವೃದ್ಧರ ಸಂಬಂಧಿಕರು ಆಂಬುಲೆನ್ಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಗಲಾಟೆ ಮಾಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.