ಬೆಂಗಳೂರು : ಟಿ.ಎಸ್.ನಾಗಾಭರಣ ಇಂದು 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸರ್ಕಾರಿ ನೌಕರಿಯಲ್ಲಿ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ನಿವೃತ್ತಿಯಾಗಬೇಕಿತ್ತು. ಆದರೆ ಸದಾ ಪಾದರಸದಂತಿರುವ ಇವರಿಗೆ ನಿವೃತ್ತಿಯೆಂಬುದೇ ಇಲ್ಲ. ಸಿನಿಮಾ, ನಾಟಕ, ಧಾರಾವಾಹಿಗಳ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೊಣೆಯನ್ನೂ ಹೊತ್ತಿರುವ ಇವರದ್ದು ಬಿಡುವಿಲ್ಲದ ದುಡಿಮೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಇವರಿಗೆ ಇಂದು ಕನ್ನಡ ಸಿನಿಮಾದ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ. ರಾಜಕೀಯ ರಂಗದ ದಿಗ್ಗಜರು ಹಾರೈಸಿದ್ದಾರೆ. ಜೊತೆಗೆ ಬಾಲಿವುಡ್ ಸೇರಿದಂತೆ ವಿವಿಧ ಭಾಷೆಯ ಚಿತ್ರರಂಗದ ಗಣ್ಯರು, ನಾಗಾಭರಣ ಸ್ನೇಹಿತರು, ವಿವಿಧ ರಂಗಕರ್ಮಿಗಳು ಶುಭಾಶಯ ತಿಳಿಸಿದ್ದಾರೆ.
Laxmi News 24×7