Breaking News

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಸುಮಾರು 11 ಲಕ್ಷ ರೂ. ಮೊತ್ತದಲ್ಲಿ, ನಿಪ್ಪಾಣಿಯ ಶ್ರೀ ವಿದ್ಯಾಮಂದಿರ ಶಾಲೆಯ ನೂತನ ಸಭಾಗೃಹ ನಿರ್ಮಾಣ ಕಾಮಗಾರಿ

Spread the love

ನಿಪ್ಪಾಣಿ :ಶೈಕ್ಷಣಿಕವಾಗಿ ಮಾತ್ರಲ್ಲ, ಶಿಕ್ಷಣೇತರ ಚಟುವಟಿಕೆಗಳೊಂದಿಗೆ ದೇಶದ ಭಾವೀ ಪ್ರಜೆಗಳ ಭವಿಷ್ಯ ಸಮೃದ್ಧಿ

ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದು ಬಾಲ್ಯದಲ್ಲಿಯೇ. ವಿದ್ಯಾರ್ಥಿಯಾಗಿರುವಾಗಲೇ ಉತ್ತಮ ಶಿಕ್ಷಣದೊಂದಿಗೆ, ಶಿಕ್ಷಣೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದಲ್ಲಿ, ಮಗುವಿಗೆ ಸುಂದರ ಭವಿಷ್ಯ ನೀಡಲು ಸಾಧ್ಯ. ದೇಶದ ಸದ್ಭವಿಷ್ಯದ ಭವಿಷ್ಯವನ್ನು ಅತ್ಯುತ್ತಮವಾಗಿ ರೂಪಿಸುವ ಇಚ್ಛೆ!

ಈ ನಿಟ್ಟಿನಲ್ಲಿ, ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಸುಮಾರು 11 ಲಕ್ಷ ರೂ. ಮೊತ್ತದಲ್ಲಿ, ನಿಪ್ಪಾಣಿಯ ಶ್ರೀ ವಿದ್ಯಾಮಂದಿರ ಶಾಲೆಯ ನೂತನ ಸಭಾಗೃಹ ನಿರ್ಮಾಣ ಕಾಮಗಾರಿಗಳಿಗೆ *ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ,* ಯವರು ಭೂಮಿಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೋಟಿವಾಲೆ, ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಪ್ರಣವ ಮಾನವಿ, ಎಪಿಎಂಸಿ ಅಧ್ಯಕ್ಷರಾದ ಶ್ರೀ ಅಮಿತ ಸಾಳವೆ, ವಿದ್ಯಾಮಂದಿರ ಶಾಲೆಯ ಅಧ್ಯಕ್ಷರಾದ ಶ್ರೀ ಪ್ರೇಮಚಂದ ಶಹಾ,ಉಪಾಧ್ಯಕ್ಷರಾದ ಶ್ರೀ ಅವಿನಾಶ ಮಾನವಿ, ಶ್ರೀ ನರೇಂದ್ರ ಶಹಾ,
ಶ್ರೀ ಅವಿನಾಶ್ ಮಾನವಿ, ಶ್ರೀಮತಿ ಮೇಘಾ ವಖಾರಿಯಾ, ಶ್ರೀ ಅಪ್ಪಾಸಾಹೇಬ ಖೋತ, ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದರು

 


Spread the love

About Laxminews 24x7

Check Also

ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ ಸಂಬಂಧವಿಲ್ಲ

Spread the loveಚಿಕ್ಕೋಡಿ: “ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ