ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಕಿರಿಯ ಎಲ್ಲ NHM ಗುತ್ತಿಗೆ ಆಧಾರದ ಮೇಲೆ ಕಾರ್ಯ ಮಾಡುತ್ತಿರುವ ವರ್ಗದ ಸಿಬ್ಬಂದಿಗಳು ಹಾಗೂ ವೈದ್ಯರು ಸರಕಾರಕ್ಕೆ ತಮ್ಮ ಕೂಗು ನಿಲುಕಲಿ ಎಂದು.. ದಿನದ ಕರ್ತವ್ಯ ನಿಭಾಯಿಸುತ್ತಲೇ.. ಸಮವಸ್ತ್ರದಲ್ಲಿದ್ದೂ ರಟ್ಟೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಿ.. ಈ ಮೂಲಕ ಮನವಿ ಕೂಡ ಅರ್ಪಿಸಿದರು.
ಸಮಾನ ವೇತನ, ಸೇವಾಭದ್ರತೆ ಹಾಗೂ ಇನ್ನಿತರ ವಿಷಯಗಳನ್ನು ಇಟ್ಟುಕೊಂಡು.. ಈ ವಿಷಯಗಳ ಭಿತ್ತಿಚಿತ್ರ ಪ್ರದರ್ಶಿಸುತ್ತ ಸರಕಾರವನ್ನು ಎಚ್ಚರಿಸಿದರು. ಈ ಬಗ್ಗೆ NHM ವೈದ್ಯ ಸಿಬ್ಬಂದಿಯ ಶ್ರೀ ರಾಜು ಚವಾಣ್ ಮಾತನಾಡಿ ಬಹಳ ವರ್ಷಗಳಿಂದ ಈ ಮೂಲಭೂತ ಅನುಕೂಲತೆಗಾಗಿ ನಾವುಗಳು ಒಗ್ಗಟ್ಟಿನಿಂದ ಸರಕಾರಕ್ಕೆ ಬಾರಿ ಬಾರಿಗೆ ಮನವಿ ಮಾಡಿಕೊಂಡರೂ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದು ಮರೀಚಿಕೆಯಾಗಿಯೇ ಉಳಿದಿದೆ. ಕಾರಣ ಇನ್ನೂ ವಿಳಂಬ ಮಾಡದೇ ನಮ್ಮ ಪ್ರಮುಖ ಮೂಲಭೂತ ಈ ಬೇಡಿಕೆಗಳನ್ನು ಈಡೇರಿಸಲು ವಿನಂತಿಸಿಕೊಂಡಿದ್ದೇವೆ. ಆದರೇ ಇನ್ನೂ ಸರಕಾರ ಎಂದಿನ ವಿಳಂಬ ನೀತಿ ಅನುಸರಿಸಿದರೆ.. ಮುಂದಿನ ದಿನಗಳಲ್ಲಿ ಈ ಹೋರಾಟವು ಅತ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುವಲ್ಲಿ ಯಾವ ಸಂಶಯವೂ ಇಲ್ಲ.. ಎಂದು ಹೇಳಿದರು.. ಆದಷ್ಟು ಬೇಗ ಸರಕಾರವು ನಮ್ಮ ಬಗ್ಗೆ ಮಿಡಿಯಲಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡರು. ಸ್ಥಳೀಯ ಜನಪ್ರತಿನಿಧಿಗಳೂ ನಮ್ಮ ಈ ಕೂಗಿಗೆ ಓಗೊಟ್ಟು ಕಾರ್ಯ ಮಾಡಲು ಕೇಳಿಕೊಂಡರು.
Check Also
ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!
Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …