ನಿಪ್ಪಾಣಿ: ನಿನ್ನೆ ಕೊಗನೊಳ್ಳಿ ಚೆಕ್ ಪೊಸ್ಟ್ ಗೆ ಭೇಟಿ ನೀಡಿದ ಕೆಪಿಪಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಎದುರು ಕಣ್ಣೀರು ಸುರಿಸಿದ ಹಾಸನದ ಮಹಿಳೆಗೆ ಕೊನೆಗೂ ಮನೆಗೆ ತೆರಳು ಅನುಮತಿಯನ್ನು ನೀಡಲಾಗಿದೆ.
ಕೊರೋನಾ ಹಿನ್ನೆಲೆ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮಹಾರಾಷ್ಟ್ರದಿಂದ ಹಾಸನಕ್ಕೆ ತೆರಳಲು ಅನುಮತಿ ಸಿಗದೆ ಇರದ ಕಾರಣ ಕೊಗನೊಳ್ಳಿ ಚೆಕ್ ಪೊಸ್ಟ್ ಸುಮಾರು ನಾಲ್ಕು ದಿನಗಳಿಂದ ಮಹಿಳೆ ಮತ್ತು ಅವರ 15 ಸದಸ್ಯರ ಕುಟುಂಬ ಪರದಾಡುತ್ತಿದ್ದರು. ಊಟ ಮತ್ತು ವಸತಿ ಸೌಲಭ್ಯ ಇಲ್ಲದೆ ಮಕ್ಕಳು ಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ಈ ಸಂದರ್ಭದಲ್ಲಿ ಕೊಗನೊಳ್ಳಿ ಚೆಕ್ ಪೊಸ್ಟ್ ಗೆ ಪರಿಶೀಲನೆಗೆ ಭೇಟಿ ನೀಡಿದ ಸತೀಶ ಜಾರಕಿಹೊಳಿ ಎದುರು ಕುಟುಂಬದ ಮಹಿಳೆಯರು ಅಳಲು ತೊಡಿಕೊಂಡು ಕಣ್ಣೀರು ಸುರಿಸಿದ್ದರು.
ಅವರ ಸ್ಥಿತಿಯನ್ನು ಗಮನಿಸಿದ ಶಾಸಕರೂ ಆದ ಸತೀಶ ಜಾರಕಿಹೊಳಿ ಅವರು ಶೀಘ್ರ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಗಮನಕ್ಕೆ ತಂದು ಅವರಿಗೆ ಹಾಸನಕ್ಕೆ ತೆರಳಲು ಕಾನೂನಿನ ಪ್ರಕಾರವೇ ಅನುಮತಿ ದೊರಕಿಸಿಕೊಟ್ಟರು.
ಶಾಸಕರ ಸ್ಪಂದನೆಗೆ ನಿಟ್ಟುಸಿರುಬಿಟ್ಟ ಹಾಸನದ ಕುಟುಂಬ ಅವರನ್ನು ಹೃದಯ ಪೂರಕವಾಗಿ ಅಭಿನಂದನೆ ಸಲ್ಲಿಸಿ ಹಾಸನತ್ತ ತೆರಳಿದರು.