ರಾಯಚೂರು : ಇಂದಿನಿಂದ ರಾಜ್ಯದಲ್ಲಿ ಕಾಲೇಜುಗಳು ಮತ್ತೆ ತೆರೆದಿವೆ. ಆದರೆ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿಲ್ಲ.
ಕಾಲೇಜುಗಳು ಆರಂಭವಾದರೂ ವಿದ್ಯಾರ್ಥಿಗಳು ಕ್ಲಾಸ್ ಬಂದಿಲ್ಲ. ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಬ್ಬಳೇ ವಿದ್ಯಾರ್ಥಿನಿ ಆಗಮಿಸಿದ್ದು, ಆಕೆಗೆ ಉಪನ್ಯಾಸಕರು ಪಾಠ ಮಾಡಿದ್ದಾರೆ.
ಒಬ್ಬ ಬಿ.ಕಾಂ. ವಿದ್ಯಾರ್ಥಿನಿಗೆ ಶಿಕ್ಷಕರು ಪಾಠ ಮಾಡಿದ್ದಾರೆ. ಮಾಸ್ಕ್ ಹಾಕಿಕೊಂಡು ಕುಳಿತ ವಿದ್ಯಾರ್ಥಿನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಉಪನ್ಯಾಸಕರು ಸಹ ಮಾಸ್ಕ್ ಹಾಕಿಕೊಂಡು ಕೋವಿಡ್ ನಿಯಮ ಪಾಲಿಸಿ ಬೋಧನೆ ಮಾಡಿದ್ದಾರೆ.
ಈ ಕಾಲೇಜಿನಲ್ಲಿ ಒಟ್ಟು ಪದವಿ ಅಂತಿಮ ವರ್ಷದಲ್ಲಿ 1200 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
ಅದರೆ ಯಾರೂ ಬಾರದೇ ಒಬ್ಬಳೆ ವಿದ್ಯಾರ್ಥಿನಿ ಆಗಮಿಸಿದ್ದಾಳೆ.
ರಾಜ್ಯದ ಎಲ್ಲೆಡೆ ಕಾಲೇಜುಗಳು ತೆರೆದರೂ ಕೂಡ ಎಲ್ಲಿಯೂ ಕೂಡ ವಿದ್ಯಾರ್ಥಿಗಳು ಆಗಮಿಸಿಲ್ಲ. ಇನ್ನೂ ಕೊರೋನಾ ಮಹಾಮಾರಿ ಆತಂಕ ಜನರಲ್ಲಿ ಹೆಚ್ಚಾಗಿಯೇ ಇದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಗಮಿಸಿಲ್ಲ.